ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಜೂನಿಯರ್ ಎಂಜಿನಿಯರ್ (ಜೆಇ) ಹುದ್ದೆಗಳ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಫಲಿತಾಂಶವನ್ನು ಪರಿಶೀಲಿಸಬಹುದು. ಆರ್‌ಆರ್‌ಬಿ ಜೆಇ ಸಿಬಿಟಿ -2 ಪರೀಕ್ಷಾ ದಿನಾಂಕಗಳನ್ನು ಮಂಡಳಿಯು ಬಿಡುಗಡೆ ಮಾಡಿದ್ದು, ಪರೀಕ್ಷೆಯು ಆಗಸ್ಟ್ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಮಂಡಳಿಯು ಆರ್‌ಆರ್‌ಬಿ 2019 ರ ಜೆಇ ಕೀ-ಉತ್ತರ ಅನ್ನು ಬಿಡುಗಡೆ ಮಾಡಲಾಗಿದೆ. ನೇಮಕಾತಿ ಪರೀಕ್ಷೆಗಳನ್ನು ಮೇ 22 ರಿಂದ ಜೂನ್ 2 ರವರೆಗೆ ಮತ್ತು ಜೂನ್ 26 ರಿಂದ 28, 2019 ರವರೆಗೆ ನಡೆಸಲಾಗಿತ್ತು. ಒಟ್ಟು 13,487 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿತ್ತು. ಕಟ್-ಆಫ್ ಸೇರಿದಂತೆ ಸಂಪೂರ್ಣ ಆರ್‌ಆರ್‌ಬಿ ಜೆಇ ಫಲಿತಾಂಶ ನವೀಕರಣಗಳನ್ನು ಪರಿಶೀಲಿಸಿ.
ಆರ್‌ಆರ್‌ಬಿ ಜೆಇ ಫಲಿತಾಂಶ 2019 : ಪರಿಶೀಲಿಸುವುದು ಹೇಗೆ ?
ಹಂತ 1: ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ ಲಭ್ಯವಿರುವ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ಲಾಗಿನ್ ಆಗಿ.
ಹಂತ 4: ಪರದೆಯಲ್ಲಿ ಪ್ರದರ್ಶಿಸಲಾದ ಕ್ಯಾಪ್ಚಾವನ್ನು ನಮೂದಿಸಿ.
ಹಂತ 5: ಆರ್‌ಆರ್‌ಬಿ ಜೆಇ ಫಲಿತಾಂಶವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.
ಆರ್‌ಆರ್‌ಬಿ ಜೆಇ ಫಲಿತಾಂಶ 2019: ಫಲಿತಾಂಶದ ನಂತರ ಏನು?
ಅಭ್ಯರ್ಥಿಗಳು ಆರ್‌ಆರ್‌ಬಿ ಜೆಇ 2019ರ ಫಲಿತಾಂಶ ಪ್ರಕಟವಾದ ಬಳಿಕ ಒಂದು ಪ್ರಿಂಟೌಟ್ ತೆಗೆದಿಟ್ಟುಕೊಳ್ಳುವುದು ಒಳಿತು. ಸಿಬಿಟಿ -1 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಹಾಜರಾಗಲು ಅರ್ಹರು, ಅಂದರೆ ಸಿಬಿಟಿಯ 2 ನೇ ಹಂತದ ಪರೀಕ್ಷೆಗೆ ಹಾಜರಾಗಬಹುದು.
ಆರ್‌ಆರ್‌ಬಿ ಜೆಇ ಫಲಿತಾಂಶ 2019: ಅರ್ಹತಾ ಅಂಕಗಳು
ಸಾಮಾನ್ಯ - 40% ಅಂಕಗಳು
ಓಬಿಸಿ - 30% ಅಂಕಗಳು
ಪರಿಶಿಷ್ಟ ಜಾತಿ - 30% ಅಂಕಗಳು
ಪರಿಶಿಷ್ಟ ಪಂಗಡ - 25% ಅಂಕಗಳು
ಆರ್‌ಆರ್‌ಬಿ ಜೆಇ ಕಟ್-ಆಫ್ 2019:
ಆರ್‌ಆರ್‌ಬಿ ಜೆಇ ಸಿಬಿಟಿ ಕಟ್-ಆಫ್ ಸ್ಕೋರ್ ಸಾಮಾನ್ಯ ವಿಭಾಗಕ್ಕೆ 60 ರಿಂದ 70 ಅಂಕಗಳು ಮತ್ತು ಓಬಿಸಿ ವಿಭಾಗಕ್ಕೆ 55 ರಿಂದ 65 ಅಂಕಗಳು. ಪರಿಶಿಷ್ಟ ಜಾತಿಗೆ 45 ರಿಂದ 55 ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ರಿಂದ 50 ಆಗಿದೆ.


Click it and Unblock the Notifications