ಕೊರೋನಾ ಸೋಂಕು ದೇಶದೆಲ್ಲೆಡೆ ಹಬ್ಬಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾದರೆ ಎಂಬ ಆತಂಕ ಪೋಷಕರಲ್ಲಿ ಎದುರಾಗಿದೆ. ಈ ಸಂಬಂಧ ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಲಾಕ್ ಡೌನ್ ಅಂತ್ಯಗೊಂಡ ತಕ್ಷಣವೇ ಶಾಲಾ-ಕಾಲೇಜುಗಳನ್ನು ತೆರೆಯುವುದಿಲ್ಲ. ಈ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು ಎಂದು ಸಚಿವ ಸುರೇಶ್ ಕುಮಾರ್ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ. ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಅವರು ಟ್ಟಿಟ್ ಮಾಡಿರುತ್ತಾರೆ.
ಪೋಷಕರು, ವಿದ್ಯಾರ್ಥಿಗಳು ಕೊರೊನಾ ಸೋಂಕಿನ ಭೀತಿಗೆ ಒಳಗಾಗಬಾರದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವು ಮಾಹಿತಿಗಳು ಅಧಿಕೃತವಲ್ಲ ಎಂಬುದಾಗಿ ಅವರು ಸ್ಪಷ್ಟ ಪಡಿಸಿದ್ದಾರೆ.
For Quick Alerts
For Daily Alerts
English summary
Schools will not open soon even if lockdown ends said by minister s suresh kumar.
Story first published: Sunday, May 17, 2020, 12:54 [IST]


Click it and Unblock the Notifications











