ಭಾರತದ ಟಾಪ್ 10 ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಕಾಲೇಜುಗಳು

By Kavya

ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಶಿಕ್ಷಣವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ವೃತ್ತಿಪರ ಕೋರ್ಸ್ ಆಗಿದೆ. ಪತ್ರಕರ್ತರಾಗಬೇಕೆಂಬ ಹಂಬಲ ನಿಮ್ಮಲ್ಲಿದ್ದರೆ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಅಷ್ಟೇ ಅಲ್ಲದೆ ನ್ಯೂಸ್ ಪೋರ್ಟಲ್‌ಗಳಲ್ಲೂ ವಿಫುಲಅವಕಾಶಗಳಿವೆ.

ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಶಿಕ್ಷಣಕ್ಕೆ ಯಾವ ಕಾಲೇಜ್ ಬೆಸ್ಟ್? ಭಾರತದಲ್ಲಿರುವ ಟಾಪ್ 10ಕಾಲೇಜು ಯಾವುದು ಗೊತ್ತಾ?

1.ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯಾ, ಬೆಂಗಳೂರು
 

1.ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯಾ, ಬೆಂಗಳೂರು

ಈ ಸಂಸ್ಥೆಯು ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಹಲವು ಕೋರ್ಸ್‌ಗಳನ್ನು ಜಾರಿಗೆ ತಂದಿದೆ. ಮುದ್ರಣ ಪತ್ರಿಕೋದ್ಯಮ, ಪ್ರಸಾರ ಪತ್ರಿಕೋದ್ಯಮ ಮತ್ತು ಮಲ್ಟಿಮೀಡಿಯಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಹೊರತಂದಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಹಲವು ಐಚ್ಛಿಕ ವಿಷಯಗಳನ್ನೂ ನೀಡುತ್ತಿದೆ. ಹಾಗಾಗಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಇದು ಭಾರತದಲ್ಲೇ ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ.

2. ಸಿಂಬೋಸಿಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಆಂಡ್ ಕಮ್ಯೂನಿಕೇಶನ್, ಪುಣೆ

2. ಸಿಂಬೋಸಿಸ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೀಡಿಯಾ ಆಂಡ್ ಕಮ್ಯೂನಿಕೇಶನ್, ಪುಣೆ

ಪತ್ರಿಕಾ ರಂಗದಲ್ಲೇ ಹೆಸರು ಮಾಡಿರುವಂತಹ CNN IBN, ಟೈಮ್ಸ್‌ ನೌ, ಝಿ ನೆಟ್‌ವರ್ಕ್ ಪ್ರತಿವರ್ಷ ಹೆಚ್ಚಾಗಿ ಈ ಕಾಲೇಜಿನಿಂದಲೇ ಪತ್ರಿಕೋದ್ಯಮ ಪದವಿ ಪಡೆದಿರುವ ವಿದ್ಯಾರ್ಥಿಗಳನ್ನು ನೇಮಕಮಾಡಿಕೊಳ್ಳುತ್ತಿದೆ. ಈ ರಂಗದಲ್ಲಿ ವರ್ಷಕ್ಕೆ 3.5ಲಕ್ಷದಿಂದ 7ಲಕ್ಷದ ವರೆಗೂ ವಾರ್ಷಿಕ ವರಮಾನವನ್ನು ಪಡೆಯಬಹುದಾಗಿದೆ.ಈ ಕಾಲೇಜಿನಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಎಂಎ ಹಾಗೂ ಸಂವಹನ ನಿರ್ವಹಣೆಯಲ್ಲಿ ಎಂಬಿಎ ಕೋರ್ಸ್ ಕೂಡಾ ಲಭ್ಯವಿದೆ.

3. ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್ , ನವದೆಹಲಿ

3. ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್ , ನವದೆಹಲಿ

ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಧ್ವನಿಯಾಗುವ ಗುರಿಯನ್ನು ಹೊಂದಿರುವ ಕಾಲೇಜ್ ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್. ಇಲ್ಲಿ ಸೆಮಿನಾರ್, ವರ್ಕ್‌ಶಾಪ್ ಮೂಲಕ ಭೋಧನೆಯನ್ನು ಮಾಡಲಾಗುವುದು. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್‌ಗಳನ್ನೂ ನೀಡಲಾಗುವುದು. ಹಲವಾರು ಚಲನಚಿತ್ರ ಪ್ರದರ್ಶನಗಳನ್ನು ಈ ಕ್ಯಾಂಪಸ್‌ನಲ್ಲಿಯೂ ನಡೆಸಲಾಗುತ್ತದೆ.

