CSIR UGC NET December 2019: ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ

ಡಿಸೆಂಬರ್ 2019ರ ಸಿಎಸ್ಐಆರ್ ಎನ್ಇಟಿಯ ಅಧಿಕೃತ ಅಧಿಸೂಚನೆ ಈಗಾಗಲೇ ಪ್ರಕಟಗೊಂಡಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೊಬರ್ 9,2019ರ ವರೆಗೆ ಅವಕಾಶ ನೀಡಲಾಗಿತ್ತು. ತದನಂತರ ಅರ್ಜಿ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 15,2019ರ ವರೆಗೆ ವಿಸ್ತರಿಸಲಾಗಿತ್ತು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂದು ಕೊನಯೆ ದಿನವಾಗಿರುತ್ತದೆ. ಹಾಗಾಗಿ ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಭೌತಶಾಸ್ತ್ರ, ಜೀವಶಾಸ್ತ್ರ, ಮ್ಯಾಥಮೆಟಿಕಲ್ ಸೈನ್ಸ್ ವಿಷಯ ಸೇರಿದಂತೆ ವಿವಿಧ ವಿಷಯಗಳಿಗೆ ಸಿ‌ಎಸ್‌ಐ‌ಆರ್-ದಿ ಕೌನ್ಸಿಲ್ ಆಫ್ ಸೈನ್‌ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್‌ಇಟಿ ಪರೀಕ್ಷೆಯನ್ನು ನಡೆಸುತ್ತದೆ.

ಎನ್‌ಇಟಿ ಡಿಸೆಂಬರ್‌ ಪರೀಕ್ಷೆಗೆ ಅರ್ಜಿ ಹಾಕಲು ಅ.15 ಕೊನೆಯ ದಿನ

ವಿದ್ಯಾರ್ಹತೆ :

ಸಿಎಸ್ಐಆರ್ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು ಅಥವಾ ಬಿಇ/ಬಿ.ಟೆಕ್/ಬಿ.ಫಾರ್ಮ/ಎಂಬಿಬಿಎಸ್/ಇಂಟೆಗ್ರೇಟೆಡ್ ಬಿಎಸ್-ಎಂಎಸ್ ಪೂರ್ಣಗೊಳಿಸಿರಬೇಕು.

ವಯೋಮಿತಿ :

ಜೂನಿಯರ್ ರಿಸರ್ಚ್ ಫೆಲೋಶಿಪ್‌ ಬಯಸುವವರಿಗೆ ಗರಿಷ್ಠ ವಯೋಮಿತಿ 28 ವರ್ಷ. ಸಹಾಯಕ ಪ್ರಾಧ್ಯಾಪಕ ಬಯಸುವವರಿಗೆ ವಯೋಮಿತಿ ಇಲ್ಲ.

ಅರ್ಜಿ ಶುಲ್ಕ :

ಸಾಮಾನ್ಯ /ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 1000/-ರೂ

ಓಬಿಸಿ ಅಭ್ಯರ್ಥಿಗಳಿಗೆ ರೂ.500/-ರೂ
ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,ಅಂಗವಿಕಲ ಮತ್ತು ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ರೂ.250/-ರೂ ಇರುತ್ತದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಅಕ್ಟೋಬರ್ 16,2019ರೊಳಗೆ ಪಾವತಿಸಬಹುದಾಗಿರುತ್ತುದೆ.

ಪರೀಕ್ಷೆಯ ವಿವರ:

ಪರೀಕ್ಷಾ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ

ಪರೀಕ್ಷೆಯ ಅಂಕಗಳು : ಒಟ್ಟು 300

ಪತ್ರಿಕೆ - 2 ಪ್ರಶ್ನೆ ಪತ್ರಿಕೆಗಳು

ಸಮಯ - ಒಟ್ಟು 3 ಗಂಟೆಗಳ ಅವಧಿ

ಎನ್‌ಇಟಿ (ನೆಟ್) 2019 ಡಿಸೆಂಬರ್ ಪರೀಕ್ಷೆಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಸೆಪ್ಟೆಂಬರ್ 9,2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 15,2019
ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ : ನವೆಂಬರ್ 9,2019
ಪರೀಕ್ಷೆ ದಿನಾಂಕ : ಡಿಸೆಂಬರ್ 15,2019
ಫಲಿತಾಂಶ ದಿನಾಂಕ : ಡಿಸೆಂಬರ್ 31, 2019

ಎನ್‌ಇಟಿ ಡಿಸೆಂಬರ್‌ ಪರೀಕ್ಷೆಗೆ ಅರ್ಜಿ ಹಾಕಲು ಅ.15 ಕೊನೆಯ ದಿನ

ಎನ್‌ಇಟಿ (ನೆಟ್) 2019 : ಅರ್ಜಿ ಸಲ್ಲಿಸುವುದು ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ನೀಟ್ 2019 ಡಿಸೆಂಬರ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಸ್ಟೆಪ್ 1: ಯುಜಿಸಿ ಎನ್‌ಟಿಎ ಅಧಿಕೃತ ವೆಬ್‌ಸೈಟ್‌ https://ugcnet.nta.nic.in/webinfo/public/home.aspx ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಆನ್‌ಲೈನ್‌ ಅರ್ಜಿ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿ
ಸ್ಟೆಪ್ 4: ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
CSIR UGC NET December 2019 registration begins from today. Who have completed masters studies can apply through online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X