ಇನ್ನುಮುಂದೆ ಯುಜಿಸಿ, ನೀಟ್, ಜೆಇಇ ಪ್ರವೇಶ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ, ಸುಪ್ರೀಂಕೋರ್ಟ್ ನ ಮಹತ್ತರ ತೀರ್ಪು

ದೇಶದ ಹಲವಾರು ಪ್ರತಿಷ್ಟಿತ ಪ್ರವೇಶಾತಿ ಪರೀಕ್ಷೆಗೆ ಸಂಬಂಧಪಟ್ಟಂತೆ ಇದೀಗ ದಿ ಅಪೆಕ್ಸ್ ಕೋರ್ಟ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಮಹತ್ತರ ನಿರ್ಣಯ ಕೈ ಗೊಂಡಿದೆ.

By Nishmitha Bekal

ದೇಶದ ಹಲವಾರು ಪ್ರತಿಷ್ಟಿತ ಪ್ರವೇಶಾತಿ ಪರೀಕ್ಷೆಗೆ ಸಂಬಂಧಪಟ್ಟಂತೆ ಇದೀಗ ದಿ ಅಪೆಕ್ಸ್ ಕೋರ್ಟ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಮಹತ್ತರ ನಿರ್ಣಯ ಕೈ ಗೊಂಡಿದೆ. ಇನ್ನು ಮುಂದೆ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಂಸ್ ಟೆಸ್ಟ್ (ಎನ್‌ಇಇಟಿ), ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ - ನ್ಯಾಷನಲ್ ಎಲಿಜಿಬಿಟಿಲಿ ಟೆಸ್ಟ್ (ಯುಜಿಸಿ ನೆಟ್) ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಂಖ್ಯೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿದೆ.

ಇನ್ನುಮುಂದೆ ಯುಜಿಸಿ, ನೀಟ್, ಜೆಇಇ ಪ್ರವೇಶ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ, ಸುಪ್ರೀಂಕೋರ್ಟ್ ನ ಮಹತ್ತರ ತೀರ್ಪು

ಅಷ್ಟೇ ಅಲ್ಲ ಶಾಲೆಗಳಲ್ಲಿಯೂ ಮಕ್ಕಳಿಗೆ ಅಡ್ಮಿಶನ್ ಮಾಡುವ ವೇಳೆ ಈ ಆಧಾರ್ ಕಾರ್ಡ್ ನ 12 ಸಂಖ್ಯೆಗಳನ್ನ ಸಬ್‌ಮಿಟ್ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಇದೀಗ ಈ ತೀರ್ಪಿನಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ರಿಲೀಫ್ ಸಿಕ್ಕಂತಾಗಿದೆ.

ಯುಜಿಸಿ ನೆಟ್, ಜೆಇಇ ಪ್ರಮುಖ, ಹಾಗೂ ನೀಟ್ ಪರೀಕ್ಷೆಗಳ ಹೊಣೆ ಹೊತ್ತು ಕೊಂಡಿರುವ ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಮೊದಲು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಸಂಖ್ಯೆ ಕೂಡಾ ನಮೂದಿಸಿಬೇಕು ಎಂದು ತಿಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ ಅರ್ಜಿ ಸಲ್ಲಿಕೆ ವೇಳೆ ಆಧಾರ್ ಕಾರ್ಡ್ ಸಂಖ್ಯೆ ಅಗತ್ಯವಿಲ್ಲ. ಹಾಗೂ ಅರ್ಜಿ ಸಲ್ಲಿಕೆ ವೇಳೆ ಆಧಾರ್ ಕಾರ್ಡ್ ಬದಲಿಗೆ ಪಾಸ್‌ಪೋರ್ಟ್ ನಂಬರ್, ರೇಶನ್ ಕಾರ್ಡ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಸರ್ಕಾರದ ಯಾವುದೇ ಗುರುತು ಚೀಟಿಯನ್ನ ಸಬ್‌ಮಿಟ್ ಮಾಡಬಹುದಾಗಿದೆ ಎಂದು ಎನ್‌ಟಿಎ ಇದೀಗ ಪ್ರಕಟಣೆಯಲ್ಲಿ ವಿವರವಾಗಿ ತಿಳಿಸಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ಜೆಇಇ ಪ್ರಮುಖ ೨೦೧೯ ಮತ್ತು ಯುಜಿಸಿ ನೆಟ್ ಡಿಸಂಬರ್ 2018 ಪರೀಕ್ಷೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಎರಡು ಪರೀಕ್ಷೆ ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 30, 2018 ಕೊನೆಯ ದಿನಾಂಕವಾಗಿದೆ. ಇದುವರೆಗೆ ಯಾರು ಅರ್ಜಿ ಸಲ್ಲಿಸಲಿಲ್ಲವೂ ಈ ಕೂಡಲೇ ಅರ್ಜಿ ಸಲ್ಲಿಸಿ, ಪರೀಕ್ಷೆ ತಯಾರಿಗೆ ಸಿದ್ಧತೆ ಮಾಡಿಕೊಳ್ಳಿ

ಯುಜಿಸಿ ನೆಟ್ ಡಿಸಂಬರ್ 2018 ಪ್ರಮುಖ ದಿನಾಂಕಗಳು:

  • ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
  • ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ: ನವಂಬರ್ 19, 2018
  • ಪರೀಕ್ಷೆ ದಿನಾಂಕ: ಡಿಸಂಬರ್ 9 ರಿಂದ 23, 2018
  • ಫಲಿತಾಂಶ ದಿನಾಂಕ : ಜನವರಿ 10, 2019

ಜೆಇಇ ಪ್ರಮುಖ ದಿನಾಂಕ

  • ಜೆಇಇ ಪ್ರಮುಖ 1 ಪರೀಕ್ಷೆ
  • ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
  • ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ: ಡಿಸಂಬರ್ 17, 2018
  • ಪರೀಕ್ಷೆ ದಿನಾಂಕ: ಜನವರಿ 6 ರಿಂದ 20,
  • ಫಲಿತಾಂಶ ದಿನಾಂಕ : ಜನವರಿ 31, 2019

ಜೆಇಇ ಪ್ರಮುಖ 2 ಪರೀಕ್ಷೆ

  • ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 8 ರಿಂದ ಮಾರ್ಚ್ 7, 2019
  • ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ: ಮಾರ್ಚ್ 18, 2019
  • ಪರೀಕ್ಷೆ ದಿನಾಂಕ: ಎಪ್ರಿಲ್ 6 ರಿಂದ 20, 2018
  • ಫಲಿತಾಂಶ ದಿನಾಂಕ : ಎಪ್ರಿಲ್ 30, 2019

More News  

For Quick Alerts
ALLOW NOTIFICATIONS  
For Daily Alerts

English summary
The apex court of India, Supreme Court, has announced that Aadhar is not required for the entrance examinations such as National Eligibility cum Entrance Test (NEET) and University Grant Commission - National Eligibility Test (UGC NET). The court has also stated that this 12 digits unique identification number is not required for school admission which is a huge relief to students. The Supreme Court's verdict came out while challenging the constitutional validity of Aadhaar
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+