UGC Releases Academic Calendar 2020-21 : ಪ್ರಥಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಹೊಸ ಮಾರ್ಗಸೂಚಿ

ಪ್ರಥಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗಸೂಚಿಗೆ ಅನುಮೋದಿಸಿದ ಯುಜಿಸಿ

2020-21ನೇ ಸಾಲಿನ ಪ್ರಥಮ ವರ್ಷದ ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇಳಾಪಟ್ಟಿ ಮಾರ್ಗಸೂಚಿಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸೋಮವಾರ ಅನುಮೋದಿಸಿದೆ. ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಅಧಿಕಾರಿಗಳು ಪ್ರಥಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಪರೀಕ್ಷೆಗಳಿಗಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ರಥಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗಸೂಚಿಗೆ ಅನುಮೋದಿಸಿದ ಯುಜಿಸಿ

ಮಾರ್ಗಸೂಚಿಗಳ ಅನುಸಾರ 2020-21ರ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 1 ರಿಂದ ತರಗತಿಗಳನ್ನು ಪ್ರಾರಂಭಿಸಬಹುದು. ಒಂದು ವೇಳೆ ಅರ್ಹತಾ ಪರೀಕ್ಷೆಗಳ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾದರೆ ಅಂತಹ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯಗಳು ನವೆಂಬರ್ 18 ರೊಳಗೆ ಶೈಕ್ಷಣಿಕ ವರ್ಷ ಪ್ರಾರಂಭ ಮಾಡಬಹುದು ಎಂದು ಆಯೋಗ ಹೇಳಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ನಡೆಸಲು ಯಾವುದೇ ರೀತಿಯ ನಿಯಮಗಳಿಲ್ಲ ಎಂದು ಯುಜಿಸಿ ಉಪಾಧ್ಯಕ್ಷ ಭೂಷಣ್ ಪಟವರ್ಧನ್ ಹೇಳಿದ್ದಾರೆ.

ಪ್ರಥಮ ವರ್ಷದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗಸೂಚಿಗೆ ಅನುಮೋದಿಸಿದ ಯುಜಿಸಿ

ಮೆರಿಟ್ ಅಥವಾ ಇತರೆ ಪ್ರವೇಶಾತಿ ಪ್ರಕ್ರಿಯೆ ಮೂಲಕ ನಡೆಸುವ ಪ್ರವೇಶಾತಿಯು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು ಮತ್ತು ಉಳಿದ ಖಾಲಿ ಸೀಟುಗಳು ನವೆಂಬರ್ 30 ರೊಳಗೆ ಭರ್ತಿ ಆಗಬೇಕು ಎಂದು ಯುಜಿಸಿ ಹೇಳಿದೆ. "ಪ್ರವೇಶ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಸಂಸ್ಥೆಗಳು ತಮ್ಮ ಶೈಕ್ಷಣಿಕ ವರ್ಷವನ್ನು ಬೇಗನೇ ಪ್ರಾರಂಭಿಸಬಹುದು ಅದಕ್ಕಾಗಿ ನವೆಂಬರ್ 18 ರವರೆಗೆ ಕಾಯಬೇಕಾಗಿಲ್ಲ. ಮಹಾರಾಷ್ಟ್ರದ ಪರಿಸ್ಥಿತಿಯನ್ನು ಪರಿಗಣಿಸಿ ಈ ಮಾರ್ಗಸೂಚಿಯನ್ನು ನೀಡಲಾಗಿದೆ, ಅಲ್ಲಿ ಪರೀಕ್ಷೆಗಳು ಅಕ್ಟೋಬರ್ ವೇಳೆಗೆ ಕೊನೆಗೊಳ್ಳುತ್ತವೆ" ಎಂದು ಪಟವರ್ಧನ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಪ್ರವೇಶಾತಿ ರದ್ದತಿ ಅಥವಾ ವಲಸೆ ಕಾರಣದಿಂದಾಗಿ ಪ್ರವೇಶಾತಿ ರದ್ದತಿ ಮಾಡಿದ್ದಲ್ಲಿ ನವೆಂಬರ್ 30ರ ವರೆಗೆ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಆಯೋಗ ಹೇಳಿದೆ. ಇದರರ್ಥ ಎಲ್ಲಾ ಶುಲ್ಕಗಳು ಸೇರಿದಂತೆ ಸಂಪೂರ್ಣ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ (ಶೂನ್ಯ ರದ್ದತಿ ಶುಲ್ಕ). ತದನಂತರ ಡಿಸೆಂಬರ್ 31 ರವರೆಗೆ ಪ್ರವೇಶ ರದ್ದತಿ ಅಥವಾ ಹಿಂಪಡೆಯುವಿಕೆಯ ಮೇಲೆ, 1,000 ರೂಗಳಷ್ಟು ಪ್ರೆಸೆಸಿಂಗ್ ಶುಲ್ಕವಾಗಿ ಕಡಿತವನ್ನು ಮಾಡಬಹುದು. ವಿದ್ಯಾರ್ಥಿಗಳಿಗೆ ಪದವಿಗಳನ್ನು ಸಕಾಲಿಕವಾಗಿ ನೀಡುವುದಕ್ಕಾಗಿ ತಮ್ಮ ರಜಾದಿನಗಳನ್ನು ಮೊಟಕುಗೊಳಿಸಲು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
2020-21 academic calender for first year ug and pg students has been approved by UGC
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X