ಕಾಲೇಜ್ ಕ್ಯಾಂಪಸ್ ಗೂ ಕಾಲಿಡಲಿದೆ ಜಿಯೋ: ವಿದ್ಯಾರ್ಥಿಗಳಿಗೆ ಉಚಿತ ವೈಫೈ

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ವೈಫೈ ನೀಡಲು ಜಿಯೋ ಮುಂದಾಗಿದೆ. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ದೇಶಾದ್ಯಂತ ದೂರವಾಣಿ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಈಗ ಕಾಲೇಜುಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ.

ಇತ್ತೀಚಿಗಷ್ಟೇ ಉಚಿತ ಫೋನ್ ಘೋಷಿಸಿದ ಬಳಿಕ ಭಾರತೀಯರಿಗೆ ಮತ್ತೊಂದು ಮೆಘಾ ಆಫರ್ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ವೈಫೈ ನೀಡಲು ಜಿಯೋ ಮುಂದಾಗಿದೆ. ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ವೇಳೆ ರಿಲಯನ್ಸ್ ಜಿಯೋದ ಈ ನೂತನ ಯೋಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ದೇಶಾದ್ಯಂತ 38 ಸಾವಿರ ಕಾಲೇಜುಗಳ 3 ಕೋಟಿ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸಿಗಲಿದೆ.

ಕಾಲೇಜ್ ಕ್ಯಾಂಪಸ್ ಗೂ ಕಾಲಿಡಲಿದೆ ಜಿಯೋ

ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರಯ ವಿವಿಗಳಿಗೆ ಉಚಿತ ವೈಫೈ ನೀಡವ ಯೋಜನೆಯಲ್ಲಿದ್ದು, ಜಿಯೋ ಮೂಲಕ ಅದು ಪೂರ್ಣವಾಗುವ ಸಾಧ್ಯತೆ ಇದೆ.

ಈ ಉಚಿತ ವೈ-ಫೈ ಮೂಲಕ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌‌ ಸೌಲಭ್ಯ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಇಂಟರ್‌ನೆಟ್‌‌ನಲ್ಲಿ ಪಡೆದುಕೊಳ್ಳಬಹುದು ಹಾಗೂ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಸ್ವಯಂ ಆನ್-ಲೈನ್‌ ಕೋರ್ಸ್‌‌ಗಳನ್ನು ಮಾಡಬಹುದು. ಇದಕ್ಕಾಗಿ ರಿಲಯನ್ಸ್ ಜಿಯೋ ಹಾಟ್‌‌ಸ್ಪಾಟ್‌ ರಚಿಸಲು ಪ್ಲ್ಯಾನ್ ಮಾಡಿದೆ ಎಂದು ತನ್ನ ಪ್ರಸ್ತಾಪದಲ್ಲಿ ರಿಲಯನ್ಸ್ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ.ಇದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ,ಇದರ ಪ್ರಧಾನ ಕಚೇರಿ ಮುಂಬೈನಲ್ಲಿ ಇದೆ. ಇದು ಭಾರತದ 22 ಟೆಲಿಕಾಮ್ ವಲಯಗಳಲ್ಲೂ 100℅ 4G LTE ನೆಟ್ವರ್ಕ್ ಸೇವೆ (2G / 3G ಆಧಾರಿತ ಸೇವೆಗಳು ಇಲ್ಲದೆ) ಸೇವೆ ಒದಗಿಸುತ್ತಿದೆ.ಜಿಯೋ ಬೀಠಾ ಆವೃತ್ತಿ ಡಿಸೆಂಬರ್ 27 2015 ರಂದು ಮೊದಲು Jio ನ ಸಹಭಾಗಿಗಳಿಗೆ ಮತ್ತು ನೌಕರರಿಗೆ ಸೇವೆಗಳನ್ನು ಪ್ರಾರಂಭಿಸಲಾಯಿತು. ವಾಣಿಜ್ಯ ಸೇವೆಗಳನ್ನು 5 ಸೆಪ್ಟೆಂಬರ್ 2016 ರಂದು ಪ್ರಾರಂಭಿಸಲಾಯಿತು.

For Quick Alerts
ALLOW NOTIFICATIONS  
For Daily Alerts

English summary
Reliance Jio expressed a desire to connect close to 38,000 colleges (technical and non-technical) under the HRD ministry across India by deploying free Wi-Fi connectivity.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X