ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ

ಅಮೆರಿಕಾದಲ್ಲಿ ಇತ್ತೀಚೆಗೆ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಹೆಚ್ಚುತ್ತಿರುವ ಅಪರಾಧಗಳ ಪರಿಣಾಮ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ಮೇಲು ಪ್ರಭಾವ ಬೀರಿದೆ.

ಅಮೆರಿಕಾದಲ್ಲಿ ಇತ್ತೀಚೆಗೆ ಆಗುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಹೆಚ್ಚುತ್ತಿರುವ ಅಪರಾಧಗಳ ಪರಿಣಾಮ ವಿಶ್ವವಿದ್ಯಾಲಯದ ಪ್ರವೇಶ ಪ್ರಕ್ರಿಯೆ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.

ಈ ಬಾರಿ ಅಮೆರಿಕ ವಿಶ್ವವಿದ್ಯಾಲಯಗಳ ಪ್ರವೇಶಾತಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಮುಖವಾಗಿರುವುದು ಸಂಶೋಧನೆಯೊಂದರಿಂದ ತಿಳಿದು ಬಂದಿದೆ.

ಅಮೆರಿಕದ ಆರು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಗುಂಪು ನಡೆಸಿರುವ ಅಧ್ಯಯನದಲ್ಲಿ ಈ ಮಾಹಿತಿ ದೊರೆತಿದ್ದು ಭಾರತೀಯರಲ್ಲಿ ಆತಂಕ ಸೃಷ್ಟಿಸಿದೆ. ಅಮೆರಿಕಾದ ಸುಮಾರು 250 ಕ್ಕೂ ಹೆಚ್ಚು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನಿಟ್ಟುಕೊಂಡು ನಡೆಸಿರುವ ಸಮೀಕ್ಷೆ ಪ್ರಕಾರ ಭಾರತದ ವಿದ್ಯಾರ್ಥಿಗಳ ನೋಂದಣಿಯಲ್ಲಿ ಈ ಬಾರಿ ಹೆಚ್ಚು ವ್ಯತ್ಯಾಸ ಕಂಡು ಬಂದಿದೆ. ಈಗ ನಡೆದಿರುವ ಸಮೀಕ್ಷೆಯಂತೆ ಶೇ.26 ರಷ್ಟು ಪದವಿ ಪೂರ್ವ ಶಿಕ್ಷಣ ಮತ್ತು ಶೇ.15 ರಷ್ಟು ಪದವಿ ಶಿಕ್ಷಣದಲ್ಲಿ ಇಳಿಕೆಯಾಗಿದೆ.

ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ

ಕೇವಲ ಭಾರತೀಯರು ಮಾತ್ರವಲ್ಲದೆ ಇತರ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲು ಭಾರೀ ಪ್ರಮಾಣದ ವ್ಯತ್ಯಾಸ ಕಂಡು ಬಂದಿದ್ದು, ವರದಿಯ ಪೂರ್ಣ ವಿವರವನ್ನು 'ಓಪನ್ ಡೋರ್ಸ್ 2016' ಈ ವಾರದ ನಂತರ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಪ್ರತಿ ಬಾರಿ ಭಾರತ ಮತ್ತು ಚೀನಾದಿಂದ ಶೇ.47 ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದವು. ಆದರೆ ಈ ಬಾರಿ ಚೀನಾ ವಿದ್ಯಾರ್ಥಿಗಳ ಸಂಖ್ಯೆ ಕೂಡ ಶೇ.25 ರಷ್ಟು ಕುಸಿತ ಕಂಡಿದೆ.

ಅಮೆರಿಕನ್ ಅಸೋಸಿಯೇಷನ್ ಆಫ್ ಕಾಲೇಜಿಯೇಟ್ ರಿಜಿಸ್ಟ್ರಾರ್ಸ್ ಅಂಡ್ ಅಡ್ಮಿಷನ್ಸ್ ಆಫೀಸರ್ಸ್, ದಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್, ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಎಜುಕೇಟರ್ಸ್, ದ ನ್ಯಾಷನಲ್ ಅಸೋಸಿಯೇಷನ್ ಫಾರ್ ಕಾಲೇಜ್ ಅಡ್ಮೀಷನ್ ಕೌನ್ಸೆಲಿಂಗ್ (ಎನ್ಎಸಿಎಸಿ) ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಕಾಲೇಜ್ ಅಡ್ಮೀಷನ್ ಕೌನ್ಸೆಲಿಂಗ್ (ಎಸಿಎಸಿ) ಸಹಯೋಗದೊಂದಿಗೆ ಸಮೀಕ್ಷೆಯನ್ನು ನಡೆಸಲಾಗಿದೆ.

ವಿದ್ಯಾರ್ಥಿಗಳ ಕುಸಿತಕ್ಕೆ ಇತರ ಕಾರಣಗಳು

ಈಗ ನಡೆಸಿರುವ ಸಮೀಕ್ಷೆಯಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಅದೇನೆಂದರೆ ಕೇವಲ ಅಮೆರಿಕದ ರಾಜಕೀಯ ನಿರ್ಧಾರಗಳು ಮಾತ್ರವಲ್ಲದೇ ಭಾರತದಲ್ಲಿ ನಡೆದ ನೋಟು ಅಮಾನ್ಯತೆ ಮತ್ತು ಡಾಲರ್ ವಿರುದ್ದ ರೂಪಾಯಿ ಮೌಲ್ಯದ ಏರಿಳಿತ ಕೂಡ ವಿಶ್ವವಿದ್ಯಾಲಯದ ಪ್ರವೇಶಾತಿಯಲ್ಲಿ ವ್ಯತ್ಯಾಸ ಕಂಡು ಬರಲು ಕಾರಣವಾಗಿದೆ. ಅಮೆರಿಕದ ನೂತನ ವೀಸಾ ನೀತಿ ಮತ್ತು ಇತ್ತೀಚೆಗೆ ಭಾರತೀಯರ ಮೇಲೆ ನಡೆದ ಹಲ್ಲೆಗಳು ಪ್ರಮುಖ ಕಾರಣವಾಗಿವೆ.

ಅಮೆರಿಕಗೆ ಬರುವ ಬಹುತೇಕ ಸ್ನಾತಕೋತ್ತರ ವಿದ್ಯಾರ್ಥಿಗಳು ಎಚ್-1ಬಿ ಪಡೆದು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ ಮೂಲಕ ಉದ್ಯೋಗ ಕಂಡುಕೊಳ್ಳುವ ಗುರಿಯನ್ನು ಹೊಂದಿರುತ್ತಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ (ಐಚ್ಛಿಕ ಪ್ರಾಯೋಗಿಕ ತರಬೇತಿ) ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಗಳು ತಮ್ಮ ಪದವಿಯ ನಂತರ ವಿದ್ಯಾರ್ಥಿ ವೀಸಾಗಳ ಮೂಲಕವೇ ಒಂದರಿಂದ ಮೂರು ವರ್ಷಗಳ ಕಾಲ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
US universities have registered a sharp decline in the number of applications from Indian students
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+