ಆರ್‍ಪಿಎಫ್/ಆರ್‍ಪಿಎಸ್‍ಎಫ್ 2019 ನೇಮಕಾತಿ: 798 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Kavya L

ಭಾರತೀಯ ರೈಲ್ವೆ ಇಲಾಖೆಯು ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿಗೆ ಪ್ರರಕಟಣೆ ಹೊರಡಿಸಿದೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಮತ್ತು ರೈಲ್ವೆ ಪ್ರೊಟೆಕ್ಷನ್ ಸ್ಪೆಶಲ್ ಫೋರ್ಸ್‍ನಲ್ಲಿನ 2ನೇ ಹಂತದ ವಿವಿಧ ವಹಿವಾಟುಗಳಿಗಾಗಿ ಭಾರತೀಯ ನಾಗರಿಕರಿಂದ 798 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಉಪಖಂಡದಲ್ಲಿ ಹಲವಾರು ರೈಲ್ವೆ ವಲಯಗಳಲ್ಲಿ ನಿಯೋಜಿಸಲು ವಾಟರ್ ಕ್ಯಾರಿಯರ್, ಸಫೈವಾಲಾ, ವಾಶರ್‍ಮ್ಯಾನ್, ಬಾರ್ಬಲ್, ಗಾರ್ಡನರ್ (3ನೇ ಹಂತದ ಪೇ ಮ್ಯಾಟ್ರಿಕ್ಸ್) ಟೈಲರ್ ಮತ್ತು ಕಾಬ್ಲರ್ (2ನೇ ಹಂತದ ಪೇ ಮ್ಯಾಟ್ರಿಕ್ಸ್) ವಿವಿಧ ವಹಿವಾಟುಗಳನ್ನು ಒಳಗೊಂಡಿದೆ. ಹುದ್ದೆಗಳಿಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

 

 ಆರ್‍ಪಿಎಫ್/ಆರ್‍ಪಿಎಸ್‍ಎಫ್ 2019 ನೇಮಕಾತಿ: 798 ಕಾನ್ಸ್ಟೇಬಲ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

CRITERIA DETAILS
Name Of The Posts ಕಾನ್ಸ್ಟೇಬಲ್
Organisation ರೈಲ್ವೆ ಪ್ರೊಟೆಕ್ಷನ್ ಫೋರ್ಸ್/ರೈಲ್ವೆ ಪ್ರೊಟೆಕ್ಷನ್ ಸ್ಪೆಶಲ್ ಫೋರ್ಸ್
Educational Qualification ಎಸ್‍ಎಸ್‍ಎಲ್‍ಸಿ/ಮೆಟ್ರಿಕ್ಯುಲೇಶನ್
Skills Required ಫಿಸಿಕಲ್ ಫಿಟ್ನೆಸ್
Job Location ಭಾರತದೆಲ್ಲೆಡೆ
Salary Scale ಟ್ರೇಡ್‍ಗಳಿಗೆ(ವಾಟರ್ ಕ್ಯಾರಿಯರ್, ಸಫೈವಾಲಾ,ವಾಶರ್‍ಮೆನ್,ಬಾರ್ಬರ್ ಮತ್ತು ಗಾರ್ಡನರ್) ತಿಂಗಳಿಗೆ 21,700/- ರಿಂದ 69,100/- ರೂ ವೇತನ ಮತ್ತು ಟ್ರೇಡ್ಸ್ (ಟೈಲರ್ ಮತ್ತು ಕಾಬ್ಲರ್)ಗೆ ತಿಂಗಳಿಗೆ 19,9000/ ರಿಂದ 63,200/-ರೂ
Industry ಭಾರತೀಯ ರೈಲ್ವೆ
Application Start Date January 1, 2019
Application End Date January 30, 2019

ರೈಲ್ವೆ ವಲಯದ ವಿವಿಧ ಗುಂಪುಗಳಲ್ಲಿ ಲಭ್ಯವಿರುವ ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆಯ ವಿವರ

Names Of Trades

Number Of Posts
Constable (Water Carrier)452
Constable (Safaiwala)199
Constable (Washerman)49
Constable (Barber)49
Constable (Gardener/Mali)7
Tailor Gr. III20
Cobbler Gr. III22
Total798

ಅಭ್ಯರ್ಥಿಗಳು ಭಾರತೀಯ ರೈಲ್ವೆ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು, ಅರ್ಹತೆ ಮತ್ತು ಶುಲ್ಕದ ಬಗೆಗೆ ವಿವರ:

ಅಭ್ಯರ್ಥಿಗಳು 18 ರಿಂದ 25 ವಯಸ್ಸಿನ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಮತ್ತು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‍ಎಸ್‍ಎಲ್‍ಸಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯರಿಗೆ ಶುಲ್ಕ 500ರೂ ಮತ್ತು ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ಮಹಿಳೆ/ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶುಲ್ಕ 250ರೂ ಅನ್ನು ಆನ್‍ಲೈನ್(ನೆಟ್‍ಬ್ಯಾಂಕಿಂಗ್,ಡೆಬಿಟ್,ಕ್ರೆಡಿಟ್) ಅಥವಾ ಆಫ್‍ಲೈನ್ (ಎಸ್‍ಬಿಐ ಬ್ಯಾಂಕ್ ಚಲನ್) ಮೂಲಕ ಪಾವತಿಸಬಹುದು.

