ಇಂದು ಪ್ರಕಟವಾಗಲಿದೆ ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮ್ ಫಲಿತಾಂಶ !

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ೨೦೧೮ ರ ಫಲಿತಾಂಶ ಇಂದು ಆಫೀಶಿಯಲ್ ಸೈಟ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ

ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ 2018 ರ ಫಲಿತಾಂಶ ಇಂದು ಆಫೀಶಿಯಲ್ ಸೈಟ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಂದು ಪ್ರಕಟವಾಗಲಿದೆ ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮ್ ಫಲಿತಾಂಶ !

ಈ ಮೊದಲು ನಿನ್ನೆ ಭಾನುವಾರ ಜುಲೈ 15, 2018ರಂದು ಎಸ್‌ಬಿಐ ಪಿಒ ಪ್ರಲಿಮ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವುದೆಂದು ಹೇಳಲಾಗಿತ್ತು. ಆದ್ರೆ ಇದು ವರೆಗೆ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದೀಗ ಇಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದ್ದು, ಎಸ್‌ಬಿಐ ತನ್ನ ಆಫೀಶಿಯಲ್ ಸೈಟ್‌ನಲ್ಲಿ sbi.co.in. ಫಲಿತಾಂಶ ಪ್ರಕಟಿಸಲಿದೆ.

ಯಾರೆಲ್ಲಾ ಈ ಪರೀಕ್ಷೆ ಬರೆದಿದ್ದೀರೋ ಎಲ್ಲಾ ವಿದ್ಯಾರ್ಥಿಗಳು ರಿಸಲ್ಟ್ ಚೆಕ್ ಮಾಡುವ ವೇಳೆ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ರೆಡಿಯಾಗಿಟ್ಟುಕೊಳ್ಳಬೇಕು. ಜುಲೈ 1, 7 ಮತ್ತು 8 ರಂದು ಎಸ್‌ಬಿಐ ಪಿಒ ಪ್ರಲಿಮ್ ಪರೀಕ್ಷೆ ನಡೆದಿತ್ತು.

ಎಸ್‌ಬಿಐ ಪಿಒ ಪ್ರಮುಖ ಪರೀಕ್ಷೆಯನ್ನ ಆಗಸ್ಟ್ 4 ರಂದು ನಿಗಧಿಗೊಳಿಸಲಾಗಿದೆ. ಜುಲೈ 20 ರಂದು ಪರೀಕ್ಷೆಯ ಪ್ರವೇಶ ಪತ್ರವನ್ನ ಆಫೀಶಿಯಲ್ ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು. ಹಾಗೂ ಈ ಪರೀಕ್ಷೆಯ ಫಲಿತಾಂಶ ಆಗಸ್ಟ್ 20, 2018 ರಂದು ಪ್ರಕಟವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರೊಬಷನರಿ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳ ಮೂರು ವಿಭಾಗಗಳ ಮೂಲಕ ನೇಮಕಮಾಡಲಾಗುತ್ತದೆ. ಅವುಗಳು ಯಾವುವು ಎಂದರೆ, ಪ್ರೆಲಿಮಿನರಿ ಪರೀಕ್ಷೆ, ಪ್ರಮುಖ ಪರೀಕ್ಷೆ ಮತ್ತು ಗ್ರೂಪ್ ಚರ್ಚೆ ಹಾಗೂ ಸಂದರ್ಶನ.

ಫಲಿತಾಂಶ ಚೆಕ್ ಮಾಡುವುದು ಹೇಗೆ:

  • ಸ್ಟೆಪ್ 1: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ
  • ಸ್ಟೆಪ್ 3: ಎಸ್‌ಬಿಐ ಪಿಒ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ
  • ಸ್ಟೆಪ್ 4: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ
  • ಸ್ಟೆಪ್ 5: ಫಲಿತಾಂಶ ಪ್ರಕಟವಾಗುವುದು
  • ಸ್ಟೆಪ್ 6: ಬಳಿಕ ಫಲಿತಾಂಶವನ್ನ ಡೌನ್‌ಲೋಡ್ ಮಾಡಿಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
Tha State Bank Of India Probationary Officers Preliminary Examination result is likely to released this week on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X