ಎಸ್​ಎಟಿಎಸ್ ವಿದ್ಯಾರ್ಥಿಗಳ ನೋಂದಣಿ: ಬಯಲಾಯಿತು ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಳ್ಳು ಲೆಕ್ಕ

ವಿದ್ಯಾರ್ಥಿಗಳ ನೋಂದಣಿಗಾಗಿ ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಸ್ಟುಡೆಂಟ್ ಆಚೀವ್​ವೆುಂಟ್ ಟ್ರಾಕಿಂಗ್ ಸಿಸ್ಟಂ(ಎಸ್​ಎಟಿಎಸ್) ಮೂಲಕ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಶಾಲೆಗಳ ನಿರ್ಲಕ್ಷ್ಯ: ಸುಮಾರು 16 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅತಂತ್ರ

ಸರ್ಕಾರಿ ಸೌಲಭ್ಯ ಹಾಗೂ ಕಟ್ಟುನಿಟ್ಟಿನ ನಿಯಮಗಳಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳ ನೋಂದಣಿ ವಿಚಾರದಲ್ಲಿ ಅನುದಾನಿತ ಮತ್ತು ಖಾಸಗಿ ಶಾಲೆಗಳು ಸುಳ್ಳು ಲೆಕ್ಕ ತೋರಿಸಿ ಶಿಕ್ಷಣ ಇಲಾಖೆಯನ್ನು ವಂಚಿಸುತ್ತಿವೆ ಎಂಬ ಅಂಶ ಈಗ ಬಯಲಾಗಿದೆ.

ಬಯಲಾಯಿತು ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಳ್ಳು ಲೆಕ್ಕ

 

ಪರೀಕ್ಷೆಗೆ ನೋಂದಣಿಯಾಗುವ ವಿದ್ಯಾರ್ಥಿಗಳ ಬದಲಾಗಿ ಬೇರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆಯೆ ಎಂಬ ಅನುಮಾನ ಶಿಕ್ಷಣ ಇಲಾಖೆಯನ್ನು ಈಗ ಕಾಡುತ್ತಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಲು ಇಲಾಖೆ ಆಲೋಚಿಸಿದೆ.

ಎಸ್​ಎಟಿಎಸ್ ಮೂಲಕ 50 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳು ಸುಳ್ಳು ಹೆಸರುಗಳನ್ನು ನೀಡಿರುವುದು ಇಲಾಖೆಗೆ ಗೊತ್ತಾಗಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೇ ಬೇರೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯೇ ಬೇರೆ. ಹಲವಾರು ಕಾರಣಗಳಿಂದ ಗೈರು ಹಾಜರಾಗುತ್ತಾರೆಂದು ಭಾವಿಸಿದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೈರು ಹಾಜರಾಗುವರೇ ಎಂಬ ಅನುಮಾನ ಕಳೆದ ಮೂರು ವರ್ಷಗಳ ಅಂಕಿ-ಅಂಶ ನೋಡಿದರೆ ಗೊತ್ತಾಗುತ್ತದೆ.

2015ರಲ್ಲಿ ಎಸ್ಸೆಸ್ಸೆಲ್ಸಿಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 8.56 ಲಕ್ಷ. ಆದರೆ, ಪರೀಕ್ಷೆಗೆ ಹಾಜರಾದವರ ಸಂಖ್ಯೆ 8.37 ಲಕ್ಷ. ಗೈರು ಹಾಜರಾದವರ ಸಂಖ್ಯೆ 19 ಸಾವಿರ. ಇದು 2016ಕ್ಕೆ 90 ಸಾವಿರ ಮತ್ತು 2017ನೇ ಸಾಲಿಗೆ 1.12 ಲಕ್ಷಕ್ಕೆ ಏರಿಕೆಯಾಗಿದೆ.

ಸುಳ್ಳು ಮಾಹಿತಿಗೆ ಕಾರಣ

ಸರ್ಕಾರಿ ಅನುದಾನ ಪಡೆಯುವ ಮೂಲ ಉದ್ದೇಶದಿಂದ ಶಾಲೆಗಳು ಈ ರೀತಿಯ ತಪ್ಪು ಮಾಹಿತಿ ನೀಡಲು ಕಾರಣ ಎಂದು ಊಹಿಸಲಾಗಿದೆ.

ಸರ್ಕಾರ ಜಾರಿಗೆ ತರುವ ಹೊಸ ಯೋಜನೆಗಳು ಮತ್ತು ಅವುಗಳಿಗಾಗಿ ಬಿಡುಗಡೆಯಾಗುವ ಅನುದಾನಗಳು ನಿರ್ಧಾರವಾಗುವುದೇ ವಿದ್ಯಾರ್ಥಿಗಳ ಅಂಕಿ-ಅಂಶಗಳಿಂದ. ಹೀಗಾಗಿ ಶಾಲೆಗಳು ಅನುದಾನ ಪಡೆಯಲು ಈ ರೀತಿ ಸುಳ್ಳು ಅಂಕಿ-ಅಂಶ ನೀಡಿರಬಹುದೆಂಬ ಶಂಕೆಯಿದೆ.

ಅಂಕಿ-ಅಂಶಗಳು ಸುಳ್ಳು ಎಂದು ಈ ಹಿಂದೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಧ್ವನಿ ಎತ್ತಿದ್ದರು. ಸರ್ವ ಶಿಕ್ಷಣ ಅಭಿ ಯಾನ ಪ್ರತಿ ವರ್ಷ ರೂಪಿಸುವ ಜಿಲ್ಲಾ ಶೈಕ್ಷಣಿಕ ಮಾಹಿತಿಯ ದತ್ತಾಂಶ (ಡೈಸ್)ದಲ್ಲಿ ಅಂಕಿ-ಅಂಶಗಳನ್ನು ಹೆಚ್ಚು ತೋರಿಸಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಾರೆ ಎಂಬ ಆರೋಪ ಇತ್ತು. ಇದೀಗ ಅದಕ್ಕೆ ಜೀವ ಬಂದಂತಾಗಿದೆ.

 

ಇನ್ನು ಶಾಲೆಗಳ ಮಾನ್ಯತೆ ನವೀಕರಿಸಬೇಕಾದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಪ್ರವೇಶ ಪಡೆದಿರಬೇಕು ಎಂಬ ನಿಯಮವಿದೆ. ಇಲ್ಲವಾದರೆ ಅಂತಹ ವಿದ್ಯಾರ್ಥಿಗಳ ಮಾನ್ಯತೆ ನೀಡುವುದಿಲ್ಲ. ಬಹುತೇಕ ಶಾಲೆಗಳಲ್ಲಿ ಸಂಖ್ಯೆ ಕಡಿಮೆಯಿದೆ. ಮಾನ್ಯತೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಸುಳ್ಳು ಅಂಕಿ-ಅಂಶಗಳನ್ನು ಸೃಷ್ಟಿಸುತ್ತಾರೆ ಎಂಬ ಮಾಹಿತಿಯು ಲಭಿಸಿದೆ.

For Quick Alerts
ALLOW NOTIFICATIONS  
For Daily Alerts

English summary
Anxious information comes from the Student Achieve Vent Tracking System (SATS). It is now understood that aided and private schools are lying to the Department of Education in lieu of the registration of students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X