ವಿಶ್ವವಿದ್ಯಾಲಯಗಳ ಹೆಸರುಗಳ ಜೊತೆಗೆ ಹೊಂದಿಕೊಂಡಿರುವ ಹಿಂದೂ ಮತ್ತು ಮುಸ್ಲಿಂ ಪದಗಳನ್ನು ತೆಗೆದುಹಾಕುವಂತೆ ಯುಜಿಸಿ ಆದೇಶ ಹೊರಡಿಸಿದೆ.
ಬನಾಸರ್ ಹಿಂದೂ ವಿಶ್ವವಿದ್ಯಾಲಯ ಮತ್ತು ಆಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರುಗಳಿಂದ ಹಿಂದೂ ಮತ್ತು ಮುಸ್ಲಿಂ ಎಂಬ ಪದಗಳನ್ನು ತೆಗೆದುಹಾಕುವಂತೆ ಯುಜಿಸಿ ಸಮಿತಿ ಶಿಫಾರಸು ಮಾಡಿದೆ.

ವಿವಿಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಬರುವಂತಹ ಪದಗಳನ್ನು ಅವುಗಳ ಹೆಸರಿನಿಂದ ತೆಗೆದು ಹಾಕಬೇಕು ಎಂದು ಸಮಿತಿ ಸೂಚಿಸಿದೆ.
10 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ಹಾಗೂ ಎಎಂಯುನ ಆಡಿಟ್ ವರದಿ ಕುರಿತು ಶಿಫಾರಸು ಮಾಡಲೆಂದು ಈ ಸಮಿತಿಯನ್ನು ರಚಿಸಲಾಗಿತ್ತು.
ಕೇಂದ್ರೀಯ ನಿಧಿಯಿಂದ ನಡೆಯುವ ಯುನಿವರ್ಸಿಟಿಗಳು ಜಾತ್ಯತೀತ ಸಂಸ್ಥೆಗಳಾಗಿವೆ. ಆದರೆ ಅವುಗಳ ಹೆಸರಿನಲ್ಲಿರುವ ಇಂತಹ ಪದಗಳು ಆ ತತ್ವಕ್ಕೆ ವಿರುದ್ಧವಾಗಿವೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಈ ವಿವಿಗಳ ಹೆಸರುಗಳನ್ನು ಆಲೀಗಢ ವಿವಿ ಮತ್ತು ಬನಾರಸ್ ವಿವಿ ಎಂದು ಕರೆಯಬಹುದು. ಅಥವಾ ಅವುಗಳ ಸಂಸ್ಥಾಪಕರ ಹೆಸರಿನಿಂದ ಕರೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬನಾರಸ್ ಹಿಂದೂ ವಿವಿ ಮತ್ತು ಆಲಿಘಡ್ ಮುಸ್ಲಿಂ ವಿವಿ ಹೊರತುಪಡಿಸಿ ಸಮಿತಿಯು ಪಾಂಡಿಚೆರಿ ವಿಶ್ವವಿದ್ಯಾಲಯ, ಅಲಹಾಬಾದ್ ವಿಶ್ವವಿದ್ಯಾಲಯ, ಹೇಮಾವತಿ ನಂದನ್ ಬಹುಗುಣ ಘರ್ವಾಲ್ ವಿಶ್ವವಿದ್ಯಾಲಯ ಉತ್ತರಖಂಡ, ಸೆಂಟ್ರಲ್ ಯುನಿವರ್ಸಿಟಿ ಜಾರ್ಖಂಡ್, ಸೆಂಟ್ರಲ್ ಯೂನಿವರ್ಸಿಟಿ ರಾಜಸ್ತಾನ್, ಸೆಂಟ್ರಲ್ ಯುನಿವರ್ಸಿಟಿ ಜಮ್ಮು, ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವಿವಿದ್ಯಾಲಯ ವಾರ್ಧ, ತ್ರಿಪುರ ವಿಶ್ವವಿದ್ಯಾಲಯ ಮತ್ತು ಮಧ್ಯಪ್ರದೇಶದ ಹರಿ ಸಿಂಗ್ ಗೌರ್ ವಿಶ್ವವಿದ್ಯಾಲಯಗಳಲ್ಲಿ ಆಡಿಟ್ ನಡೆಸಿತ್ತು.


Click it and Unblock the Notifications











