ಎಲ್ಲೆಡೆ ಟೀಚರ್ಸ್ ಡೇ ಸಂಭ್ರಮ. ಎಲ್ಲಾ ಮಕ್ಕಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗೆ ಸಪ್ರೈಸ್ ಗಿಫ್ಟ್ ನೀಡಿ ಸಂಭ್ರಮದಿಂದ ಆಚರಿಸಿದ್ದಾರೆ. ಇನ್ನು ಕೆಲವು ಸೆಲಬ್ರಟಿಗಳು ಕೂಡಾ ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ಹೌದು ನಟ ನವರಸ ನಾಯಕ ಜಗ್ಗೇಶ್ ಹಾಗೂ ದಂಪತಿ ತಮ್ಮ ಟ್ವಿಟರ್ ಖಾತೆ ಮೂಲಕ ತಮಗೆ ಕಲಿಸಿದ ನೆಚ್ಚಿನ ಶಿಕ್ಷಕರ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ಫೋಟೋ ಜತೆ ಹಳೆಯ ಶಾಲಾ ದಿನಗಳ ಮೆಲುಕು ಹಾಕಿದ್ದಾರೆ.
"ನನ್ನಬಾಲ್ಯದ ಡೆಕನ್ ಶಾಲೆ ನರ್ಸರಿ ಟೀಚರ್ ಇವರು. ಒಂದುವರ್ಷ ಇವರ ಶಾಲೆಯಲ್ಲೆ ನಾನು ಓದಿದ್ದು.ಇವರ ಶಾಲೆಯ ಮುಂದೆ ಅಪ್ಪಅಮ್ಮ ರೇಷನ್ ಡಿಪೋ ಇಟ್ಟಿದ್ದರು..ನನ್ನ ಗಮನಿಸಲು ಸುಲಭ ಎಂದು ಇವರ ಶಾಲೆಗೆ ಸೇರಿಸಿದ್ದರು! ಆಗ ಪರಿಮಳ ಪಾಪು ಸ್ಕೂಲ್ ಆಯ ಇವಳ ಎತ್ತಿಕೊಂಡು ಓಡಾಡುತ್ತಿದ್ದರು..ಮುಂದೆ ಇವಳು ನನ್ನ ಧರ್ಮಪತ್ನಿ..ದೇವರು ಬರೆದ ಅರಿಯದ ಹಣೆಬರಹ " ಎಂದು ಸ್ಟೇಟಸ್ ಹಾಕಿಕೊಂಡಿದ್ದು, ಇದೇ ವೇಳೆ ತಾನು ಅಂದೇ ಪತ್ನಿ ಪರಿಮಳನ್ನ ನೋಡಿದ್ದೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ಫೋಟೋವನ್ನ ಜಗ್ಗೇಶ್ ಪತ್ನಿ ಪರಿಮಳ ಕೂಡಾ ಅಪ್ಲೋಡ್ ಮಾಡಿದ್ದಾರೆ. 51 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಕಳೆದಿರುವ ಇವರಂತಹ ಹೆತ್ತವರನ್ನ ಪಡೆದಿರಲು ನಾನು ಹೆಮ್ಮೆ ಪಡುತ್ತೇನೆ ಎಂದು ತಿಳಿಸಿದ್ದಾರೆ.
ನನಗೆ ಕನ್ನಡ ಕಲಿಸಿದ ಶಿಕ್ಷಕರು ಹೆಚ್.ಬಿ.ಕೃಷ್ಣಮೂರ್ತಿಗಳು.. ತಂದೆತಾಯಿ ನಂತರದ ಸ್ಥಾನ ಆದರ್ಶ ಗುರುಗಳಿಗೆ ನೀಡಲಾಗಿದೆ. ಗುರುವಿನಲ್ಲಿ ತ್ರಿಮೂರ್ತಿಗಳ ಕಾಣಬಹುದು.. ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ.. ಶಿಕ್ಷಕರ ದಿನಾಚರಣೆ ಶುಭಕಾಮನೆಗಳು.. ಶುಭದಿನ ಶುಭೋದಯ.. ಎಂದು ಮತ್ತೊಬ್ಬ ಶಿಕ್ಷಕನ ಫೋಟೋ ಹಾಕಿ ಹಳೆಯ ದಿನಗಳನ್ನ ಮೆಲುಕು ಹಾಕಿದ್ದಾರೆ ನಟ ಜಗ್ಗೇಶ್
ALL PC: Jaggesh Twitter