ರಾಜ್ಯದ 10 ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್

Posted By:

ಕರ್ನಾಟಕ ಸರ್ಕಾರ ರಾಜ್ಯದ 14 ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆ. ಎಂಬಿಬಿಎಸ್ ನಂತರ ಎಂಡಿ, ಎಂಎಸ್‌ಗೆ ಸಮನಾದ ಕೋರ್ಸ್ ಇದಾಗಿದೆ.

ಐಐಇ ಮತ್ತು ವೃತ್ತಿಪರ ತಂತ್ರಜ್ಞಾನ ಸಂಸ್ಥೆಗಳ ಪ್ರಮಾಣ ಪತ್ರಕ್ಕೆ ಎಐಸಿಟಿಇ ಗ್ರೀನ್ ಸಿಗ್ನಲ್

ಕೇಂದ್ರ ಸರ್ಕಾರ ರಾಜ್ಯದ 10 ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಡಿಪ್ಲೊಮೆಟ್‌ ಆಫ್‌ ನ್ಯಾಷನಲ್‌ ಬೋರ್ಡ್‌ (ಡಿಎನ್‌ಬಿ) ಕೋರ್ಸ್ ಆರಂಭಿಸಲು ಒಪ್ಪಿಗೆ ನೀಡಿದೆ. 2018ರ ಜನವರಿಯಿಂದ ವಿವಿಧ ಜಿಲ್ಲೆಗಳಲ್ಲಿ ಕೋರ್ಸ್ ಪ್ರಾರಂಭಿಸಲಾಗುತ್ತದೆ.

ಹಣವಿಲ್ಲದೆ ಸೊರಗಿದ 2 ರೂ. ಪ್ರೋತ್ಸಾಹ ಧನ ಯೋಜನೆ

ರಾಜ್ಯದ 14 ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್

ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ತಜ್ಞ ವೈದ್ಯರ ಕೊರತೆ ನಿವಾರಿಸಲು ಹಾಲಿ ಸೇವಾ ನಿರತ ವೈದ್ಯರಿಗೇ ಉನ್ನತ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ 10 ಜಿಲ್ಲಾಸ್ಪತ್ರೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಡಿಎನ್‌ಬಿ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ ಈ ಕೋರ್ಸ್ ಆರಂಭಿಸಲಾಗಿದೆ. ಎಂಬಿಬಿಎಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಕೋರ್ಸಿಗೆ ಸೇರಬಹುದಾಗಿದ್ದು, ಪ್ರತಿ ವಿದ್ಯಾರ್ಥಿಗೆ ಮಾಸಿಕ 35 ಸಾವಿರ ಸ್ಟೈ ಫಂಡ್ ಸಿಗಲಿದೆ.

ಎಂಬಿಬಿಎಸ್ ನಂತರ ಎಂಡಿ, ಎಂಎಸ್‌ಗೆ ಸಮನಾದ ಕೋರ್ಸ್ ಇದಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ಕೋರ್ಸ್‌ ಅನ್ನು ಈಗಾಗಲೇ ಆರಂಭಿಸಿದೆ.

ಧಾರವಾಡ, ವಿಜಯಪುರ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಕೋಲಾರ, ತುಮಕೂರು, ಕಲಬುರಗಿ ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಈ ಕೋರ್ಸ್ ಆರಂಭಿಸಲಾಗುತ್ತದೆ. 2018ರ ಜನವರಿಯಿಂದ ಕೋರ್ಸ್ ಆರಂಭಗೊಳ್ಳಲಿದೆ.

English summary
Karnataka government has decided to start Diplomate of National Board (DNB) course in 14 hospitals in the state. DNB course which is equivalent to Doctor of Medicine (MD) course.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia