UGC NET December 2019: ಎನ್‌ಇಟಿ ಡಿಸೆಂಬರ್ ಪರೀಕ್ಷೆಯ ಕೀ ಉತ್ತರ ಪ್ರಕಟ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ ಎನ್‌ಇಟಿ ಡಿಸೆಂಬರ್ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಸರಿ ಉತ್ತರಗಳನ್ನು ಚೆಕ್‌ ಮಾಡಿಕೊಳ್ಳಬಹುದು.

ಎನ್‌ಇಟಿ ಡಿಸೆಂಬರ್ ಪರೀಕ್ಷೆಯ ಕೀ-ಉತ್ತರ ರಿಲೀಸ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ ಎನ್‌ಇಟಿ 2019 ಪರೀಕ್ಷೆಯನ್ನು ಡಿಸೆಂಬರ್ 2 ರಿಂದ 6 ರವರೆಗೆ ದೇಶದಾದ್ಯಂತ ಹಲವು ಕೇಂದ್ರಗಳಲ್ಲಿ ನಡೆಸಿತ್ತು. ಎನ್‌ಇಟಿ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, 180 ನಿಮಿಷಗಳ ಪರೀಕ್ಷಾ ಅವಧಿ ಈ ಪರೀಕ್ಷೆಗೆ ನೀಡಲಾಗಿತ್ತು. ಪರೀಕ್ಷಾ ಫಲಿತಾಂಶವು ಡಿಸೆಂಬರ್ 31,2019ರಂದು ಪ್ರಕಟಗೊಳ್ಳಲಿದ್ದು, ಈಗ ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

ಎನ್‌ಟಿಎ ಪ್ರಕಟಿಸಿರುವ ಕೀ ಉತ್ತರಗಳ ಬಗೆಗೆ ಅಭ್ಯರ್ಥಿಗಳಿಗೆ ಆಕ್ಷೇಪಣೆ ಇದ್ದಲ್ಲಿ ಆನ್‌ಲೈನ್‌ ಮೂಲಕ ಪ್ರತಿ ಪ್ರಶ್ನೆಗೆ 1000/-ರೂ ಪಾವತಿಸಿ ಡಿಸೆಂಬರ್ 13,2019ರೊಳಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು.

ಎನ್‌ಇಟಿ ಕೀ ಉತ್ತರಗಳನ್ನು ಚೆಕ್ ಮಾಡುವುದು ಹೇಗೆ:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://ugcnet.nta.nic.in/WebInfo/Public/View.aspx?page=1 ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ view question paper and challenge provisional answer key ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು ನಿಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅಥವಾ ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ.

ಲಾಗಿನ್‌ ಆಗಲು ಎರಡು ಪ್ರತ್ಯೇಕ ಲಿಂಕ್‌ ಗಳನ್ನು ನೀಡಲಾಗಿದ್ದು, ಅಭ್ಯರ್ಥಿಗೆ ಸೂಕ್ತವೆನಿಸಿದ ಲಿಂಕ್ ಕ್ಲಿಕ್ ಮಾಡಿ ತಾವು ನೀಡಿದ ಉತ್ತರಗಳನ್ನು ಮತ್ತು ಎನ್‌ಟಿಎ ಉತ್ತರಗಳನ್ನು ಚೆಕ್‌ ಮಾಡಬಹುದು.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಚೆಕ್‌ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
UGC NET december 2019 answer key released in official website. Candidates can check their answers now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+