ಪ್ರತಿ ವರ್ಷ ಸೆಪ್ಟೆಂಬರ್ ೫ರಂದು ಎಲ್ಲೆಡೆ ಶಿಕ್ಷಕರ ದಿನಾಚರಣೆಯ ಸಂಭ್ರಮ. ಆದರೆ ಈ ಭಾರಿ ಆ ಸಂಭಮವನ್ನ ಕೊರೋನಾ ಕಿತ್ತುಕೊಂಡಿದೆ. ಈ ನಡುವೆಯೂ ಗೂಗಲ್ ಎಲ್ಲಾ ಶಿಕ್ಷಕ ವೃಂದದವರಿಗೂ ವಿಶೇಷ ಡೂಡಲ್ ಮೂಲಕ ಶುಭಾಷಯ ಕೋರಿದೆ.
ಈ ಭಾರಿಯ ಗೂಗಲ್ ಡೂಡಲನ್ ತುಂಬಾ ಅರ್ಥಗರ್ಭಿತವಾಗಿದೆ. ಎಲ್ಲಾ ಶಾಲಾ ದಿನಗಳನ್ನು ನೆನಪಿಸುವಂತಿದೆ. ಇನ್ನು ವಿದ್ಯಾರ್ಥಿ ಜೀವನದಲ್ಲಿ ಕಳೆದ ಆಟ ಪಾಠಗಳನ್ನು ನೆನಪಿಸುತ್ತಿದೆ. ಮತ್ತದೇ ಶಾಲಾ ದಿನಗಳು ಕೈ ಬೀಸಿ ಕರೆಯುತ್ತಿವೆ. ಈ ವರ್ಷ ಸೆಪ್ಟೆಂಬರ್ ತಿಂಗಳು ಬಂದರೂ ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿಲ್ಲ. ಈ ಸಂದರ್ಭದಲ್ಲಿ ಈ ಡೂಡಲ್ ನಿಜಕ್ಕೂ ಕಣ್ ಸೆಳೆಯುತ್ತಿದೆ. ಒಟ್ಟಾರೆ ಗೂಗಲ್ ತನ್ನ ಕೈಚಳಕದ ಮೂಲಕ ಇಡೀ ದೇಶಕ್ಕೆ ತನ್ನ ಶುಭಾಶಯ ಕೋರಿದೆ.
ಶಿಕ್ಷಕರ ದಿನಾಚರಣೆ:
'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದ ಸಂದರ್ಭದಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ 5"ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.
ವಿಶ್ವ ಶಿಕ್ಷಕರ ದಿನಾಚರಣೆ:
ಒಟ್ಟು 21 ದೇಶಗಳಲ್ಲಿ ಹಲವು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ.1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