SSC CGL 2026 ಟೈಯರ್ 1 ಪರೀಕ್ಷೆ: ಇಂದಿನ ಪ್ರಶ್ನೆಗಳ ಮಟ್ಟ ಹೇಗಿತ್ತು? ಗುಡ್ ಅಟೆಂಪ್ಟ್ಸ್ ಮತ್ತು ಕಟ್-ಆಫ್ ಅಂದಾಜು ಇಲ್ಲಿದೆ

ಎಸ್‌ಎಸ್‌ಸಿ ಸಿಜಿಎಲ್ (SSC CGL 2026) ಟೈಯರ್ 1 ಪರೀಕ್ಷೆ ಇಂದು (ಅಕ್ಟೋಬರ್ 9, ಶುಕ್ರವಾರ) ಯಶಸ್ವಿಯಾಗಿ ಆರಂಭಗೊಂಡಿದೆ. ಒಟ್ಟು ಮೂರು ಶಿಫ್ಟ್‌ಗಳಲ್ಲಿ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆ ನಡೆಯುತ್ತಿದ್ದು, ಲಕ್ಷಾಂತರ ಅಭ್ಯರ್ಥಿಗಳು ತುಸು ಆತಂಕ, ಭಾರಿ ಸಿದ್ಧತೆಯೊಂದಿಗೆ ಪರೀಕ್ಷಾ ಕೇಂದ್ರ ತಲುಪಿದ್ದರು. ಇಂದಿನ ಪರೀಕ್ಷೆಯ ಪ್ರಶ್ನೆಗಳ ಕಠಿಣತೆಯ ಮಟ್ಟ, ಅಭ್ಯರ್ಥಿಗಳ ಫೀಡ್‌ಬ್ಯಾಕ್, ಮೆಮೊರಿ ಬೇಸ್ಡ್ ಪ್ರಶ್ನೆಗಳು ಹಾಗೂ 'ಗುಡ್ ಅಟೆಂಪ್ಟ್ಸ್' ಕುರಿತ ಕಂಪ್ಲೀಟ್ ವಿಶ್ಲೇಷಣೆ ಇಲ್ಲಿದೆ. ಮುಂದಿನ ಶಿಫ್ಟ್‌ ಬರೆಯುವವರಿಗೆ ಇದು ಅತ್ಯಂತ ಉಪಯುಕ್ತ ಮಾಹಿತಿ.

ಪರೀಕ್ಷೆಯು ಬೆಳಗಿನ, ಮಧ್ಯಾಹ್ನದ ಮತ್ತು ಸಂಜೆಯ ಶಿಫ್ಟ್‌ಗಳಲ್ಲಿ ಯಥಾಪ್ರಕಾರ ಜರುಗಿದೆ. ಪ್ರತಿಯೊಂದು ಶಿಫ್ಟ್ ಆರಂಭವಾಗುವ 30 ನಿಮಿಷಕ್ಕೂ ಮೊದಲೇ ಪರೀಕ್ಷಾ ಕೇಂದ್ರದ ಗೇಟ್‌ಗಳನ್ನು ಮುಚ್ಚಲಾಗುತ್ತಿತ್ತು. ಬಯೋಮೆಟ್ರಿಕ್ ತಪಾಸಣೆ ಮತ್ತು ಬಿಗಿಯಾದ ಪರಿಶೀಲನೆಯ ನಂತರವೇ ಅಭ್ಯರ್ಥಿಗಳನ್ನು ಒಳಗೆ ಬಿಡಲಾಯಿತು. ಒರಿಜಿನಲ್ ಐಡಿ ಕಾರ್ಡ್, ಅಡ್ಮಿಟ್ ಕಾರ್ಡ್ ಹಾಗೂ ಎರಡು ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕಿತ್ತು. ವಾಚ್ ಹಾಗೂ ಮೆಟಾಲಿಕ್ ವಸ್ತುಗಳಿಗೆ ಅವಕಾಶವಿರಲಿಲ್ಲ. ಪರೀಕ್ಷಾ ಹಾಲ್‌ನಲ್ಲಿ ರಫ್ ಶೀಟ್ ನೀಡಲಾಗಿದ್ದು, ಸಿಸ್ಟಮ್ ಲಾಗಿನ್ ಮಾಡುವ ಮುನ್ನ ಅಟೆಂಡೆನ್ಸ್ ಗೆ ಸೈನ್ ಮಾಡಿಸಿಕೊಂಡರು.

