
ಭಾರತೀಯ ಆಡಳಿತ ಸೇವೆಗಳ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ವಿದ್ಯಾರ್ಥಿವೇತನ ನೀಡುವುದಾಗಿ ಬಾಲಿವುಡ್ ನಟ ಸೋನು ಸೂದ್ ಘೋಷಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಡುವೆ ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಕೊಂಡಿರುವ ನಟ ಸೋನು ಸೂದ್ ಇದೀಗ ಐಎಎಸ್ ಆಕ್ಷಾಂಕ್ಷಿತರಿಗೆ ಪ್ರೋತ್ಸಾಹಿಸಲು ಮುಂದಾಗಿದ್ದಾರೆ. ದೆಹಲಿಯ ಯುವ ಸಂಘಟನೆಯ ದಿಯಾ ಹಾಗೂ ಸೋನು ಸೂದ್ ಒಟ್ಟಾಗಿ ಸಂಭವಂ ಎಂಬ ಯೋಜನೆಯೊಂದನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿಯಲ್ಲಿ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾತಿ ವಿದ್ಯಾರ್ಥಿವೇತನ ನೀಡುವುದಾಗಿ ನಟ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಸೌಲಭ್ಯ ಪಡೆಯಲು ಅಭ್ಯರ್ಥಿಗಳು www.SoodCharityFoundation.org ವೆಬ್‌ಸೈಟ್ ನಲ್ಲಿ ಜೂನ್ 30ರೊಳಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಸೋನು ಸೂದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
For Quick Alerts
For Daily Alerts
information education upsc scholarship ias coaching ಕೋಚಿಂಗ್ ಮಾಹಿತಿ ಐಎಎಸ್ ಶಿಕ್ಷಣ ಯುಪಿಎಸ್ಸಿ ವಿದ್ಯಾರ್ಥಿವೇತನ
English summary
Actor sonu sood announced free IAS coaching scholarship 2021 for aspiring candidates.


Click it and Unblock the Notifications