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪ್ರತಿಯೊಬ್ಬ ಅಭ್ಯರ್ಥಿಗಳೂ ರೈಲ್ವೆ ವಲಯದ ಗುಂಪಿನಡಿಯಲ್ಲಿ ಒಂದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶವಿರುತ್ತದೆ.

ಸಂಬಳದ ವಿವರ:

ವಿವಿಧ ಟ್ರೇಡ್ ಗಳಾದ ವಾಟರ್ ಕ್ಯಾರಿಯರ್ , ಸಫೈವಾಲಾ, ವಾಶರ್ ಮೆನ್ , ಬಾರ್ಬರ್ ಮತ್ತು ಗಾರ್ಡನರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ 3ನೇ ಹಂತದ ಸಂಬಳ ರೂ 21,700/- ರಿಂದ 69,100/- ವರೆಗೆ ಪಾವತಿಸಲಾಗುವುದು. ಆದರೆ ಟೈಲರ್ ಮತ್ತು ಕಾಬ್ಲರ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಟ್ರೇಡ್ ವಿಭಾಗದದಲ್ಲಿ 7 ನೇ ವೇತನ ಆಯೋಗದ 2 ನೇ ಹಂತದ ಪ್ರಕಾರ ರೂ 19,900/- ರಿಂದ ರೂ 63,200/- ವರೆಗೆ ಪಾವತಿಸಲಾಗುತ್ತದೆ.

ಆಯ್ಕೆ ವಿಧಾನ:

ಆರ್ ಪಿ ಎಫ್ / ಆರ್ ಪಿ ಎಸ್ ಎಫ್ ನ ವಿವಿಧ ಟ್ರೇಡ್ ಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ನಾಲ್ಕು ವಿವಿಧ ಪರೀಕ್ಷೆಗಳ ಮೂಲಕ ನಡೆಸಲಾಗುತ್ತದೆ. ಮೊದಲನೆಯದಾಗಿ ಕಂಪ್ಯೂಟರ್ ಬೇಸ್ಡ್ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಭೌತಿಕ ಮಾಪನ ಪರೀಕ್ಷೆ , ಟ್ರೇಡ್ ಪರೀಕ್ಷೆ ಕೊನೆಯದಾಗಿ ಡಾಕ್ಯುಮೆಂಟ್ ವೆರಿಫಿಕೇಶನ್ ಹಂತವನ್ನು ನಡೆಸಲಾಗುತ್ತದೆ.

ಶಾರೀರಿಕ ಮಾನದಂಡಗಳು:

Category
Height (in CMs) for MaleHeight (in CMs) for FemalesChest (In CMs) only for Male
GM/OBC16515780 Unexpanded/ 85 Expanded
SC/ST16015276.2 Unexpanded/81.2 Expanded
Gorkhas, Dogras, and other categories specified by Govt.16315580 Unexpanded/85 Expanded

ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಲು ಮತ್ತು ಇನ್ನಷ್ಟು ಮಾಹಿತಿ ಪಡೆಯಲು ಭಾರತೀಯ ಅಧಿಕೃತ ರೈಲ್ವೆ ವೆಬ್ ಸೈಟ್ ವಿಸಿಟ್ ಮಾಡಿ http://www.indianrailways.gov.in/ ಅಥವಾ ಇಲ್ಲಿ ಕ್ಲಿಕ್ ಮಾಡಿ

ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ವಿವರವಾದ ಪ್ರಕಟಣೆ ಮತ್ತು ಮಾಹಿತಿಯನ್ನು ವೀಕ್ಷಿಸಲು ಉದ್ಯೋಗ ಪತ್ರಕೆಯನ್ನು ವೀಕ್ಷಿಸಿ http://employmentnews.gov.in/NewEmp/Home.aspx. ಹುದ್ದೆಯ ಮಾಹಿತಿ ಮತ್ತು ಸ್ಪಷ್ಟೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Indian Railways has invited applications from Indian nationals (Male and Female) for recruitment of 798 Constables (Ancillary) in the Railway Protection Force (RPF) and Railway Protection Special Force (RPSF) for various Trades under Level 2 and 3 pay scale by 30 January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X