SBI Clerk Prelims Result : ಪ್ರಿಲಿಮಿನರಿ ಫಲಿತಾಂಶ ಮತ್ತು ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ ಹಾಗೂ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ಮುಂದಿನ ಹಂತಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಎಸ್‌ಬಿಐ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಫಲಿತಾಂಶ ಮತ್ತು ಮೈನ್ಸ್ ಪ್ರವೇಶ ಪತ್ರ ಪ್ರಕಟ

ಎಸ್‌ಬಿಐ ಒಟ್ಟು 5,121 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಮೇ 20,2021ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಪ್ರಥಮ ಹಂತದ ಪ್ರಿಲಿಮಿನರಿ ಪರೀಕ್ಷೆಯನ್ನು ಜುಲೈ 10 ಮತ್ತು 13 ರಂದು ಎರಡು ಅವಧಿಯಲ್ಲಿ 4 ನಗರಗಳನ್ನು ಹೊರತುಪಡಿಸಿ ನಡೆಸಲಾಗಿತ್ತು. ದನಂತರ ಉಳಿದಿದ್ದ ೪ ನಗರಗಳಲ್ಲಿ ಆಗಸ್ಟ್ 25, 28 ಮತ್ತು 29,2021ರಂದು ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಎಸ್‌ಬಿಐ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಫಲಿತಾಂಶ ಮತ್ತು ಮೈನ್ಸ್ ಪ್ರವೇಶ ಪತ್ರ ಪ್ರಕಟ

ಅಭ್ಯರ್ಥಿಗಳು ಪ್ರಿಲಿಮಿನರಿ ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ https://www.sbi.co.in/careers/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನ ಕೆಳಭಾಗದಲ್ಲಿ ಲಭ್ಯವಿರುವ ರಿಸಲ್ಟ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟಕ್ಕೆ ಹೋಗುವಿರಿ ಅಲ್ಲಿ ರಿಕ್ರುಟ್ಮೆಂಟ್ ಆಫ್ ಜ್ಯೂನಿಯರ್ ಅಸೋಸಿಯೇಟ್ಸ್ ನ ಮುಂದಿರುವ ಪ್ರಿಲಿಮಿನರಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
ಸ್ಟೆಪ್ 5: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಫಲಿತಾಂಶವನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಎಸ್‌ಬಿಐ ಕ್ಲರ್ಕ್ ಹುದ್ದೆಗಳ ಫಲಿತಾಂಶ ವೀಕ್ಷಿಸಿದ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಹತೆ ಪಡೆದಿದ್ದಲ್ಲಿ ಮುಖ್ಯ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಅಕ್ಟೋಬರ್ ನಲ್ಲಿ ಎಸ್‌ಬಿಐ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಎಸ್‌ಬಿಐ ಕ್ಲರ್ಕ್ ಹುದ್ದೆಗಳ ಪ್ರಿಲಿಮಿನರಿ ಫಲಿತಾಂಶ ಮತ್ತು ಮೈನ್ಸ್ ಪ್ರವೇಶ ಪತ್ರ ಪ್ರಕಟ

ಎಸ್‌ಬಿಐ ಪ್ರಮುಖ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:

ಸ್ಟೆಪ್ 1: ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ https://www.sbi.co.in/careers/ ಗೆ ಹೋಗಿ
ಸ್ಟೆಪ್ 2: ನಂತರ "SBI Clerks Mains Admit Card 202೧" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಇಲ್ಲಿ ನಿಮ್ಮ ರಿಜಿಸ್ಟ್ರೇಶನ್ ನಂ / ರೋಲ್ ನಂ ಮತ್ತು ಜನ್ಮ ದಿನಾಂಕ / ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 4: ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು.
ಸ್ಟೆಪ್ 5: ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್‌ ತೆಗೆದಿಟ್ಟುಕೊಳ್ಳಿ

ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗತಕ್ಕದ್ದು. ಈ ಪರೀಕ್ಷೆಯ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

ಪ್ರವೇಶ ಪತ್ರವನ್ನು ನೇರವಾಗಿ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
State bank of india released prelims exam result and mains admit card for clerk posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X