SSC CGL Tier 1 2021 Result : ಎಸ್‌ಎಸ್‌ಸಿ ಸಿಜಿಎಲ್ ಟಯರ್ 1 ಫಲಿತಾಂಶ ವೀಕ್ಷಿಸುವುದು ಹೇಗೆ ?

ಸಿಬ್ಬಂದಿ ನೇಮಕಾತಿ ಆಯೋಗದ ನೇಮಕಾತಿಯ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಟಯರ್ 1 ಪರೀಕ್ಷೆಯ ಫಲಿತಾಂಶ ಮತ್ತು ಕಟ್‌ ಆಫ್ ಅಂಕಗಳನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಅಧಿಕೃತ ವೆಬ್ಸೈಟ್ ನಲ್ಲಿ ಪರೀಕ್ಷಾ ಫಲಿತಾಂಶವನ್ನು ಮತ್ತು ಕಟ್ ಆಫ್ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು.

 
ಎಸ್‌ಎಸ್‌ಸಿ ಸಿಜಿಎಲ್ ಟಯರ್ 1 ಪರೀಕ್ಷಾ ಫಲಿತಾಂಶ ರಿಲೀಸ್

ಪರೀಕ್ಷೆ ನಡೆದ ದಿನಾಂಕ:

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಆಯೋಜಿಸಿದ್ದ ಕಂಬೈನ್ಡ್ ಗ್ರ್ಯಾಜುಯೆಟ್ ಲೆವೆಲ್ (ಸಿಜಿಎಲ್) ಟಯರ್ 1 ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಆಗಸ್ಟ್ 13 ರಿಂದ ಅಗಸ್ಟ್ 24,2021ರ ವರೆಗೆ ನಡೆದಿತ್ತು.

ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ:

ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆಗೆ ಜನವರಿ 31,2021ರ ರಾತ್ರಿ 11:30ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 2,2021ರ ವರೆಗೆ ಅವಕಾಶ ನೀಡಲಾಗಿತ್ತು.

ಆಯ್ಕೆ ವಿಧಾನ:

ಎಸ್‌ಎಸ್‌ಸಿ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಟಯರ್ 1, ಟಯರ್ 2 ಮತ್ತು ಟಯರ್ 3 ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ನಾಲ್ಕನೇ ಶ್ರೇಣಿಯಲ್ಲಿ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಫಲಿತಾಂಶ ಮತ್ತು ಕಟ್ ಆಫ್ ಅಂಕ ವೀಕ್ಷಿಸುವ ವಿಧಾನ:

ಸ್ಟೆಪ್ 1: ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "Declaration of Combined Graduate Level Examination (Tier-I), 2020" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಪಿಡಿಎಫ್ ಪುಟ ತೆರೆಯಲಿದೆ ಅಲ್ಲಿ ಉತ್ತೀರ್ಣರಾದವರ ಪಟ್ಟಿಯನ್ನು ನೀಡಲಾಗಿರುತ್ತದೆ
ಸ್ಟೆಪ್ 4: ಅಥವಾ ಅಭ್ಯರ್ಥಿಗಳು ಹೋಂ ಪೇಜ್ ನಲ್ಲಿ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅಭ್ಯರ್ಥಿಗಳು ಸಿಜಿಎಲ್ ಟ್ಯಾಬ್ ನಲ್ಲಿ ಲೀಸ್ಟ್ 1, ಲೀಸ್ಟ್ 2 ಮತ್ತು ಲೀಸ್ಟ್ 3 ಅನ್ನು ಆಯ್ಕೆ ಮಾಡಿ
ಸ್ಟೆಪ್ 6: ಅಭ್ಯರ್ಥಿಗಳು ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

 

ಫಲಿತಾಂಶವನ್ನು ವೀಕ್ಷಿಸಿದ ಬಳಿಕ ಅಭ್ಯರ್ಥಿಗಳು ಕಟ್ ಆಫ್ ಅಂಕಗಳನ್ನು ಕೂಡ ವೀಕ್ಷಿಸಬಹುದು.

ಎಸ್‌ಎಸ್‌ಸಿ ಸಿಜಿಎಲ್ ಟಯರ್-1 ಪರೀಕ್ಷೆಯ ಫಲಿತಾಂಶ ಪಡೆದ ನಂತರ ಮುಂದೇನು ?:

ಟಯರ್-1 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಟಯರ್ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಟಯರ್ 2 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜನವರಿ 28 ಮತ್ತು 29,2022 ರಂದು ನಡೆಯಲಿದೆ. ಟಯರ್ 2 ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷೆಗೆ 3 ರಿಂದ 7 ದಿನಗಳ ಮುಂಚಿತವಾಗಿಯೇ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವುದು.

For Quick Alerts
ALLOW NOTIFICATIONS  
For Daily Alerts

English summary
SSC CGL tier 1 exam result and cut off marks released in official website. Here is how to download.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X