Sonu Sood IAS Scholarship : ಐಎಎಸ್ ಆಕಾಂಕ್ಷಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ನಟ

ಐಎಎಸ್ ಆಕಾಂಕ್ಷಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ನಟ ಸೋನು ಸೂದ್

ಕೊರೋನಾ ಬಂದ ನಂತರ ಲಾಕ್‌ಡೌನ್ ಸಮಯದಿಂದ ಹಿಡಿದು ಇಲ್ಲಿಯವರೆಗೂ ನಟ ಸೋನು ಸೂದ್ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ನೆರವಿಗೆ ಬಂದಿದ್ದಾರೆ. ಈಗ ಅಂಥದ್ದೇ ಮತ್ತೊಂದು ಉತ್ತಮ ಕಾರ್ಯಕ್ಕೆ ಹೆಸರಾಗಿದ್ದಾರೆ. ಅದೇನೆಂದರೆ ಐಎಎಸ್ ಆಕಾಂಕ್ಷಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದಾರೆ.

 

ಅಕ್ಟೋಬರ್ 13ಕ್ಕೆ ಸೋನು ಸೂದ್ ಅವರ ತಾಯಿ ತೀರಿಕೊಂಡು 13 ವರ್ಷಗಳಾಗಿವೆ. ಹಾಗಾಗಿ ಅವರ ನೆನಪಿನಲ್ಲಿ ಅವರ ಕನಸ್ಸನ್ನು ಈಡೇರಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಟ ಸೋನು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಗುರಿ ತಲುಪಲು ಸಹಾಯವಾಗುತ್ತದೆ ಎಂದು ನಂಬಿದ್ದೇನೆ ಹಾಗೂ ನನ್ನ ತಾಯಿಯ ಆಶಿರ್ವಾದ ನನಗೆ ಸಿಗಬಹುದು ಎಂದಿದ್ದಾರೆ.

ಈ ಯೋಜನೆಯಂತೆ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತ ಕಾರ್ಯಕ್ರಮದಡಿಯಲ್ಲಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಕ್ಯಾಂಪಸ್ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗಲಿದೆ.

For Quick Alerts
ALLOW NOTIFICATIONS  
For Daily Alerts

English summary
Sonu sood launches scholarship programme for ias aspirants in memory of his late mother.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X