ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

ಇಂದು ಎಲ್ಲೆಡೆ ಟೀಚರ್ಸ್ ಡೇ ಸಂಭ್ರಮ. ಎಲ್ಲಾ ಮಕ್ಕಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗೆ ಸಪ್ರೈಸ್ ಗಿಫ್ಟ್ ನೀಡಿ ಸಂಭ್ರಮದಿಂದ ಆಚರಿಸಿದ್ದಾರೆ. ಇನ್ನು ಕೆಲವು ಸೆಲಬ್ರಟಿಗಳು ಕೂಡಾ ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

 

ಹೌದು ನಟ ನವರಸ ನಾಯಕ ಜಗ್ಗೇಶ್ ಹಾಗೂ ದಂಪತಿ ತಮ್ಮ ಟ್ವಿಟರ್ ಖಾತೆ ಮೂಲಕ ತಮಗೆ ಕಲಿಸಿದ ನೆಚ್ಚಿನ ಶಿಕ್ಷಕರ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ಫೋಟೋ ಜತೆ ಹಳೆಯ ಶಾಲಾ ದಿನಗಳ ಮೆಲುಕು ಹಾಕಿದ್ದಾರೆ.

"ನನ್ನಬಾಲ್ಯದ ಡೆಕನ್ ಶಾಲೆ ನರ್ಸರಿ ಟೀಚರ್ ಇವರು. ಒಂದುವರ್ಷ ಇವರ ಶಾಲೆಯಲ್ಲೆ ನಾನು ಓದಿದ್ದು.ಇವರ ಶಾಲೆಯ ಮುಂದೆ ಅಪ್ಪಅಮ್ಮ ರೇಷನ್ ಡಿಪೋ ಇಟ್ಟಿದ್ದರು..ನನ್ನ ಗಮನಿಸಲು ಸುಲಭ ಎಂದು ಇವರ ಶಾಲೆಗೆ ಸೇರಿಸಿದ್ದರು! ಆಗ ಪರಿಮಳ ಪಾಪು ಸ್ಕೂಲ್ ಆಯ ಇವಳ ಎತ್ತಿಕೊಂಡು ಓಡಾಡುತ್ತಿದ್ದರು..ಮುಂದೆ ಇವಳು ನನ್ನ ಧರ್ಮಪತ್ನಿ..ದೇವರು ಬರೆದ ಅರಿಯದ ಹಣೆಬರಹ " ಎಂದು ಸ್ಟೇಟಸ್ ಹಾಕಿಕೊಂಡಿದ್ದು, ಇದೇ ವೇಳೆ ತಾನು ಅಂದೇ ಪತ್ನಿ ಪರಿಮಳನ್ನ ನೋಡಿದ್ದೆ ಎಂದು ತಿಳಿಸಿದ್ದಾರೆ.

ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

ಇನ್ನು ಇದೇ ಫೋಟೋವನ್ನ ಜಗ್ಗೇಶ್ ಪತ್ನಿ ಪರಿಮಳ ಕೂಡಾ ಅಪ್‌ಲೋಡ್ ಮಾಡಿದ್ದಾರೆ. 51 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಕಳೆದಿರುವ ಇವರಂತಹ ಹೆತ್ತವರನ್ನ ಪಡೆದಿರಲು ನಾನು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದಾರೆ.

ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

 

ನನಗೆ ಕನ್ನಡ ಕಲಿಸಿದ ಶಿಕ್ಷಕರು ಹೆಚ್.ಬಿ.ಕೃಷ್ಣಮೂರ್ತಿಗಳು.. ತಂದೆತಾಯಿ ನಂತರದ ಸ್ಥಾನ ಆದರ್ಶ ಗುರುಗಳಿಗೆ ನೀಡಲಾಗಿದೆ. ಗುರುವಿನಲ್ಲಿ ತ್ರಿಮೂರ್ತಿಗಳ ಕಾಣಬಹುದು.. ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ.. ಶಿಕ್ಷಕರ ದಿನಾಚರಣೆ ಶುಭಕಾಮನೆಗಳು.. ಶುಭದಿನ ಶುಭೋದಯ.. ಎಂದು ಮತ್ತೊಬ್ಬ ಶಿಕ್ಷಕನ ಫೋಟೋ ಹಾಕಿ ಹಳೆಯ ದಿನಗಳನ್ನ ಮೆಲುಕು ಹಾಕಿದ್ದಾರೆ ನಟ ಜಗ್ಗೇಶ್

ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

ALL PC: Jaggesh Twitter

For Quick Alerts
ALLOW NOTIFICATIONS  
For Daily Alerts

English summary
In India, 5th September, India's 2nd president Dr.Sarvepalli Radhakrishnan's birthday is celebrated as Teachers' Day as a mark of tribute to the contribution made by teachers to the society. Here are how jaggesh wished his teachers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more