ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್ಟಿಎ) ಯುಜಿಸಿ ಎನ್ಇಟಿ 2020 ಜೂನ್ ಪರೀಕ್ಷೆಯ 26 ವಿಷಯಗಳ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.
ಎನ್ಇಟಿ ಜೂನ್ 2020 ಪರೀಕ್ಷೆಯನ್ನು ನವೆಂಬರ್ 4 ರಿಂದ ನವೆಂಬರ್ 13,2020ರ ವರೆಗೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಾವು ಬರೆದ ಉತ್ತರ ಪತ್ರಿಕೆ ಜೊತೆಗೆ ತಾತ್ಕಾಲಿಕ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಪ್ರತಿ ಪ್ರಶ್ಬೆಗೆ 1,000/-ರೂ ಪಾವತಿಸಿ ನವೆಂಬರ್ 18,2020ರ ಸಂಜೆ 6 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಬಹುದು.
ಅಭ್ಯರ್ಥಿಗಳು ಕೀ ಉತ್ತರ ವೀಕ್ಷಿಸುವುದು ಮತ್ತು ಆಕ್ಷೇಪಣೆ ಸಲ್ಲಿಸುವುದು ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಎನ್ಟಿಎ ಅಧಿಕೃತ ವೆಬ್ಸೈಟ್ https://ugcnet.nta.nic.in/webinfo/public/home.aspx ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಗೂ ಸೆಕ್ಯುರಿಟಿ ಪಿನ್ ನೀಡಿ ಸಬ್ಮಿಟ್ ಮಾಡಿ.
ಸ್ಟೆಪ್ 3: ಅಭ್ಯರ್ಥಿಯು "View Question Paper" ಮೇಲೆ ಕ್ಲಿಕ್ ಮಾಡಿ ನಂತರ ಕೀ ಉತ್ತರ ವೀಕ್ಷಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು "Click to view/challenge answer key" ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4: ನಂತರ ಕೀ ಉತ್ತರಗಳನ್ನು ವೀಕ್ಷಿಸಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.
ಅಭ್ಯರ್ಥಿಗಳು ನೇರವಾಗಿ ಕೀ ಉತ್ತರ ವೀಕ್ಷಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.