ಸಿಬ್ಬಂದಿ ನೇಮಕಾತಿ ಆಯೋಗದ ಸಿಜಿಎಲ್ ಹುದ್ದೆಗಳ ಟೈಯರ್ II ಪರೀಕ್ಷೆಯ ತಾತ್ಕಾಲಿಕ ಕೀ-ಉತ್ತರ ರಿಲೀಸ್

ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)ವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಎಚ್‌ಎಸ್‌ಎಲ್‌) ಹುದ್ದೆಗಳ ಟೈಯರ್ II ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೀ ಉತ್ತರವನ್ನು ಚೆಕ್‌ ಮಾಡಿಕೊಳ್ಳಬಹುದು.

ಪರೀಕ್ಷಾ ತಾತ್ಕಾಲಿಕ ಕೀ-ಉತ್ತರ ಬಿಡುಗಡೆ

 

ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 5,2018 ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯೋಗವು ಭಾರತದೆಲ್ಲೆಡೆ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 14,2019ರ ವರೆಗೆ ಟೈಯರ್ II ಪರೀಕ್ಷೆಯನ್ನು ನಡೆಸಿದ್ದು, ತಾತ್ಕಾಲಿಕ ಕೀ-ಉತ್ತರವನ್ನು ಬಿಡುಗಡೆ ಮಾಡಲಾಗಿದೆ.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವಿಷಯವಾರು ಪ್ರಶ್ನೆಪತ್ರಿಕೆ ಮತ್ತು ಅದಕ್ಕೆ ಸಂಬಂಧಿಸಿದ ತಾತ್ಕಾಲಿಕ ಸರಿ ಉತ್ತರಗಳನ್ನು ಮಾಸ್ಟರ್ ಪ್ರಶ್ನೆ ಪತ್ರಿಕೆಯೊಂದಿಗೆ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಾತ್ಕಾಲಿಕ ಸರಿ ಉತ್ತರಗಳನ್ನು ತಮ್ಮ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಸಂಖ್ಯೆಗೆ ಅನುಗುಣವಾಗಿ ಪರಿಶೀಲಿಸಲು ಸೂಚಿಸಿದೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 26,2019ರ ಸಂಜೆ 5 ಗಂಟೆಯೊಳಗೆ ನಿಮ್ಮ ಆಕ್ಷೇಪಣೆಯನ್ನು ನೀಡಲಾಗಿರುವ ಲಿಂಕ್ ಮೂಲಕ ಸಲ್ಲಿಸಬಹುದು.

ಕೀ ಉತ್ತರಗಳನ್ನು ಪಡೆಯುವ ವಿಧಾನ:

ಸ್ಟೆಪ್ 1: ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೂಟ್ https://ssc.nic.in/ ಗೆ ಭೇಟಿ ನೀಡಿ

ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಲಭ್ಯವಿರುವ "Tentative Answer keys of CGL examination" ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಸ್ಟೆಪ್ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕೀ ಉತ್ತರಗಳು ಮತ್ತು ರೆಸ್ಪಾನ್ಸ್‌ ಪ್ರತಿಯಿರುವ ಲಿಂಕ್‌ ಸಿಗುತ್ತದೆ.

ಸ್ಟೆಪ್ 4: ನಂತರ Click Here ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಸ್ಟೆಪ್ 5: ಅಭ್ಯರ್ಥಿಗಳು ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ

 

ಸ್ಟೆಪ್ 6: ನಂತರ ಕೀ-ಉತ್ತರ ಡೌನ್‌ಲೋಡ್ ಮಾಡಲು ಕೀ-ಉತ್ತರ ಮತ್ತು ರೆಸ್ಪಾನ್ಸ್ ಶೀಟ್‌ನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 26,2019ರೊಳಗೆ ಸಲ್ಲಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
SSC CGL recruitment 2019 released tier II tentative answer key on official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more