ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ಆನ್‌ಲೈನ್ ಪರೀಕ್ಷಾ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎಸ್‌ಬಿಐ ಒಟ್ಟು 477 ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 30,2019ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದು, ಇದೀಗ ಆನ್‌ಲೈನ್ ಪರೀಕ್ಷೆಯ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ.

ಎಸ್‌ಬಿಐ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳ ಆನ್‌ಲೈನ್ ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ :
ಸ್ಟೆಪ್ 1: ಅಭ್ಯರ್ಥಿಗಳು ಎಸ್‌ಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ https://www.sbi.co.in/careers/ ಗೆ ಹೋಗಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "Current Openings" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಭ್ಯರ್ಥಿಗಳು "Recruitment of Specialist Cadre Officer in SBI" ಕೆಳಗೆ ಇರುವ "Download Online Exam Call Letter" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ / ರೋಲ್ ನಂಬರ್ ಮತ್ತು ಪಾಸ್‌ವರ್ಡ್ / ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ
ಸ್ಟೆಪ್ 5: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಕಾಣಿಸುತ್ತದೆ ಅದನ್ನು ಸೇವ್ ಮಾಡಿ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.
ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ತರತಕ್ಕದ್ದು. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











