ಸಂತೂರ್ ನಿಂದ ವಿದ್ಯಾರ್ಥಿನಿಯರಿಗೆ 24,000 ರೂ ಸ್ಕಾಲರ್ ಶಿಪ್... ಆ.31 ಕೊನೆಯ ದಿನಾಂಕ!

ವಿಪ್ರೋ ಕಂಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆಯು ಇದೀಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕೋಲರ್ ಶಿಪ್ ನೀಡಲು ಮುಂದಾಗಿದೆ.

By Kavya

ವಿಪ್ರೋ ಕಂಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆಯು ಇದೀಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್‌ ಶಿಪ್ ನೀಡಲು ಮುಂದಾಗಿದೆ. ಅದಕ್ಕಾಗಿ ಮೂರು ರಾಜ್ಯಗಳನ್ನ ಕೂಡಾ ಆಯ್ಕೆ ಮಾಡಿಕೊಂಡಿದೆ ಈ ಸಂಸ್ಥೆ. ಅವುಗಳು ಯಾವುವುವೆಂದರೆ ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ.

ಸಂತೂರ್ ನಿಂದ ವಿದ್ಯಾರ್ಥಿಗಳಿಗೆ 24,000 ರೂ ಸ್ಕಾಲರ್ ಶಿಪ್... ಆ.31 ಕೊನೆಯ ದಿನಾಂಕ!

ಮೂರು ರಾಜ್ಯಗಳಲ್ಲಿ 2018-19ನೇ ಸಾಲಿನಲ್ಲಿ ಹತ್ತನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು 2019-20ನೇ ಸಾಲಿನಲ್ಲಿ ಪದವಿ ಕಲಿಕೆಯನ್ನು ಆರಂಭಿಸಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರು.

ಪದವಿ ಕಲಿಯುತ್ತಿರುವ ಒಟ್ಟು 900 ವಿದ್ಯಾರ್ಥಿಗಳಿಗೆ 3 ವರ್ಷ ಪ್ರತೀ ವಿದ್ಯಾರ್ಥಿಗೆ ವರ್ಷಕ್ಕೆ 24,000 ರೂ ರಷ್ಟಯ ಸಂತೂರ್ ವುಮೆನ್ಸ್ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಸಂತೂರ್ ವಿಪ್ರೋ ಸಂಸ್ಥೆಯ ಫೇಮಸ್ ಸೋಪ್ ಆಗಿದೆ.

ಈ ಮೊದಲು ಕೂಡಾ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್ ನೀಡಿದ್ದು, ಈಗಾಗಲೇ ಕಳೆದ 2 ವರ್ಷಗಳಿಂದ ಸುಮಾರು 1,800 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ ಸಂಸ್ಥೆ. ಇನ್ನು ವಿದ್ಯಾರ್ಥಿಗಳು ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬೇಕಾದ್ರೆ, ಆಫೀಶಿಯಲ್ ಸೈಟ್‌ಗೆ santoorscholarships.com ವಿಸಿಟ್ ಮಾಡಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 1: ಜಿ ಮೇಲ್. ಫೇಸ್‌ಬುಕ್ ಅಥವಾ ಯಾವುದೇ ಈ-ಮೇಲ್ ಐಡಿ ಮೂಲಕ ಆಫೀಶಿಯಲ್ ಸೈಟ್‌ಗೆ ಎಂಟ್ರಿಯಾಗಿ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 2: ಫಾರ್ಮ್ ನಲ್ಲಿ ಇರುವ 5 ಸ್ಟೆಪ್ ಗಳನ್ನ ಭರ್ತಿ ಮಾಡಿ
  • ಸ್ಟೆಪ್ 3: ವೈಯಕ್ತಿಯ ಮಾಹಿರಿ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅಗತ್ಯದ ಎಲ್ಲಾ ಮಾಹಿತಿಗಳನ್ನ ಭರ್ತಿ ಮಾಡಿ
  • ಸ್ಟೆಪ್ 4: ವಿದ್ಯಾರ್ಥಿಗಳು ನಿಮ್ಮ ಬಗ್ಗೆ ಹಾಗೂ ನಿಮ್ಮ ಮುಂದಿನ ಎಜ್ಯುಕೇಶನ್ ಬಗ್ಗೆ ಹಾಗೂ ಈ ಸ್ಕೋಲರ್ ಶಿಪ್ ನಿಂದ ನಿಮಗೆ ಹೇಗೆ ಸಹಾಯಕವಾಗುತ್ತದೆ ಎಂದು 600 ಪದಕ್ಕೂ ಮೀರದಂತೆ ಪ್ರಬಂಧ ಬರೆಯಬೇಕು
  • ಸ್ಟೆಪ್ 5: ಕೊನೆಯಲ್ಲಿ ಅರ್ಜಿಯನ್ನ ಸಬ್‌ಮಿಟ್ ಮಾಡಿ

ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಈ ಸ್ಕೋಲರ್ ಶಿಪ್ ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Santoor Women's Scholarship 2019 invites applications from young women who have completed the class 10 & 12 in the year 2017-18 and wish to pursue higher education. The scholarship aims to support the tuition and other incidental expenses related to education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X