ನಲಿ-ಕಲಿ ಕಾರ್ಯಕ್ರಮದಲ್ಲಿ ಕುಂಟುತ್ತಿರುವ ಕಲಿಕಾ ಸಾಮರ್ಥ್ಯ

ರತನ್‌ ಟಾಟಾ ಟ್ರಸ್ಟ್‌ ಮತ್ತು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ನಡೆಸಿರುವ ಜಂಟಿ ಅಧ್ಯಯನದ ವರದಿಯಳ್ಳಿ ಇದು ತಿಳಿದು ಬಂದಿದ್ದು, ಇದಕ್ಕಾಗಿ ಮೂರು ವರ್ಷಗಳ ಕಾಲ 700 ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ.

ಸರ್ಕಾರಿ ಶಾಲೆಯ ಮಹತ್ವದ ನಲಿ ಕಲಿ ಕಾರ್ಯಕ್ರಮ ವಿಫಲವಾಗಿದೆ ಎನ್ನುವ ವರದಿ ಹೊರಬಿದ್ದಿದೆ. ಮಕ್ಕಳಲ್ಲಿ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರಂಭವಾದ ಈ ಯೋಜನೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂದು ಅಧ್ಯಯನದ ವರದಿಯೊಂದರಲ್ಲಿ ತಿಳಿದು ಬಂದಿದೆ.

ರತನ್‌ ಟಾಟಾ ಟ್ರಸ್ಟ್‌ ಮತ್ತು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ನಡೆಸಿರುವ ಜಂಟಿ ಅಧ್ಯಯನದ ವರದಿಯಳ್ಳಿ ಇದು ತಿಳಿದು ಬಂದಿದ್ದು, ಇದಕ್ಕಾಗಿ ಮೂರು ವರ್ಷಗಳ ಕಾಲ 700 ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ.

ನಲಿ ಕಲಿ ಕಾರ್ಯಕ್ರಮ ವಿಫಲ

ದೇಶದಲ್ಲಿ ಮಕ್ಕಳ ಕಲಿಕಾ ಮಟ್ಟ ಕಳಪೆಯಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಲು, ರತನ್‌ ಟಾಟಾ ಟ್ರಸ್ಟ್‌ ಮತ್ತು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ 'ಭಾರತೀಯ ಭಾಷೆಗಳಲ್ಲಿ ಸಾಕ್ಷರತಾ ಸಂಶೋಧನೆ' ಶೀರ್ಷಿಕೆಯಡಿ ಜಂಟಿ ಅಧ್ಯಯನ ಕೈಗೊಂಡಿದ್ದವು.

ಯಾದಗಿರಿ ಜಿಲ್ಲೆಯ ಯಾದಗಿರಿ ವಲಯ ಮತ್ತು ಮಹಾರಾಷ್ಟ್ರದ ಪಲ್ಘರ್‌ ಜಿಲ್ಲೆಯ ವಾಡಾ ವಲಯಗಳಲ್ಲಿ ಒಟ್ಟು 700 ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ.

1ನೇ ತರಗತಿಯಿಂದ 3ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಒರೆಗೆ ಹಚ್ಚಿ, ಈ ವರದಿಯನ್ನು ಸಿದ್ಧಪಡಿಸಲಾಗಿದೆ. 3ನೇ ತರಗತಿಯ ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲು ಯಾದಗಿರಿ ವಲಯದ ಶೇ 89ರಷ್ಟು ಮಕ್ಕಳು ಮತ್ತು ವಾಡಾ ವಲಯದ ಶೇ 70 ಮಕ್ಕಳು ಅಸಮರ್ಥರಾಗಿರುವುದು ತಿಳಿದು ಬಂದಿದೆ.

