ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಯುಜಿಸಿ ನೆಟ್ ... ಪರೀಕ್ಷೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್!

ಈ ವರ್ಷದಿಂದ ಯುಜಿಸಿ ನೆಟ್ ಪರೀಕ್ಷೆಯು ಜುಲೈ ಹಾಗೂ ಡಿಸಂಬರ್ ತಿಂಗಳಲಿನಲ್ಲಿ ನಡೆಯಲಿದ್ದು, ವರ್ಷಕ್ಕೆ ಎರಡು ಬಾರಿ ನಡೆಯಲಿದೆ

ಈ ವರ್ಷದಿಂದ ಯುಜಿಸಿ ನೆಟ್ ಪರೀಕ್ಷೆಯು ಜುಲೈ ಹಾಗೂ ಡಿಸಂಬರ್ ತಿಂಗಳಲಿನಲ್ಲಿ ನಡೆಯಲಿದ್ದು, ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ನ್ಯಾಷನಲ್ ಟೆಸ್ಟಿಂಗ್ ಆಜೆನ್ಸಿ ಈ ಹೊಸ ಬದಲಾವಣೆ ತಂದಿದ್ದು, ನೆಟ್ ಮಾತ್ರವಲ್ಲದೇ ಇನ್ನಿತ್ತರ ಪ್ರಮುಖ ಪರೀಕ್ಷೆಗಳಾದ ಜೆಇಇ (ಪ್ರಮುಖ) ಮತ್ತು ನೀಟ್ ( ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಂಸ್ ಟೆಸ್ಟ್)ಕೂಡಾ ವರ್ಷಕ್ಕೆ ಎರಡು ಬಾರಿ ನಡೆಯಲಿದೆ.

ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಯುಜಿಸಿ ನೆಟ್ ... ಪರೀಕ್ಷೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್!

ಹಲವಾರು ಕಾಲೇಜುಗಳಲ್ಲಿ ಇಂಜಿನೀಯರ್ ಪದವಿ ಸೀಟಿಗಾಗಿ ನಡೆಸುವ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಪ್ರಮುಖ) ಪರೀಕ್ಷೆಯು ಜನವರಿ ಹಾಗೂ ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು, ಅದೇ ಥರಹ ನೀಟ್ ಪರೀಕ್ಷೆಯು ಫೆಬ್ರವರಿ ಹಾಗೂ ಮೇ ತಿಂಗಳಿನಲ್ಲಿ ನಡೆಯಲಿದೆ. ಸದ್ಯಕ್ಕೆ ಈ ಎರಡು ಪರೀಕ್ಷೆಯು ವರ್ಷಕ್ಕೆ ಒಂದೇ ಬಾರಿ ನಡೆಯಲಿದೆ.

ಅರ್ಹತೆಗಳು:

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಟ ೫೫% ಅಂಕ ಪಡೆದು ಪಾಸಾಗಿರಬೇಕು. ಒಬಿಸಿ ಕೆಟಗರಿ ವಿದ್ಯಾರ್ಥಿಗಳಿಗೆ 5 % ವಿನಾಯಿತಿ ಇದೆ. ಎಸ್‌ಸಿ, ಎಸ್‌ಟಿ,ವಿಕಲಚೇತನ ಹಾಗೂ ತೃತೀಯ ಲಿಂಗಿಗಳು ಕನಿಷ್ಟ 50% ಅಂಕದೊಂದಿಗೆ ತೇರ್ಗಡೆಯಾಗಿರಬೇಕು.

ಅಷ್ಟೇ ಅಲ್ಲ ಈ ಪರೀಕ್ಷೆಗೆ ಯಾರೂ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಿರೋ ಅವರು ಕೂಡಾ ಅಪ್ಲೈ ಮಾಡಬಹುದು. ಅಷ್ಟೇ ಅಲ್ಲ ಪಿಹೆಚ್ ಡಿ ಅಭ್ಯರ್ಥಿಗಳು ಯಾರು ಸೆಪ್ಟಂಬರ್ 19, 1991ರಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೊ ಅವರು ಕೂಡಾ ಅಪ್ಲೈ ಮಾಡಬಹುದು.

