ದಿ ರೈಲ್ವೇ ನೇಮಕಾತಿ ಬೋರ್ಡ್ ದೀಪಾವಳಿ ಮುನ್ನ ಗ್ರೂಪ್ ಸಿ ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಶನ್ ಪರೀಕ್ಷೆ ೨೦೧೮ ರ ಫಲಿತಾಂಶ ರಿಲೀಸ್ ಮಾಡಲಿದೆ ಎಂದು ಇದೀಗ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರೂಪ್ ಸಿ ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಶನ್ ಪರೀಕ್ಷೆಯು ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯಾಗಿದ್ದು, ದೀಪಾವಳಿ ಹಬ್ಬಕ್ಕೂ ಮುಂಚೆ ಫಲಿತಾಂಶ ರಿಲೀಸ್ ಆಗಲಿದೆ. ಈಗಾಗಲೇ ಈ ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟಂಬರ್ 4, 2018 ರಂದು ಈ ಹುದ್ದೆಯ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 64.371 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇದರಲ್ಲಿ 27,795 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆ ಹಾಗೂ 36,576 ಇನ್ನಿತ್ತರ ಟೆಕ್ನಿಶನ್ ಹುದ್ದೆಗಳಾಗಿವೆ. ಒಮ್ಮೆ ಫಲಿತಾಂಶ ಪ್ರಕಟವಾದ ಕೂಡಳೇ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ನ ರೀಜಿನಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ
For Quick Alerts
For Daily Alerts
English summary
The Railway Recruitment Board will declare the group C Assistant Loco Pilot and Technician Examnination result very soon before Diwali. Group C Alp and technician result expected by the end of this month
Story first published: Wednesday, October 24, 2018, 14:34 [IST]


Click it and Unblock the Notifications