ಯಾದಗಿರಿ ವಲಯದ ಶೇ 60ರಷ್ಟು ಮತ್ತು ವಾಡಾ ವಲಯದ ಶೇ 29 ರಷ್ಟು ಮಕ್ಕಳು ಪ್ರಬಂಧ ಆಧಾರಿತ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೇ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

'ಈ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯಗಳೆರಡೂ ಕಳಪೆ ಮಟ್ಟದಲ್ಲಿವೆ. ಅದರಲ್ಲೂ ವಾಡಾ ವಲಯಕ್ಕಿಂತಲೂ ಯಾದಗಿರಿ ವಲಯದ ಮಕ್ಕಳು ಇನ್ನೂ ಹಿಂದುಳಿದಿದ್ದಾರೆ. ಈ ಅಧ್ಯಯನ ವರದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು' ರತನ್ ಟಾಟಾ ಟ್ರಸ್ಟ್ ತಿಳಿಸಿದೆ.

ನಲಿ ಕಲಿ ವಿಧಾನ

ನಲಿ ಕಲಿ ವಿಧಾನದಲ್ಲಿ 1 ಮತ್ತು 2ನೇ ತರಗತಿ ಮಕ್ಕಳನ್ನು ಒಂದೇ ತರಗತಿಯಲ್ಲಿ ಒಂದು ಗೂಡಿಸಲಾಗಿರುತ್ತದೆ. 1 ಮತ್ತು 2 ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ಕಲಿಕೆಯ ಹಂತವಿದ್ದು , ಹಂತಹಂತವಾಗಿ ಮಗು ತನ್ನ ಚಟುವಟಿಕೆ ಮುಂದುವರೆಸುತ್ತದೆ.

ಇಲ್ಲಿ ಐದು ಗುಂಪುಗಳಲ್ಲಿ ಕಲಿಕೆಯ ಪ್ರಕ್ರಿಯೆ ನಡೆಯುತ್ತದೆ.

ಮೊದಲನೆಯದು ಭಾಗಶಃ ಶಿಕ್ಷಕರ ಸಹಾಯದ ಗುಂಪು: ಈ ಗುಂಪಿನಲ್ಲಿ ಮಗುವಿಗೆ ಪೂರಕವಾದ ಪೂರ್ವಭಾವಿ ಚಟುವಟಿಕೆಗಳಿರುತ್ತವೆ.

ಎರಡನೆಯದು ಸಂಪೂರ್ಣ ಶಿಕ್ಷಕರ ಸಹಾಯದ ಗುಂಪು: ಇಲ್ಲಿ ಶಿಕ್ಷಕರು ಆಯಾ ಹಂತದ ವಿಷಯವನ್ನು ಮಗುವಿಗೆ ಪರಿಚಯಿಸುತ್ತಾರೆ. ಅಲ್ಲದೇ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಮಗುವಿನ ಚಟುವಟಿಕೆಯಲ್ಲಿ ಸಹಾಯ ಮಾಡುತ್ತಾರೆ.

ಮೂರನೆಯದು ಸಂಪೂರ್ಣ ಗೆಳೆಯರ ಸಹಾಯದ ಗುಂಪು: ಇಲ್ಲಿ ಶಿಕ್ಷಕರಿಗಿಂತ ಹೆಚ್ಚು ಮುಂದಿನ ಕಲಿಕೆಯ ಹಂತದಲ್ಲಿರುವ ಗೆಳೆಯರು ಪರಸ್ಪರ ಸಹಾಯ ಮಾಡುತ್ತಾರೆ. ಈ ಗುಂಪಿನಲ್ಲಿ ಮಗುವು ವಿಷಯವನ್ನು ಗ್ರಹಿಸುತ್ತದೆ.

ನಾಲ್ಕನೆಯದು ಭಾಗಶಃ ಗೆಳೆಯರ ಸಹಾಯದ ಗುಂಪು: ಇಲ್ಲಿ ಮಗುವು ಅಭ್ಯಾಸದ ಹಂತದಲ್ಲಿದ್ದು, ಸ್ವಲ್ಪ ಪ್ರಮಾಣದ ಸಹಾಯವನ್ನು ಗುಂಪಿನ ಇತರ ಮಕ್ಕಳು ನೀಡುವುದರಿಂದ ಮಗು ತನ್ನ ಅಭ್ಯಾಸದ ಚಟುವಟಿಕೆಯನ್ನು ಮುಗಿಸುತ್ತದೆ.

