ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಹಳ್ಳಿಗೆ ವರ್ಗಾವಣೆ

ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

'ಇಂಡಿಯಾಸ್ ಫಸ್ಟ್ ಲೇಡಿ ಟೀಚರ್'ನ 186ನೇ ಜನ್ಮದಿನ

ಮೂರು ವರ್ಷ ಅವಧಿ ಮೀರಿದ ಶಿಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದೇ ಇದ್ದಾರೆ ಅಂತಹವರನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗುವುದು.

ಭದ್ರತಾಪಡೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಪೂರ್ವಸಿದ್ದತೆ ಬಗ್ಗೆ ತರಬೇತಿ

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ

 

2017-18ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು,

ನಗರ ಪ್ರದೇಶಗಳ ('ಎ' ವಲಯ) ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ ('ಸಿ' ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

2014ರಲ್ಲಿ ಪರೀಕ್ಷೆ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂರು ವರ್ಷದ ಅವಧಿ ಪೂರೈಸಿರುವ ಶಿಕ್ಷಕರ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ಕೊಟ್ಟು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ವರ್ಗಾವಣೆ ಪ್ರಾಧಿಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮೂರು ಹಂತದಲ್ಲಿ ಕಡ್ಡಾಯ ವರ್ಗಾವಣೆ ನಡೆಯಲಿದ್ದು, ಕೋರಿಕೆ ವರ್ಗಾವಣೆ ಬಯಸುವ ಶಿಕ್ಷಕರು ಗರಿಷ್ಠ ಐದು ವರ್ಷ ಪೂರೈಸಿರಬೇಕು. 'ಎ' ವಲಯದಲ್ಲಿ ಸತತ ಹತ್ತು ವರ್ಷ ಕೆಲಸ ಮಾಡಿದ್ದರೆ ಘಟಕದ (ಜಿಲ್ಲೆ) ಹೊರಗೆ ವರ್ಗಾವಣೆ ಹೊಂದಲು ಅರ್ಹರಿರುತ್ತಾರೆ.

ಯಾವುದೇ ತಾಲ್ಲೂಕಿನಲ್ಲಿ ಮಂಜೂರಾದ ಹುದ್ದೆಗಳ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದರೆ ವರ್ಗಾವಣೆ ನೀಡುವುದಿಲ್ಲ ಎಂದು ವಿವರಿಸಲಾಗಿದೆ.

ಆದರೆ, ದೈಹಿಕ ಮತ್ತು ವಿಶೇಷ ಶಿಕ್ಷಕರ ವರ್ಗಾವಣೆಗೆ ಖಾಲಿ ಹುದ್ದೆಗಳ ಮಿತಿ ಅನ್ವಯ ಆಗುವುದಿಲ್ಲ. ಯಾವುದೇ ಶಾಲೆಯಲ್ಲಿ 200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ದೈಹಿಕ ಮತ್ತು ವಿಶೇಷ ಶಿಕ್ಷಕರನ್ನು ನೇಮಿಸಲು ಅವಕಾಶವಿದೆ.

For Quick Alerts
ALLOW NOTIFICATIONS  
For Daily Alerts

English summary
Public Education Department has decided to mandate transfer of teachers who are not properly educated in urban areas ('A' zone) 'primary schools to rural areas (' C 'sector).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X