ವಯೋಮಿತಿ:

ಜ್ಯೂನಿಯರ್ ರಿಸರ್ಚ್ ಫೆಲೋಶಿಪ್: ಜುಲೈ 1, 2018ಕ್ಕೆ ಅಭ್ಯರ್ಥಿಗಳಿಗೆ 30 ವರ್ಷ ಮೀರಿರಬಾರದು. ಆದ್ರೆ ಒಬಿಸಿ, ಎಸ್‌ಸಿ/ಎಸ್‌ಟಿ/ವಿಕಲಚೇತನ/ತೃತೀಯ ಲಿಂಗಿಗಳಿಗೆ 5 ವರ್ಷದ ವಿನಾಯಿತಿ ಇದೆ. ಇನ್ನೂ ರಿಸರ್ಚ್ ವಿದ್ಯಾರ್ಥಿಗಳಿಗು ಕೂಡಾ ವಿನಾಯಿತಿ ನೀಡಲಾಗಿದೆ. ಎಲ್‌ಎಲ್‌ಎಂ ಪದವಿ ಪಡೆದ ಅಭ್ಯರ್ಥಿಗಳಿಗೆ 3 ವರ್ಷ ರಿಯಾಯಿತಿ ಇದೆ.

ಯುಜಿಸಿ ನೆಟ್ 2018: ಹೊಸ ಪರೀಕ್ಷೆ ಮಾದರಿ ಹೀಗಿದೆ:

ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿಗೆ ಉತ್ತರಿಸಬೇಕಾಗಿದೆ. ಪೇಪರ್ 1 ಹಾಗೂ ಪೇಪರ್ 2 ಎಂಬ ಎರಡು ಪತ್ರಿಕೆಗಳು ಇವೆ.

ಪೇಪರ್ 1: 100 ಅಂಕಗಳನ್ನ ಈ ಪತ್ರಿಕೆ ಹೊಂದಿದೆ. 50 ಆಬ್ ಜೆಕ್ಟೀವ್ ಟೈಪ್ ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಯು 2 ಅಂಕಗಳನ್ನ ಒಳಗೊಂಡಿದೆ. ಪರೀಕ್ಷೆ ಅವಧಿ 9.30 ರಿಂದ 10.30 ವರೆಗೆ.

ಪೇಪರ್ 2: ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಸಬ್‌ಜೆಕ್ಟ್ ಮೇರೆಗೆ ಈ ಪ್ರಶ್ನಾ ಪತ್ರಿಕೆ ತಯಾರಿಸಲಾಗಿರುತ್ತದೆ. ಒಟ್ಟು 100 ಅಂಕದ ಪ್ರಶ್ನಾಪತ್ರಿಕೆ ಇದಾಗಿದ್ದು, ಆಬ್ ಜೆಕ್ಟೀವ್ ಟೈಪ್ ಪ್ರಶ್ನೆಗಳನ್ನ ನೀಡಲಾಗಿರುತ್ತದೆ. ಈ ಪರೀಕ್ಷೆ ಅವಧಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ.

ಹಿಂದಿನ ವರ್ಷ ನವಂಬರ್ ತಿಂಗಳಿನಲ್ಲಿ ಸಿಬಿಎಸ್ಇ ಆಯೋಜಿಸಿದ್ದ ನೆಟ್ ಪರೀಕ್ಷೆಯಲ್ಲಿ 9.30 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. 91 ನಗರಗಳಲ್ಲಿ ಹಾಗೂ 1700 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು.

More News  

For Quick Alerts
ALLOW NOTIFICATIONS  
For Daily Alerts

English summary
From This year Onwards, the UGC NET exam will be conducted twice a year, once in july and then in december by the NAtional Testing Agency. Along with Net, Other Exams like Jee (main) and Neet will also be conducted twice a year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+