ಕೊನೆಯ ಗುಂಪು ಸ್ವಕಲಿಕೆಯ ಗುಂಪು: ಇಲ್ಲಿ ಮಗು ಆಯಾ ಹಂತ ಅಕ್ಷರಗಳಿಂದ ರೂಪಿಸಲಾದ ವಾಕ್ಯಗಳನ್ನು ಸ್ವತಂತ್ರ್ಯವಾಗಿ ಓದಲು ಪ್ರಾರಂಭಿಸುತ್ತದೆ. ಹಾಗೂ ಮಗುವಿನ ಮೌಲ್ಯಮಾಪನವಾಗುತ್ತದೆ. ಮೊದಲು ಮಗುವಿಗೆ ನೈಧಾನಿಕ ಪರೀಕ್ಷೆ ಮಾಡಲಾಗುತ್ತದೆ.

ಪ್ರತಿ ಮಗುವು ಒಂದನೇ ಗುಂಪಿನಿಂದ ಕಲಿಕೆಯನ್ನು ಪ್ರಾರಂಭಿಸಿ ಐದನೇ ಗುಂಪಿನವರೆಗೂ ಚಲಿಸುತ್ತದೆ. ಹಾಗೆಯೇ ಮುಂದಿನ ಕಲಿಕೆಯ ಹಂತವನ್ನು ಮಗು ಪುನ: ಒಂದನೇ ಗುಂಪಿನಿಂದಲೇ ಪ್ರಾರಂಭಿಸುತ್ತದೆ. ತರಗತಿಯ ಎಲ್ಲಾ ಮಕ್ಕಳು ಅವರವರ ಕಲಿಕೆಯ ವೇಗಕ್ಕನುಸಾರವಾಗಿ ವಿಭಿನ್ನ ಗುಂಪುಗಳಲ್ಲಿ ಚದುರಿರುತ್ತಾರೆ.

ಪ್ರತೀ ಗುಂಪಿನಲ್ಲಿರುವ ಮಕ್ಕಳಲ್ಲಿ ಕೆಲವರು ಕೆಳಹಂತದ ಕಲಿಕೆಯಲ್ಲಿದ್ದರೆ, ಇನ್ನೂ ಕೆಲವರು ಮೇಲಿನ ಹಂತದ ಕಲಿಕೆಯಲ್ಲಿರುತ್ತಾರೆ. ಹಾಗೆಯೇ ಕೆಲವರು 1ನೇ ತರಗತಿಯವರಾಗಿದ್ದರೆ, ಇನ್ನೂ ಕೆಲವರು 2 ನೇ ತರಗತಿಯ ವಿಧ್ಯಾರ್ಥಿಗಳಾಗಿರುತ್ತಾರೆ. ಹಾಗಾಗಿ ಮಕ್ಕಳು ಕಲಿಕೆಯಲ್ಲಿ ಪರಸ್ಪರ ಸಹಾಯಮಾಡುತ್ತಾರೆ. ಹೀಗೆ ಪರಸ್ಪರ ಸ್ವವೇಗದಲ್ಲಿ ಕಲಿಯುತ್ತಿರುವ ಮಕ್ಕಳು ಚರ್ಚೆಯಿಂದ ಅನೇಕ ವಿಷಯಗಳನ್ನು ಕಲಿಯುತ್ತಾರೆ.

ಒಂದನೇ ಮೈಲುಗಲ್ಲು ಮುಗಿಯುವಾಗಲೇ ಮಗುವಿಗೆ ನಾನು ಓದಬಲ್ಲೆ ಎನ್ನುವ ಆತ್ಮವಿಶ್ವಾಸ ಬಂದುಬಿಡುತ್ತದೆ. ಹಾಗಾಗಿ ಮಗುವಿನ ಕಲಿಕೆಯಲ್ಲಿ ಆಸಕ್ತಿ, ಕುತೂಹಲ ಉಂಟಾಗುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
A joint study from Ratan Tata Trust and Azim Premji University reported that "In the state, the Nali-Kali program has not yielded positive results in raising children's learning ability"
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+