'ಯೂನಿವರ್ಸಿಟಿ' ಪದ ಕೈಬಿಡಲು ರಾಜ್ಯದ ಐದು ಡೀಮ್ಡ್ ವಿವಿಗಳಿಗೆ ಆದೇಶ

ಗುರುವಾರ ಸಂಜೆ 4ಗಂಟೆಯೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ವಿವಿಗಳ ಆಡಳಿತ ಮಂಡಳಿಗಳಿಗೆ ಕಾಲಾವಕಾಶವಿದೆ. ದೇಶದಾದ್ಯಂತ ಒಟ್ಟು 123 ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಈ ನೋಟಿಸ್ ನೀಡಲಾಗಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮ್ಮ ಸಂಸ್ಥೆಗಳ ಹೆಸರಿನಿಂದ ಯುನಿವರ್ಸಿಟಿ (ವಿಶ್ವವಿದ್ಯಾಲಯ) ಪದ ಕೈ ಬಿಡುವಂತೆ ಕರ್ನಾಟಕದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೋಟಿಸ್ ನೀಡಿತ್ತು. ಈಗ ರಾಜ್ಯದ ಐದು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ 'ಯೂನಿವರ್ಸಿಟಿ' ಪದ ಕೈಬಿಡುವಂತೆ ಅಂತಿಮ ಆದೇಶ ನೀಡಿದೆ.

'ಯೂನಿವರ್ಸಿಟಿ' ಪದ ಕೈಬಿಡಲು ಡೀಮ್ಡ್ ವಿವಿಗಳಿಗೆ ಆದೇಶ

ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿಕೆ ನೀಡಿತ್ತು.

ಗುರುವಾರ ಸಂಜೆ 4ಗಂಟೆಯೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ವಿವಿಗಳ ಆಡಳಿತ ಮಂಡಳಿಗಳಿಗೆ ಕಾಲಾವಕಾಶವಿದೆ. ದೇಶದಾದ್ಯಂತ ಒಟ್ಟು 123 ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಈ ನೋಟಿಸ್ ನೀಡಲಾಗಿದೆ.

ಯಾವ ಡೀಮ್ಡ್ ವಿವಿಗಳಿಗೆ ಕುತ್ತು?

ಕರ್ನಾಟಕದ ಕ್ರೈಸ್ಟ್ ವಿಶ್ವವಿದ್ಯಾಲಯ, ಜೈನ್ ವಿಶ್ವವಿದ್ಯಾಲಯ, ಯೆನೆಪೋಯ ವಿಶ್ವವಿದ್ಯಾಲಯಗಳಿಗೆ ನವೆಂಬರ್ 30 ಗುರುವಾರದ ಸಂಜೆ 4ರೊಳಗೆ ಬದಲಿ ಹೆಸರು ಸೂಚಿಸುವಂತೆ ಯುಜಿಸಿ ಆದೇಶಿಸಿದೆ. ಈ ಆದೇಶ ಪಾಲನೆ ಮಾಡದಿದ್ದರೆ ಯೂನಿವರ್ಸಿಟಿ ಹೆಸರನ್ನು ತೆಗೆಯಬೇಕಾಗುತ್ತದೆ .

ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ * ಜೆಎನ್ ಮೆಡಿಕಲ್ ಕಾಲೇಜ್, ಬೆಳಗಾವಿ * ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಉಡುಪಿ ತಮ್ಮ ಸಂಸ್ಥೆಯ ಹೆಸರಿನ ಜತೆಗಿರುವ ಯೂನಿವರ್ಸಿಟಿ ಪದವನ್ನು ಕೈಬಿಟ್ಟು ಈ ಮುಂಚೆ ಇದ್ದ ಹಾಗೆ ಹೆಸರನ್ನು ಬಳಸುವಂತೆ ಸೂಚಿಸಲಾಗಿದೆ.

ದೇಶದ ಇತರೆ ಡೀಮ್ಡ್ ವಿವಿಗಳಿಗೆ ಕುತ್ತು ಯುಜಿಸಿಯ ಇತ್ತೀಚಿನ ಆದೇಶದಂತೆ ಸಿಂಬಿಯೊಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ಹರಿದ್ವಾರದ ಗುರುಕುಲ್ ಕಂಗ್ರಿ ವಿಶ್ವವಿದ್ಯಾಲಯ, ಹರ್ಯಾಣದ ಮಹರ್ಶಿ ಮರ್ಕಂಡೇಶ್ವರ್ ವಿವಿ, ಫರಿದಾಬಾದಿನ ಲಿಂಗಯ ವಿವಿಗಳು ಬದಲಿ ಹೆಸರಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಯುಜಿಸಿ ಅಥವಾ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಗುರುವಾರ ಸಂಜೆ 4ರೊಳಗೆ ಅರ್ಜಿ ಸಲ್ಲಿಸಬೇಕಿದೆ, ಇಲ್ಲದಿದ್ದರೆ ಈ ಸಂಸ್ಥೆಗಳ ಮೇಲೂ ಕ್ರಮ ಜರುಗಿಸಬಹುದಾಗಿದೆ.

ಡೀಮ್ಡ್ ಶಿಕ್ಷಣ ಸಂಸ್ಥೆ

ಡೀಮ್ಡ್ ಸ್ಥಾನಮಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ನಿಯಂತ್ರಣದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಇರುವಷ್ಟೇ ಹಕ್ಕು ಮತ್ತು ಅಧಿಕಾರಗಳಿರುತ್ತವೆ. ಡೀಮ್ಡ್ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರದ ಯಾವ ನಿಯಂತ್ರಣವೂ ಇರುವುದಿಲ್ಲ. ಅದು ಆಡಳಿತಾತ್ಮಕ ವ್ಯವಹಾರವಿರಬಹುದು, ವ್ಯವಸ್ಥೆ ಇರಬಹುದು, ಸಂಬಳ ನಿರ್ಧಾರ, ನೀಡಿಕೆ ಎಲ್ಲವೂ ಮುಕ್ತ ಹಾಗೂ ಮ್ಯಾನೇಜ್‌ಮೆಂಟ್ ನಿಯಂತ್ರಣದಲ್ಲಿರುತ್ತವೆ. ಅವು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತವೆ, ಅಡ್ಮಿಶನ್ ಮಾಡಿಕೊಳ್ಳುತ್ತವೆ. ತಮಗೆ ಇಷ್ಟ ಬಂದಂತೆ ಪಠ್ಯಕ್ರಮ(ಸಿಲಬಸ್)ವನ್ನೂ ರೂಪಿಸುತ್ತವೆ. ಸ್ವತಂತ್ರವಾಗಿ ಪ್ರಶ್ನೆ ಪತ್ರಿಕೆಗಳನ್ನೂ ಸಿದ್ಧಪಡಿಸುತ್ತವೆ, ಮೌಲ್ಯಮಾಪನ ಮಾಡುತ್ತವೆ.

More News  

For Quick Alerts
ALLOW NOTIFICATIONS  
For Daily Alerts

English summary
Five deemed universities of Karnataka have been given an ultimatum by the UGC to immediately discontinue the word ‘university’ with their name.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+