SSC CGL 2026: ಇಂದಿನ ಪರೀಕ್ಷಾ ವಿಶ್ಲೇಷಣೆ ಮತ್ತು ಕಟ್-ಆಫ್

SSC CGL 2026 ಟೈಯರ್ 1: ಶಿಫ್ಟ್‌ವೈಸ್ ಕಠಿಣತೆಯ ಮಟ್ಟ ಮತ್ತು ಗುಡ್ ಅಟೆಂಪ್ಟ್ಸ್

ಪರೀಕ್ಷೆ ಬರೆದ ಅಭ್ಯರ್ಥಿಗಳ ಮೊದಲ ಪ್ರತಿಕ್ರಿಯೆಯಂತೆ, ಪ್ರಶ್ನೆಪತ್ರಿಕೆಯು ಒಟ್ಟಾರೆಯಾಗಿ 'ಮಾಡರೇಟ್' (ಮಧ್ಯಮ) ಆಗಿತ್ತು. ಇಂಗ್ಲಿಷ್ ವಿಭಾಗ ತುಸು ಟ್ರಿಕಿಯಾಗಿದ್ದರೆ, ಆಪ್ಟಿಟ್ಯೂಡ್‌ (Quant) ವಿಭಾಗದ ಅರಿಥ್‌ಮೆಟಿಕ್ ಮತ್ತು ಡೇಟಾ ಇಂಟರ್‌ಪ್ರಿಟೇಷನ್‌ ಪ್ರಶ್ನೆಗಳು ಕ್ಯುಲ್ಕುಲೇಟಿವ್ ಆಗಿದ್ದವು. ಇನ್ನು ರೀಸನಿಂಗ್ ವಿಭಾಗವು ಸುಲಭದಿಂದ ಮಧ್ಯಮ ಮಟ್ಟದಲ್ಲಿತ್ತು. ಉತ್ತಮ ನಿಖರತೆಯೊಂದಿಗೆ (Accuracy) ಸರಾಸರಿ 70ರಿಂದ 78 ಪ್ರಶ್ನೆಗಳಿಗೆ ಉತ್ತರಿಸಿದ್ದರೆ ಅದು ಸೇಫ್ ಅಟೆಂಪ್ಟ್ ಎನಿಸಿಕೊಳ್ಳಲಿದೆ.

ಶಿಫ್ಟ್ಒಟ್ಟಾರೆ ಕಠಿಣತೆಸೇಫ್‌/ಗುಡ್‌ ಅಟೆಂಪ್ಟ್ಸ್
Shift 1Moderate72–78
Shift 2Moderate70–76
Shift 3Moderate68–74

SSC CGL 2026 ಮೆಮೊರಿ ಬೇಸ್ಡ್ ಪ್ರಶ್ನೆಗಳು ಮತ್ತು ಜಿಎ (GA) ಪ್ರಮುಖ ಟಾಪಿಕ್ಸ್

ಜನರಲ್ ಅವೇರ್‌ನೆಸ್ (GA) ಭಾಗದಲ್ಲಿ ಸಂವಿಧಾನದ ವಿಧಿಗಳು, ಮೂಲಭೂತ ಹಕ್ಕುಗಳು, ಹಣಕಾಸು ಆಯೋಗ ಮತ್ತು ಪ್ರಮುಖ ಸರ್ಕಾರಿ ಯೋಜನೆಗಳ ಕುರಿತು ಹೆಚ್ಚು ಪ್ರಶ್ನೆಗಳು ಬಂದಿದ್ದವು. ರಾಷ್ಟ್ರೀಯ ಉದ್ಯಾನವನಗಳು, ನದಿಗಳು, ಜಾನಪದ ನೃತ್ಯಗಳು ಹಾಗೂ ಇತ್ತೀಚಿನ ನೇಮಕಾತಿಗಳ ಕುರಿತೂ ಕೇಳಲಾಗಿತ್ತು. ಮೂಲ ವಿಜ್ಞಾನದಲ್ಲಿ SI ಯುನಿಟ್‌ಗಳು, ವಿಟಮಿನ್‌ಗಳು ಮತ್ತು ಬಾಹ್ಯಾಕಾಶ ಯೋಜನೆಗಳ ಮೇಲಿನ ಪ್ರಶ್ನೆಗಳಿದ್ದವು. ಆಪ್ಟಿಟ್ಯೂಡ್‌ನಲ್ಲಿ ಟೈಮ್ & ವರ್ಕ್, ಶೇಕಡಾವಾರು, ಅನುಪಾತ ಮತ್ತು ಪೈ-ಚಾರ್ಟ್ ಆಧಾರಿತ ಡಿಐ ಪಶ್ನೆಗಳಿದ್ದರೆ, ಇಂಗ್ಲಿಷ್‌ನಲ್ಲಿ ಕ್ಲೋಸ್ ಟೆಸ್ಟ್, ವೊಕ್ಯಾಬುಲರಿ ಮತ್ತು ಎರರ್ ಸ್ಪಾಟಿಂಗ್ ಪರೀಕ್ಷಿಸಲಾಯಿತು.

