ಶಿಕ್ಷಕರ ದಿನಾಚರಣೆ ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತದ ಪ್ರಥಮ ಪ್ರಜೆಯಿಂದ ಚಿಕ್ಕ ಮಕ್ಕಳವರೆಗೂ ತಮಗೆ ವಿದ್ಯೆ ಕಲಿಸಿದ ಗುರುವಿಗೆ ನಮನ ಸಲ್ಲಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾಕಷ್ಟು ಪೋಸ್ಟ್ ಗಳನ್ನು ಬರೆಯಲಾಗುತ್ತಿದೆ. ಟ್ವಿಟ್ಟರ್ ನಲ್ಲಿಯೂ ಇಂದು ಹಲವರು ಶಿಕ್ಷಕರ ದಿನದಂದು ತಮ್ಮ ನೆಚ್ಚಿನ ಶಿಕ್ಷಕರನ್ನು ನೆನಪಿಸಿಕೊಂಡು ಶುಭಹಾರೈಸಿದ್ದಾರೆ.
ರಾಜಕಾರಣಿಗಳು, ಕ್ರಿಕೆಟ್ ತಾರೆಯರು, ಸಿನಿಮಾ ನಟನಟಿಯರು ಟ್ವಿಟರ್ ಮೂಲಕ ತಮ್ಮದೇ ಆದ ಸಂದೇಶವನ್ನು ರವಾನಿಸಿದ್ದಾರೆ. ಸಮಸ್ತ ಗುರುವೃಂದಕ್ಕೂ ಶುಭಹಾರೈಸುತ್ತ ಆ ಟ್ವೀಟ್ ಗಳತ್ತ ಕಣ್ಣು ಹಾಯಿಸೋಣ.
ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ರಿಂದ ನಮನ
ರಾಷ್ಟ್ರಪತಿ ರಾಮನಾಥ್ ಕೋವಿಂದ್
ದೇಶದ ಎಲ್ಲ ಶಿಕ್ಷಕ ವೃಂದಕ್ಕೂ ಶುಭ ಹಾರೈಕೆ ಶಿಕ್ಷಕರ ದಿನದಂದು ಸರ್ವಪಳ್ಳಿ ರಾಧಾಕೃಷ್ಣನ್ ಅವರಿಗೆ ನನ್ನ ನಮನಗಳು. ಹಾಗೆಯೇ ನಮ್ಮ ರಾಷ್ಟದ ಎಲ್ಲ ಶಿಕ್ಷಕ ವೃಂದಕ್ಕೂ ನನ್ನ ಶುಭಹಾರೈಕೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನಮನ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಸ್ಮರಿಸುತ್ತ "ಮಕ್ಕಳ ಮನಸ್ಸನ್ನು ತಿದ್ದುವ, ಪೋಷಿಸುವ ಮತ್ತು ಶಿಕ್ಷಣದ ಕಂಪನ್ನು ಸಮಾಜದಲ್ಲಿ ಹರಡುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಎಲ್ಲ ಶಿಕ್ಷಕ ಸಮುದಾಯಕ್ಕೂ ನನ್ನ ನಮನಗಳು" ಎಂದು ಟ್ವೀಟ್ ಮಾಡಿದ್ದಾರೆ.
ಅಭಿನಂದನೆ ಸಲ್ಲಿಸಿದ ಸಿ.ಎಂ ಸಿದ್ದರಾಮಯ್ಯ
ಸಿ.ಎಂ ಸಿದ್ದರಾಮಯ್ಯ
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೂಡ ಟ್ವಿಟರ್ ಮೂಲಕ ಶಿಕ್ಷಕರಿಗೆ ಅಭಿನಂದನೆ ಸಲ್ಲಸಿದ್ದಾರೆ. 'ಮಾಜಿ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ರ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯಂದು ದೇಶ ಕಟ್ಟುವ ಕಾಯಕದಲ್ಲಿ ನಿರತರಾದ ಶಿಕ್ಷಕ ಸಮುದಾಯವನ್ನು ಅಭಿನಂದಿಸೋಣ' ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ನಮನ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ
ಯುವಮನಗಳನ್ನು ತಿದ್ದಲು ತಮ್ಮ ಬದುಕನ್ನು ಮುಡಿಪಾಗಿಟ್ಟ ಎಲ್ಲಾ ಶಿಕ್ಷಕರಿಗೂ ನಮನಗಳು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ವಿರೇಂದ್ರ ಸೆಹ್ವಾಗ್ ಟ್ವೀಟ್
ವಿರೇಂದ್ರ ಸೆಹ್ವಾಗ್
ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ನಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಸೆಹ್ವಾಗ್ ಟ್ವಿಟರ್ ಮೂಲಕವು ಎಲ್ಲರ ಹೃದಯ ಗೆದ್ದಿದ್ದಾರೆ. ಶಿಕ್ಷಕರ ದಿನಕ್ಕೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಟ್ವೀಟ್ ಮಾಡಿರುವ ಸೆಹ್ವಾಗ್ 'ನಿಜವಾದ ಶಿಕ್ಷಕ ಹೃದಯದಿಂದ ಕಲಿಸುತ್ತಾನೆ ಒಬ್ಬ ಮಹಾನ್ ಶಿಕ್ಷಕ ಹೃದಯದಿಂದ ಕಲಿಸುತ್ತಾನೆ, ಪುಸ್ತಕದಿಂದಲ್ಲ. ನನಗೆ ಕಲಿಸಿದ ಎಲ್ಲ ಶಿಕ್ಷಕಕರಿಗೂ ನಾನು ಸದಾ ಋಣಿ ಎಂದು ಬರೆದುಕೊಂಡಿದ್ದಾರೆ.
In India, 5th September, India's 2nd president Dr.Sarvepalli Radhakrishnan's birthday is celebrated as Teachers' Day as a mark of tribute to the contribution made by teachers to the society. Here are some tweets by famous personalities on teachers' day.