ರೈಲ್ವೇ ನೇಮಕಾತಿ ಬೋರ್ಡ್ ಇದೀಗ ಗ್ರೂಪ್ ಡಿ ಪರೀಕ್ಷೆಯ ಇ-ಕಾಲ್ ಲೆಟರ್ ರಿಲೀಸ್ ಮಾಡಿದೆ. ಇನ್ನು ಈ ಪರೀಕ್ಷೆಯು ಅಕ್ಟೋಬರ್ 22 ರಿಂದ 26 ರವರೆಗೆ ನಡೆಯಲಿದೆ. ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ, ಹೋಮ್ ಪೇಜ್ ನಲ್ಲಿ ಇರುವ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಿಜಿಸ್ಟ್ರೇಶನ್ ನಂಬರ್ ಎಂಟರ್ ಮಾಡಿ.ಬಳಿಕ ಜನ್ಮ ದಿನಾಂಕ ಹಾಗೂ ಇನ್ನಿತ್ತರ ಮಾಹಿತಿ ನೀಡಿ ಲಾಗಿನ್ ಆಗಿ. ಸ್ಕ್ರೀನ್ ಮೇಲೆ ನಿಮ್ಮ ಅಡ್ಮಿಟ್ ಕಾರ್ಡ್ ಮೂಡುತ್ತದೆ. ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವ ವೇಳೆ ನೆನಪಿನಲ್ಲಿ ತೆಗೆದುಕೊಂಡು ಹೋಗಿ.
ಇನ್ನು ಈ ಬಾರಿ ಹಬ್ಬವನ್ನ ಗಮನದಲ್ಲಿಟ್ಟುಕೊಂಡು ಪರೀಕ್ಷೆಯ ದಿನಾಂಕವನ್ನ ನಿಗಧಿಗೊಳಿಸಲಾಗಿದೆ. ಈ ಮೊದಲು ಪರೀಕ್ಷೆಯನ್ನ ಅಕ್ಟೋಬರ್ 17 ರಿಂದ 21 ರವರೆಗೆ ಎಂದು ನಿಗಧಿಗೊಳಸಿಲಾಗಿತ್ತು. ಆದ್ರೆ ಎಲ್ಲೆಡೆ ದಸರಾ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡುವುದರಿಂದ ಪರೀಕ್ಷೆಯನ್ನ ಅಕ್ಟೋಬರ್ 22 ರಿಂದ 26 ರವರೆಗೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications











