ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಇದೀಗ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ karresults.nic.in ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಚೆಕ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಜುಲೈ 17ರಂದು ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಕೊನೆಗೊಂಡಿತ್ತು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಜೂನ್ 20ರಿಂದ ಜುಲೈ 10 ರವರೆಗೆ ನಡೆದಿತ್ತು. ಇನ್ನು ಪಿಯುಸಿ ಫಲಿತಾಂಶವು ಎಪ್ರಿಲ್ 30 ರಂದು ಹೊರಬಿದ್ದಿತ್ತು. ಕಳೆದ ವರ್ಷ ಕೂಡಾ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಇದೇ ದಿನಾಂಕದಂದು ಪ್ರಕಟವಾಗಿತ್ತು.
ಫಲಿತಾಂಶ ಚೆಕ್ ಮಾಡುವುದು ಹೇಗೆ:
- ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ karresults.nic.in
- ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಕಾಣಿಸುವ ಟಾಪ್ ಮೆನು ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ನಮೂದಿಸಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 5: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ. ಸೇವ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
For Daily Alerts
English summary
The Karnataka PUC Supplementary Exam Result 2018 to release by the Department of Pre- University Education On july 26. The results announced today.Result will available on online on the official website


Click it and Unblock the Notifications