4. ಕ್ರೈಸ್ಟ್ ಕಾಲೇಜ್, ಬೆಂಗಳೂರು
 

4. ಕ್ರೈಸ್ಟ್ ಕಾಲೇಜ್, ಬೆಂಗಳೂರು

ಈ ಕಾಲೇಜಿನಲ್ಲಿ ಪತ್ರಿಕೋದ್ಯಮ ಕೋರ್ಸ್‌ಗೆ ಶುಲ್ಕವು 2ಲಕ್ಷ ರೂ. ಕ್ಕಿಂತ ಕಡಿಮೆ ಇದೆ. ಇಲ್ಲಿ ವಿದ್ಯಾರ್ಥಿಗಳಿಗೆ ವರ್ಲ್ಡ್ ಕ್ಲಾಸ್ ಲ್ಯಾಬ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇಲ್ಲಿನ ಹಲವಾರು ಹಳೆ ವಿದ್ಯಾರ್ಥಿಗಳು ಉತ್ತಮ ಸ್ಥಾನದಲ್ಲಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ತರಗತಿ ಒಳಗೆ ಕಲಿತಿರುವುದನ್ನು ಹೊರ ಜಗತ್ತಿಗೂ ಅನ್ವಯಿಸುವಂತೆ ತಿಳಿಸಲಾಗುತ್ತದೆ. ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.

5. ಸ್ಕೂಲ್ ಆಫ್ ಕಮ್ಯೂನಿಕೇಶನ್, ಮಣಿಪಾಲ

5. ಸ್ಕೂಲ್ ಆಫ್ ಕಮ್ಯೂನಿಕೇಶನ್, ಮಣಿಪಾಲ

ಈ ಸಂಸ್ಥೆಯು ಡೆನ್ಮಾರ್ಕ್, ನಾರ್ವೇ, ಜರ್ಮನಿ ಹಾಗೂ ಫ್ರಾನ್ಸ್‌ನಂತಹ ದೇಶಗಳ ಪ್ರಸಿದ್ಧ ಕಾಲೇಜುಗಳ ಜೊತೆ ಸಹಯೋಗ ಹೊಂದಿದೆ.ಇದು ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆಯನ್ನು ನೀಡುವುದಲ್ಲದೆ ಇತರ ರಾಷ್ಟ್ರಗಳ ಜನರೊಂದಿಗೆ ಕೆಲಸ ಮಾಡಲು ಅವರನ್ನು ಸಿದ್ಧಪಡಿಸುತ್ತದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ದೊರೆಯುತ್ತದೆ.

6.ದೆಹಲಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ನವದೆಹಲಿ

6.ದೆಹಲಿ ಕಾಲೇಜ್ ಆಫ್ ಆರ್ಟ್ಸ್ ಆಂಡ್ ಕಾಮರ್ಸ್, ನವದೆಹಲಿ

RBS, TCS, IBM ಹಾಗೂ KPMG ಯಂತಹ ಪ್ರಸಿದ್ಧ ಕಂಪನಿಗಳು ಇಲ್ಲಿನ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಲ್ಯಾಬ್ ಹಾಗೂ ಉಪಕರಣಗಳು ಉತ್ತಮವಾಗಿವೆ. ಬಹಳ ಹಳೆಯ ಕಾಲೇಜು ಇದಾಗಿದ್ದು, ಹೊಸ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ವಿದ್ಯಾರ್ಥಿಗಳ ಒಲವುಳ್ಳ ಕಾಲೇಜು ಇದಾಗಿದೆ.

7.ಇಂದ್ರಪ್ರಸ್ಥ ಮಹಿಳಾ ಕಾಲೇಜ್, ನವದೆಹಲಿ

7.ಇಂದ್ರಪ್ರಸ್ಥ ಮಹಿಳಾ ಕಾಲೇಜ್, ನವದೆಹಲಿ

ಮಲ್ಟಿ ಮೀಡಿಯಾ ಹಾಗು ಸಮೂಹ ಸಂವಹನದಲ್ಲಿ ಬಿಎ ಪದವಿಯನ್ನು ಈ ಕಾಲೇಜ್ ನೀಡುತ್ತಿದ್ದು, ಪತ್ರಿಕೋದ್ಯಮ ಕೋರ್ಸ್ ವಿದ್ಯಾರ್ಥಿಗಳಿಗೆ ಕೇವಲ ಪತ್ರಿಕಾ ರಂಗದಲ್ಲಿ ಮಾತ್ರ ಅವಕಾಶವಲ್ಲ . ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಪಾಲಿಸಿ ರಿಸರ್ಚ್, ಡೆವಲಪ್‌ಮೆಂಟ್ ಸ್ಟಡೀಸ್, ಫ್ರೀಲ್ಯಾನ್ಸರ್ ಅಥವಾ ಉನ್ನತ ಶಿಕ್ಷಣವನ್ನು ಮಾಡಿ ಪ್ರೊಫೆಸರ್ ಕೂಡಾ ಆಗಬಹದು. ಇಂತಹ ಹಲವಾರು ವೃತ್ತಿಪರ ಆಯ್ಕೆಯನ್ನು ಕೆಲವೇ ಕೆಲವು ಕಾಲೇಜುಗಳು ನೀಡುತ್ತವೆ.

