SSC CGL Tier II Tentative Answer Key 2020 : ಎಸ್‌ಎಸ್‌ಸಿ ಸಿಜಿಎಲ್ ಟಯರ್ 2 ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)ವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಎಚ್‌ಎಸ್‌ಎಲ್‌) ಹುದ್ದೆಗಳ ಟಯರ್ II ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೀ ಉತ್ತರವನ್ನು ಚೆಕ್‌ ಮಾಡಿಕೊಳ್ಳಬಹುದು.

ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷಾ ತಾತ್ಕಾಲಿಕ ಕೀ-ಉತ್ತರ ಬಿಡುಗಡೆ

ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಜನವರಿ 31,2021ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯೋಗವು ಭಾರತದೆಲ್ಲೆಡೆ ಜನವರಿ 28, 29, 2022 ರಂದು ಟಯರ್ II ಪರೀಕ್ಷೆಯನ್ನು ನಡೆಸಿದ್ದು, ತಾತ್ಕಾಲಿಕ ಕೀ-ಉತ್ತರವನ್ನು ಬಿಡುಗಡೆ ಮಾಡಲಾಗಿದೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ15, 2022 ರ ಸಂಜೆ 06 ಗಂಟೆವರೆಗೆ ಆಕ್ಷೇಪಣೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವಿಷಯವಾರು ಪ್ರಶ್ನೆಪತ್ರಿಕೆ ಮತ್ತು ಅದಕ್ಕೆ ಸಂಬಂಧಿಸಿದ ತಾತ್ಕಾಲಿಕ ಸರಿ ಉತ್ತರಗಳನ್ನು ಮಾಸ್ಟರ್ ಪ್ರಶ್ನೆ ಪತ್ರಿಕೆಯೊಂದಿಗೆ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಾತ್ಕಾಲಿಕ ಸರಿ ಉತ್ತರಗಳನ್ನು ತಮ್ಮ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆ ಸಂಖ್ಯೆಗೆ ಅನುಗುಣವಾಗಿ ಪರಿಶೀಲಿಸಲು ಸೂಚಿಸಿದೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಪ್ರತಿ ಸರಿಯುತ್ತರಕ್ಕೆ Rs.100 ಪಾವತಿಸಿ ಫೆಬ್ರವರಿ 15,2022ರ ಸಂಜೆ 5 ಗಂಟೆಯೊಳಗೆ ನಿಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದು.

ಕೀ ಉತ್ತರಗಳನ್ನು ಪಡೆಯುವ ವಿಧಾನ:

ಸ್ಟೆಪ್ 1: ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೂಟ್ https://ssc.nic.in/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಲಭ್ಯವಿರುವ "Tentative Answer keys of CGL examination 2020" ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
ಸ್ಟೆಪ್ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕೀ ಉತ್ತರಗಳು ಮತ್ತು ರೆಸ್ಪಾನ್ಸ್‌ ಪ್ರತಿಯಿರುವ ಲಿಂಕ್‌ ಸಿಗುತ್ತದೆ.
ಸ್ಟೆಪ್ 4: ನಂತರ Click Here ಎಂಬ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
ಸ್ಟೆಪ್ 5: ಅಭ್ಯರ್ಥಿಗಳು ನಿಮ್ಮ ರೋಲ್ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 6: ನಂತರ ಕೀ-ಉತ್ತರ ಡೌನ್‌ಲೋಡ್ ಮಾಡಲು ಕೀ-ಉತ್ತರ ಮತ್ತು ರೆಸ್ಪಾನ್ಸ್ ಶೀಟ್‌ನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿ ನಂತರ ಅಂತಿಮ ಸರಿಯುತ್ತರ ಪ್ರಕಟಿಸಲಾಗುತ್ತದೆ. ನಂತರ ಈ ಸರಿಯುತ್ತರಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
SSC CGL tier II tentative answer key 2020 released on official website. Candidates can raise objections before February 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X