ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ಯುಜಿಸಿ ನೆಟ್ ಪರೀಕ್ಷೆಯ ಪ್ರವೇಶ ಪತ್ರ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ವೆಬ್ಸೈಟ್ ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದಾಗಿದೆ.
ಡಿಸಂಬರ್ 9 ರಿಂದ 23 ರವರೆಗೆ ಈ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದಾಗಿದೆ. ಇನ್ನು ಈ ನೆಟ್ ಪರೀಕ್ಷೆಯ ಫಲಿತಾಂಶವು ಜನವರಿ 10, 2019 ರಂದು ಹೊರಬೀಳಲಿದೆ ಎಂದು ಪ್ರಕಟಣೆಯಿಂದ ತಿಳಿದುಬಂದಿದೆ.
ಯುಜಿಸಿ ನೆಟ್ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್ ಲೋಡ್ ಮಾಡಲು ಫಾಲೋ ಮಾಡಬೇಕಾದ ಸ್ಟೆಪ್ಸ್
ಸ್ಟೆಪ್ 1: ಯುಜಿಸಿ ಆಫೀಶಿಯಲ್ ಸೈಟ್ಗೆ ವಿಸಿಟ್ ಮಾಡಿ
ಸ್ಟೆಪ್ 2: ಅಡ್ಮಿಟ್ ಕಾರ್ಡ್ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಟ್ಯಾಬ್ ತೆರೆದುಕೊಳ್ಳುತ್ತದೆ, ನಿಮ್ಮ ಅರ್ಜಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ
ಸ್ಟೆಪ್ 4: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ
ಸ್ಟೆಪ್ 5: ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ
ಯುಜಿಸಿ ನೆಟ್ 2018: ಹೊಸ ಪರೀಕ್ಷೆ ಮಾದರಿ
ಈ ವರ್ಷದಿಂದ ಎನ್ಟಿಎ ನೆಟ್ ಪರೀಕ್ಷೆಯನ್ನ ಆಯೋಜಿಸಲಿದೆ. ಈ ನೆಟ್ ಪರೀಕ್ಷೆಯಲ್ಲಿ ಎರಡು ಪೇಪರ್ ಗಳಿದ್ದು, ಪೇಪರ್ 1 ಹಾಗೂ ಪೇಪರ್ 2 ಗೆ ಅಭ್ಯರ್ಥಿಗಳು ಉತ್ತರಿಸಬೇಕಿದೆ. ಈ ಮೊದಲು ಮೂರು ಪೇಪರ್ಗೆ ಉತ್ತರಿಸಬೇಕಿತ್ತು.