SSC CGL 2026 ನಾರ್ಮಲೈಜೇಶನ್ ಮತ್ತು ನಿರೀಕ್ಷಿತ ಕಟ್ ಆಫ್ ವಿವರ

ಬೇರೆ ಬೇರೆ ಶಿಫ್ಟ್‌ಗಳ ಪ್ರಶ್ನೆಪತ್ರಿಕೆಗಳ ಕಠಿಣತೆಯಲ್ಲಿ ವ್ಯತ್ಯಾಸವಿರುವುದರಿಂದ ಅಂಕಗಳನ್ನು ನಾರ್ಮಲೈಜೇಶನ್ ಮಾಡಲಾಗುತ್ತದೆ. ಯಾವುದಾದರೂ ಒಂದು ಶಿಫ್ಟ್ ಕಠಿಣವೆನಿಸಿದರೆ ನಾರ್ಮಲೈಜೇಶನ್‌ನಲ್ಲಿ ಅಂಕಗಳು ವ್ಯತ್ಯಾಸವಾಗಲಿವೆ. ಇಂದಿನ ಪರೀಕ್ಷೆಯ ಮಟ್ಟ ಹಾಗೂ ಹಿಂದಿನ ವರ್ಷಗಳ ಟ್ರೆಂಡ್ ಗಮನಿಸಿದರೆ, ನಿರೀಕ್ಷಿತ ಕಟ್-ಆಫ್ ಹೀಗಿರಬಹುದು: UR 130–140, OBC 124–134, EWS 122–132, SC 110–120 ಮತ್ತು ST 100–110. ಅಧಿಕೃತ ಆನ್ಸರ್ ಕೀ ಬರುವವರೆಗೆ ಇದನ್ನು ತಾತ್ಕಾಲಿಕ ಅಂದಾಜು ಎಂದು ಪರಿಗಣಿಸಬಹುದು.

SSC CGL 2026 ಮುಂದಿನ ಶಿಫ್ಟ್ ಪರೀಕ್ಷೆ ಬರೆಯುವವರಿಗೆ ಕೊನೆ ಕ್ಷಣದ ಟಿಪ್ಸ್

ಪರೀಕ್ಷಾ ಹಾಲ್‌ಗೆ ಹೋಗುವ ಮುನ್ನ ಸಮಯ ನಿರ್ವಹಣೆಯ ಸ್ಪಷ್ಟ ಪ್ಲಾನ್ ಇರಲಿ. ಮೊದಲು ರೀಸನಿಂಗ್, ನಂತರ ಇಂಗ್ಲಿಷ್, ಆಮೇಲೆ ಆಪ್ಟಿಟ್ಯೂಡ್ (Quant) ಮತ್ತು ಕೊನೆಯಲ್ಲಿ ಜಿಎ (GA) ಬರೆಯುವುದು ಉತ್ತಮ ತಂತ್ರ. ಪ್ರತಿಯೊಂದು ವಿಭಾಗಕ್ಕೂ ನಿರ್ದಿಷ್ಟ ಸಮಯ ನಿಗದಿಪಡಿಸಿ, ನಿಖರತೆ (Accuracy) ಶೇ. 85ಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಿ. ಕಠಿಣ ಅಥವಾ ಸಮಯ ತಿನ್ನುವ ಪ್ರಶ್ನೆಗಳನ್ನು ತಕ್ಷಣ ಸ್ಕಿಪ್ ಮಾಡಿ, ಸುಲಭದ ಪ್ರಶ್ನೆಗಳನ್ನು ಮೊದಲು ಬಿಡಿಸಿ. ಆಪ್ಟಿಟ್ಯೂಡ್‌ನಲ್ಲಿ ಸುಲಭದ ಅರಿಥ್‌ಮೆಟಿಕ್ ಪ್ರಶ್ನೆಗಳಿಂದಲೇ ಶುರುಮಾಡಿ. ಕಂಪ್ಯೂಟರ್ ಪರದೆಯ ಮೇಲಿರುವ ಸಮಯ ಮತ್ತು ಮಾರ್ಗದರ್ಶಿ ಸೂಚಿಗಳನ್ನು ಗಮನಿಸುತ್ತಿರಿ.

ಇಂದಿನ ಪರೀಕ್ಷೆ ಮುಗಿದ ನಂತರ ರಿಲ್ಯಾಕ್ಸ್ ಆಗಿ, ನಿಮ್ಮ ಉತ್ತರಗಳನ್ನು ಪರಿಶೀಲಿಸಿ. ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನಿಗದಿತ ಡಾಕ್ಯುಮೆಂಟ್‌ಗಳನ್ನು ಸಿದ್ಧವಿಟ್ಟುಕೊಳ್ಳಿ. ಸರಿಯಾದ ನಿದ್ರೆ ಮತ್ತು ಸಕಾರಾತ್ಮಕ ಮನೋಭಾವ ಅತ್ಯಗತ್ಯ. ನಿಮ್ಮ ಸಿದ್ಧತೆಯ ಮೇಲೆ ನಂಬಿಕೆಯಿರಲಿ. ಏಕೆಂದರೆ, ನಾರ್ಮಲೈಜೇಶನ್ ಪ್ರಕ್ರಿಯೆಯಲ್ಲಿ ಸರಿ ಉತ್ತರ ಹಾಗೂ ಕನ್ಸಿಸ್ಟೆನ್ಸಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.

For Quick Alerts
ALLOW NOTIFICATIONS  
For Daily Alerts

--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+