8.ಕಿಷಿನ್ಚಂದ್ ಚೆಲ್ಲರಾಮ್ ಕಾಲೇಜ್

8.ಕಿಷಿನ್ಚಂದ್ ಚೆಲ್ಲರಾಮ್ ಕಾಲೇಜ್

ಸಮೂಹ ಮಾದ್ಯಮದಲ್ಲಿನ ವಿವಿಧ ವಿಭಾಗಗಳಲ್ಲಿ ತಾಂತ್ರಿಕ ಕೌಶಲ್ಯವನ್ನು ಸಿಲೇಬಸ್‌ನಲ್ಲಿ ಅಳವಡಿಸಲಾಗುತ್ತಿದೆ. ಸಮೂಹ ಸಂವಹನದ ಡೈನಾಮಿಕ್ಸ್, ಇತಿಹಾಸದ ಬಗ್ಗೆ ಸ್ಪಷ್ಟವಾದ ಸಾಮಾಜಿಕ ತಿಳುವಳಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳ ಫಲಿತಾಂಶವೂ ಉತ್ತಮವಾಗಿದೆ . ಇಲ್ಲಿಂದ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲೂ ಇದ್ದಾರೆ.

9. ಕಮಲಾ ನೆಹರೂ ಕಾಲೇಜ್, ನವದೆಹಲಿ

9. ಕಮಲಾ ನೆಹರೂ ಕಾಲೇಜ್, ನವದೆಹಲಿ

ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಇರುವ ಇನ್ನೊಂದು ಕಾಲೇಜ್ ಎಂದರೆ ಕಮಲಾ ನೆಹರೂ ಕಾಲೇಜ್. ಐತಿಹಾಸಿಕ ಶಿಕ್ಷಣವನ್ನು ಒದಗಿಸುವುದರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಹುದ್ದೆ ಅಲಂಕರಿಸುವಲ್ಲಿ ಸಕ್ಷಮ್ಯರಾಗಿದ್ದಾರೆ. ಹಳೆ ವಿದ್ಯಾರ್ಥಿಗಳೂ ಕೂಡ ಮಾಧ್ಯಮ ಲೋಕದಲ್ಲಿ ಉನ್ನತ ಹುದ್ದೆಯಲ್ಲಿರುವುದರಲ್ಲಿ ಆಶ್ಚರ್ಯವೇ ಇಲ್ಲ.

10.  ಮದ್ರಾಸ್ ಕ್ರಿಶ್ವಿಯನ್ ಕಾಲೇಜ್, ಚೆನ್ನೈ

10. ಮದ್ರಾಸ್ ಕ್ರಿಶ್ವಿಯನ್ ಕಾಲೇಜ್, ಚೆನ್ನೈ

HP, HSBC, ಗೂಗಲ್‌ನಂತಹ ದೊಡ್ಡ ದೊಡ್ಡ ಕಂಪನಿಗಳು ಈ ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡುತ್ತಾರೆ. ಈ ಕಾಲೇಜು ಪತ್ರಿಕೋದ್ಯಮ ಮತ್ತು ಸಾಮೂಹಿಕ ಸಂವಹನ ಕ್ಷೇತ್ರದಲ್ಲಿ ಉತ್ಕೃಷ್ಟ ಶಿಕ್ಷಣ ಸಂಸ್ಥೆಯಾಗಿ ಉನ್ನತ ಸ್ಥಾನದಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬೇಕಾದಂತಹ ಉತ್ತಮ ಲ್ಯಾಬ್ ಸೌಲಭ್ಯಗಳನ್ನು ಇದು ಒದಗಿಸುತ್ತಿದೆ.

For Quick Alerts
ALLOW NOTIFICATIONS  
For Daily Alerts

English summary
Mass communication is one of the courses in demand nowadays because of the booming globalisation and digitalisation around the world. So read about the top 10 mass communication colleges in India where you can get the best of education and then be placed in a highly reputed company.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X