ಸರ್ಕಾರಿ ಕೆಲಸಕ್ಕೆ ಕಂಪ್ಯೂಟರ್ ವಿಷಯದಲ್ಲಿ ಶೇ.50 ಅಂಕಗಳು ಇರಲೇಬೇಕು

ರಾಜ್ಯ ಸರ್ಕಾರವು ಹೊಸ ನಿಯಮ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ್ದು, ಸರ್ಕಾರಿ ನೌಕರಿಯಲ್ಲಿ ಮುಂದುವರಿಯಬೇಕು ಅಥವಾ ನೇಮಕವಾಗಬೇಕು ಎಂದಿದ್ದರೆ ಕಂಪ್ಯೂಟರ್ ಶಿಕ್ಷಣದಲ್ಲಿ ಶೇ.50 ಅಂಕ ಗಳಿಸಲೇಬೇಕಿದೆ.

ಸರ್ಕಾರಿ ನೌಕರಿ ಪಡೆಯಬೇಕೆಂದರೆ ಕಂಪ್ಯೂಟರ್ ಶಿಕ್ಷಣದಲ್ಲಿ ಶೇ.50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಈ ಕುರಿತು ರಾಜ್ಯ ಸರ್ಕಾರವು ಹೊಸ ನಿಯಮ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ್ದು, ಸರ್ಕಾರಿ ನೌಕರಿಯಲ್ಲಿ ಮುಂದುವರಿಯಬೇಕು ಅಥವಾ ನೇಮಕವಾಗಬೇಕು ಎಂದಿದ್ದರೆ ಕಂಪ್ಯೂಟರ್ ಶಿಕ್ಷಣದಲ್ಲಿ ಶೇ.50 ಅಂಕ ಗಳಿಸಲೇಬೇಕಿದೆ.

ಇದು 2012ರಿಂದಲೇ ಪೂರ್ವಾನ್ವಯವಾಗಲಿದೆ. ಆದರೆ, ಈ ಪರೀಕ್ಷೆಯಲ್ಲಿ ಶೇ.50 ಅಂಕ ಗಳಿಕೆಗೆ ಮಾ. 20, 2020ರವರೆಗೆ ಅವಕಾಶ ನೀಡಲಾಗಿದೆ. ಈ ಹಿಂದಿನ ಆದೇಶದ ಪ್ರಕಾರ 2017ಕ್ಕೆ ಕಾಲಾವಕಾಶ ಮುಗಿಯುತ್ತಿತ್ತು.

ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಶಿಕ್ಷಣ

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳನ್ನು 7.3.2012ರಲ್ಲಿಯೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಂತೆ ಈ ನಿಯಮಗಳ ಅನ್ವಯ ದಿನಾಂಕ 7.3.2012ರ ನಂತರ ನೇರ ನೇಮಕಾತಿ ಹೊಂದಿದ ಸರ್ಕಾರಿ ನೌಕರರು ಐದು ವರ್ಷಗಳೊಳಗೆ (7.3.2017ರೊಳಗೆ) ಹಾಗೂ ಮುಂದಿನ ವಾರ್ಷಿಕ ವೇತನ ಬಡ್ತಿಗೆ ಆರು ವರ್ಷದ ಅವಧಿಯೊಳಗೆ ಅಂದರೆ (7.3.2018ರವರೆಗೆ) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದಲು ಅವಕಾಶ ನೀಡಲಾಗಿದೆ.

ಅದರಂತೆ ಈ ಅಧಿಸೂಚನೆ ಹೊರಡಿಸಿದ ನಂತರ (ಅಂದರೆ 7.3.2012ರ ನಂತರ) ನೇಮಕಾತಿ ಹೊಂದಿದ ಅಧಿಕಾರಿಗಳು, ನೌಕರರು ಶೇ. 60ರಷ್ಟು, ಅಂದರೆ 48 ಅಂಕಗಳನ್ನು ಹಾಗೂ 7.3.2012ಕ್ಕೂ ಮೊದಲೇ ಸೇವೆಯಲ್ಲಿರುವ ಅಧಿಕಾರಿಗಳು, ನೌಕರರು ಶೇ. 35ರಷ್ಟು, ಅಂದರೆ 28 ಅಂಕಗಳಿಗೆ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿತ್ತು.

ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಮಾಹಿತಿ ಪ್ರಕಾರ ಇಲ್ಲಿಯವರೆಗೆ ಶೇ.35 ಸರ್ಕಾರಿ ನೌಕರರು ಕಂಪ್ಯೂಟರ್ ಶಿಕ್ಷಣದಲ್ಲಿ ಉತ್ತೀರ್ಣರಾಗಿದ್ದಾರೆ. ಸದ್ಯಕ್ಕೆ ಸುಮಾರು 1.25 ಲಕ್ಷ ನೌಕರರು ಮಾತ್ರ ಕಂಪ್ಯೂಟರ್ ಶಿಕ್ಷಣದಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಸಂಖ್ಯೆಯು ಡಿಪಿಎಆರ್ ಅಧಿಕಾರಿಗಳ ನಿದ್ದೆ ಕೆಡಿಸಿದೆ. ಸರ್ಕಾರದಲ್ಲಿ ಇ-ಆಡಳಿತ ಚುರುಕು ಮಾಡಲು 50 ವರ್ಷದ ನಂತರದ ಎ, ಬಿ ಹಾಗೂ ಸಿ ವೃಂದದ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯ ಮಾಡಲಾಗಿತ್ತು. ಒಂದೊಮ್ಮೆ ಕಂಪ್ಯೂಟರ್ ಕಲಿಕೆಯಲ್ಲಿ ಅನುತ್ತೀರ್ಣರಾದರೆ ಬಡ್ತಿ ನೀಡದಿರಲು ಡಿಪಿಎಆರ್ ಸೂಚಿಸಿತ್ತು.

40ರಿಂದ 50 ವರ್ಷದೊಳಗಿನ ಸರ್ಕಾರಿ ನೌಕರರು ಕಂಪ್ಯೂಟರ್ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ ಡಿಪಿಎಆರ್ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಜು.22ರಂದು ಕರಡು ನಿಯಮವನ್ನು ಪ್ರಕಟಿಸಲಾಗಿತ್ತು. ಹೊಸ ನಿಯಮ ರಚನೆಗೆ ಸಂಬಂಧಿಸಿ ಈಗಾಗಲೇ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಆದೇಶ ಹೊರಡಿಸಲಾಗಿದೆ. ಈ ಆದೇಶವು ಹಾಲಿ ನೌಕರರು ಹಾಗೂ ಭವಿಷ್ಯದಲ್ಲಿ ನೇಮಕವಾಗುವರಿಗೆ ಅನ್ವಯವಾಗಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
The State Government has issued a notification to amend the new rule, in which one should be required to continue or appoint in government employment,they have to get 50 percent in computer education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+