ಸಂತೂರ್ ನಿಂದ ವಿದ್ಯಾರ್ಥಿಗಳಿಗೆ 24,000 ರೂ ಸ್ಕಾಲರ್ ಶಿಪ್... ಸೆ.15 ಕೊನೆಯ ದಿನಾಂಕ!

By Nishmitha

ವಿಪ್ರೋ ಕಂಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆಯು ಇದೀಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕೋಲರ್ ಶಿಪ್ ನೀಡಲು ಮುಂದಾಗಿದೆ. ಅದಕ್ಕಾಗಿ ಮೂರು ರಾಜ್ಯಗಳನ್ನ ಕೂಡಾ ಆಯ್ಕೆ ಮಾಡಿಕೊಂಡಿದೆ ಈ ಸಂಸ್ಥೆ. ಅವುಗಳು ಯಾವುವುವೆಂದರೆ ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ.

ಸಂತೂರ್ ನಿಂದ ವಿದ್ಯಾರ್ಥಿಗಳಿಗೆ 24,000 ರೂ ಸ್ಕಾಲರ್ ಶಿಪ್... ಸೆ.15 ಕೊನೆಯ ದಿನಾಂಕ!

ಇದನ್ನೂ ಕೂಡಾ ಓದಿ: ಹೆಚ್‌ಎಂಟಿಯಲ್ಲಿ ಖಾಲಿ ಹುದ್ದೆ... ಬಿಕಾಂ, ಎಂಬಿಎ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಮೂರು ರಾಜ್ಯಗಳ ಪದವಿ ಕಲಿಯುತ್ತಿರುವ ಒಟ್ಟು 900 ವಿದ್ಯಾರ್ಥಿಗಳಿಗೆ 3 ವರ್ಷ ಪ್ರತೀ ವಿದ್ಯಾರ್ಥಿಗೆ 24,000 ರೂ ಆಗಿ ಸಂತೂರ್ ವುಮೆನ್ಸ್ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಸಂತೂರ್ ವಿಪ್ರೋ ಸಂಸ್ಥೆಯ ಫೇಮಸ್ ಸೋಪ್ ಆಗಿದೆ.

ಈ ಮೊದಲು ಕೂಡಾ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್ ನೀಡಿದ್ದು, ಈಗಾಗಲೇ ಕಳೆದ 2 ವರ್ಷಗಳಿಂದ ಸುಮಾರು 1,800 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ ಸಂಸ್ಥೆ. ಇನ್ನು ವಿದ್ಯಾರ್ಥಿಗಳು ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬೇಕಾದ್ರೆ, ಆಫೀಶಿಯಲ್ ಸೈಟ್‌ಗೆ santoorscholarships.com ವಿಸಿಟ್ ಮಾಡಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 15 ಕೊನೆಯ ದಿನಾಂಕ.

ಇದನ್ನೂ ಕೂಡಾ ಓದಿ: ಅಭ್ಯುದಯ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 1: ಜಿ ಮೇಲ್. ಫೇಸ್‌ಬುಕ್ ಅಥವಾ ಯಾವುದೇ ಈ-ಮೇಲ್ ಐಡಿ ಮೂಲಕ ಆಫೀಶಿಯಲ್ ಸೈಟ್‌ಗೆ ಎಂಟ್ರಿಯಾಗಿ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 2: ಫಾರ್ಮ್ ನಲ್ಲಿ ಇರುವ 5 ಸ್ಟೆಪ್ ಗಳನ್ನ ಭರ್ತಿ ಮಾಡಿ
  • ಸ್ಟೆಪ್ 3: ವೈಯಕ್ತಿಯ ಮಾಹಿರಿ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅಗತ್ಯದ ಎಲ್ಲಾ ಮಾಹಿತಿಗಳನ್ನ ಭರ್ತಿ ಮಾಡಿ
  • ಸ್ಟೆಪ್ 4: ವಿದ್ಯಾರ್ಥಿಗಳು ನಿಮ್ಮ ಬಗ್ಗೆ ಹಾಗೂ ನಿಮ್ಮ ಮುಂದಿನ ಎಜ್ಯುಕೇಶನ್ ಬಗ್ಗೆ ಹಾಗೂ ಈ ಸ್ಕೋಲರ್ ಶಿಪ್ ನಿಂದ ನಿಮಗೆ ಹೇಗೆ ಸಹಾಯಕವಾಗುತ್ತದೆ ಎಂದು 600 ಪದಕ್ಕೂ ಮೀರದಂತೆ ಪ್ರಬಂಧ ಬರೆಯಬೇಕು
  • ಸ್ಟೆಪ್ 5: ಕೊನೆಯಲ್ಲಿ ಅರ್ಜಿಯನ್ನ ಸಬ್‌ಮಿಟ್ ಮಾಡಿ

ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

ಇದನ್ನೂ ಕೂಡಾ ಓದಿ: ಪ್ರತಿಷ್ಟಿತ ಕಂಪನಿಯಲ್ಲಿ ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

    English summary
    Santoor Women's Scholarship 2018 invites applications from young women who have completed the class 12 in the year 2017-18 and wish to pursue higher education. The scholarship aims to support the tuition and other incidental expenses related to education.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more