ದಿ ಸ್ಟಡಿ ವೆಬ್ ಆಫ್ ಆಕ್ಟಿವ್ ಆಕ್ಟೀವ್ ಲರ್ನಿಂಗ್ ಫಾರ್ ಯಂಗ್ ಅಸ್ಪಿರಿಂಗ್ ಮೈಂಡ್ಸ್ ಪರೀಕ್ಷೆ 2018 ದಿನಾಂಕ ಇದೀಗ ರಿಲೀಸ್ ಆಗಿದ್ದು, ಡಿಸಂಬರ್ ತಿಂಗಳಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನಾಂಕ. ಇದುವರೆಗೆ ಅರ್ಜಿ ಸಲ್ಲಿಸದೇ ಇದ್ದವರು ಕೂಡಲೇ ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಇದೀಗ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಪರೀಕ್ಷೆಯು ಡಿಸಂಬರ್ 1, 2018 ರಂದು ನಡೆಯಲಿದೆ ಎಂದು ಆಫೀಶಿಯಲ್ ಪ್ರಕಟಣೆಯಿಂದ ತಿಳಿದುಬಂದಿದೆ.

ಈ ಪರೀಕ್ಷೆಯು ದೇಶದಾದ್ಯಂತ 131 ನಗರಗಳಲ್ಲಿ 115 ಕೋರ್ಸ್ ಗಳಲ್ಲಿ ನಡೆಯಲಿದೆ. ಸಾಮಾನ್ಯ ಕೆಟಗರಿಯ ಅಭ್ಯರ್ಥಿಗಳು ರೂ 1000 ಹಾಗೂ ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಯುಡಿ ಅಭ್ಯರ್ಥಿಗಳು ರೂ 500 ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.
ಪರೀಕ್ಷೆ ಸಮಯ ಹೀಗಿದೆ:
ಡಿಸಂಬರ್ 1, 2018:
ಫಸ್ಟ್ ಸೆಶನ್ : ಬೆಳಗ್ಗೆ9 ರಿಂದ ಮಧ್ಯಾಹ್ನ 12 ಗಂಟೆವರೆಗೆ
ಸೆಕಂಡ್ ಸೆಶನ್ : ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೆ
ಡಿಸಂಬರ್ 2, 2018:
ಫಸ್ಟ್ ಸೆಶನ್ : ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ
ಸೆಕಂಡ್ ಸೆಶನ್ : ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆ ವರೆಗೆ
ಐಐಟಿ ಬಾಂಬೆ, ಮದ್ರಾಸ್, ಕಾನ್ಪುರ್, ಗುವಾಹಟಿ, ದೆಹಲಿ, ದೆಹಲಿ ವಿಶ್ವವಿದ್ಯಾನಿಲಯ, ಜವಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ, ಐಐಎಂ ಬೆಂಗಳೂರು, ಐಐಎಂ ಕೊಲ್ಕತ್ತಾ ಸೇರಿದಂತೆ ಇನ್ನೂ ಕೆಲವು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಈ ಕೋರ್ಸ್ ನ್ನ ನೀಡುತ್ತದೆ.


Click it and Unblock the Notifications











