ಐಐಟಿ ಗೆ ಗುಡ್ ಬೈ ಹೇಳಿ ದೇಶ ಸೇವೆಗೆ ಜೈ ಎಂದ ಶಿವಾಂಶ್‌ ಜೋಷಿ

ಹದಿನೇಳರ ಹರೆಯದ ಶಿವಾಂಶ್‌ ಜೋಷಿ ಪ್ರತಿಷ್ಠಿತ ಐಐಟಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಅರ್ಹತೆ ಪಡೆದರೂ, ದೇಶಸೇವೆಗೋಸ್ಕರ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ.

ಐಐಟಿ ಸೇರಿ ದೊಡ್ಡ ಇಂಜಿನಿಯರ್ ಆಗಬೇಕೆಂಬುದು ಬಹುತೇಕ ಯುವಕರ ಕನಸಾಗಿರುತ್ತದೆ. ಆದರೆ ಇಲ್ಲೊಬ್ಬ ಪೋರ ಐಐಟಿ ಸೇರುವ ಅರ್ಹತೆ ಇದ್ದರು ಅದನ್ನ ತಳ್ಳಿ ಭಾರತೀಯ ಸೇನೆ ಸೇರಲು ಕಾತರನಾಗಿದ್ದಾನೆ.

ಉತ್ತರಾಖಂಡ ಮೂಲದ ಗ್ರಾಮಾಂತರ ಪ್ರದೇಶದ ಹದಿನೇಳರ ಹರೆಯದ ಶಿವಾಂಶ್‌ ಜೋಷಿ ಪ್ರತಿಷ್ಠಿತ ಐಐಟಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಅರ್ಹತೆ ಪಡೆದರೂ, ಅದನ್ನು ಬಿಟ್ಟು ದೇಶಸೇವೆಗೋಸ್ಕರ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದ್ದಾನೆ.

ಐಐಟಿ ಬಿಟ್ಟು ದೇಶ ಸೇವೆಗೆ ಜೈ ಎಂದ ಶಿವಾಂಶ್‌ ಜೋಷಿ

ಇಂಜಿನಿಯರಿಂಗ್ ಗಿಂತ ದೇಶ ಸೇವೆಯೇ ತನ್ನ ಆದರ್ಶ ಎಂದು ಸೇನೆಗೆ ಸೇರ್ಪಡೆಯಾಗಲು ಸಜ್ಜಾಗಿರುವ ಶಿವಾಂಶ್‌ ಜೋಷಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಸೇರಲು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಆದರೆ ಶಿವಾಂಶ್‌ ಜೋಷಿ ಐಐಟಿಗೆ ಹೋಗುವ ಬದಲಿಗೆ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆ ಬರೆಯುತ್ತೇನೆ ಎಂದಾಗ ಪೋಷಕರು, ಶಿಕ್ಷಕರು, ಬಂಧು, ಸ್ನೇಹಿತರಿಗೆಲ್ಲ ಅಚ್ಚರಿಯಾಗಿತ್ತು.

'' ಬಾಲ್ಯದಿಂದಲೇ ದೇಶ ಸೇವೆ ಮಾಡುವುದು ನನ್ನ ಉದ್ದೇಶವಾಗಿತ್ತು. ಉತ್ತರಾಖಂಡ್‌ನ ಯುವಜನತೆಯಲ್ಲಿ ದೇಶ ಸೇವೆ ರಕ್ತಗತವಾಗಿ ಬಂದಿದೆ. ನನ್ನ ಕನಸು ನನಸಾಗುತ್ತಿರುವುದಕ್ಕೆ ಸಂತಸವಾಗಿದೆ'' ಎಂದು ಶಿವಾಂಶ್‌ ಜೋಷಿ ಹೆಮ್ಮೆಯಿಂದ ಹೇಳುತ್ತಾನೆ

ನಾನು ಗತಕಾಲದಿಂದ ಕಲಿಯುತ್ತೇನೆ. ಅದರ ಆಧಾರದಲ್ಲಿ ಸುಭದ್ರ ಭವಿಷ್ಯ ಕಟ್ಟುತ್ತೇನೆ. ನಮಗೆ ಶ್ರೀಮಂತ ಪರಂಪರೆ ಇದೆ ಎನ್‌ಡಿಎಯಲ್ಲಿದ ತರಬೇತಿ ಅತ್ಯಂಥ ಕಠಿಣ ಇರುತ್ತದೆ ಎಂಬುದರ ಅರಿವು ನನಗಿದೆ. ಐಐಟಿ ನನಗೆ ಬಲು ಸುಲಭ. ಆದರೆ ನಾನು ಕಠಿಣ ಸವಾಲುಗಳಿರುವ ಬದುಕಿಗೆ ಸಿದ್ಧನಾಗಿದ್ದೇನೆ ಎನ್ನುವ ಶಿವಾಂಶ್‌ ಎನ್‌ಡಿಎ ಪರೀಕ್ಷೆಗೆ ಹಾಜರಾಗಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ.

ಶಿವಾಂಶ್‌ ಪ್ರತಿಭಾವಂತ ವಿದ್ಯಾರ್ಥಿ. ತಂದೆ ಸಂಜೀವ್‌ ಜೋಷಿ ಜೀವ ವಿಮಾ ನಿಗಮದದಲ್ಲಿ ಉದ್ಯೋಗಿ. ತಾಯಿ ತನುಜಾ ಜೋಷಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ. ಇಬ್ಬರಿಗೂ ತಮ್ಮ ಮಗ ಸೇನಾ ಸಮ ವಸ್ತ್ರ ಧರಿಸಲಿದ್ದಾನೆ ಎಂಬುದರ ಬಗ್ಗೆ ಅಪಾರ ಹೆಮ್ಮೆ ಇದೆ.

ಉತ್ತರಾಖಂಡ್‌ನ ರಾಮ್‌ನಗರ್‌ ಮೂಲದ, ಅಪ್ಪಟ ಮಧ್ಯಮ ವರ್ಗದ ಕುಟುಂಬವಿದು. ಚಿಕ್ಕಂದಿನಲ್ಲೇ ಶಿವಾಂಶ್‌ ಆಟ-ಪಾಠಗಳೆರಡರಲ್ಲೂ ಮುಂದಿದ್ದ. ಉತ್ತಮ ಅಂಕ ಗಳಿಸಬೇಕು ಎಂದು ಯಾವತ್ತೂ ಹಠಕ್ಕೆ ಬಿದ್ದಿರಲಿಲ್ಲ. ಸಹಜವಾಗಿಯೇ ಆಸಕ್ತಿಯಿಂದ ಓದಿ ಉತ್ತಮ ಅಂಕ ಪಡೆಯುತ್ತಿದ್ದ ಎನ್ನುತ್ತಾರೆ ಆತನ ತಂದೆ ಸಂಜೀವ್‌ ಜೋಷಿ.

More News  

For Quick Alerts
ALLOW NOTIFICATIONS  
For Daily Alerts

English summary
Shivansh Joshi, being selected for the prestigious Indian Institute of Technology, chose to serve the nation by joining the Indian Army.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+