ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2020 ಇಂಜಿನಿಯರಿಂಗ್ /ಆರ್ಕಿಟೆಕ್ಚರ್/ಕೃಷಿ ವಿಜ್ಞಾನ/ವೆಟರಿನರಿ/ಫಾರ್ಮಾ ಸೈನ್ಸ್ ಕೋರ್ಸ್ ಗಳಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟ ಮಾಡಿದೆ.
ಮೊದಲ ಸುತ್ತಿನ ಸೀಟು ಹಂಚಿಕೆಯ ನಂತರ, ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ವಿವಿಧ ನಾಲ್ಕು ಚಾಯ್ಸ್ ಗಳನ್ನು ನೀಡಲಾಗುವುದು. ಅಭ್ಯರ್ಥಿಗಳು ನಾಲ್ಕು ಚಾಯ್ಸ್ ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು ಚಾಯ್ಸ್ ಅನ್ನು ಆಯ್ಕೆ ಮಾಡುವ ಮೊದಲು, ಪ್ರತಿ ಚಾಯ್ಸ್ ಗಳ ವಿವರಣೆಯನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು, ತಮಗೆ ಸೂಕ್ತವೆನಿಸಿದ ಚಾಯ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ. ನಾಲ್ಕು ಚಾಯ್ಸ್ ಗಳಲ್ಲಿ ಯಾವುದೇ ಚಾಯ್ಸ್ ಅನ್ನು ಆಯ್ಕೆ ಮಾಡದಿರುವ ಅಭ್ಯರ್ಥಿಗಳು ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುವುದಿಲ್ಲ.
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಚಾಯ್ಸ್ 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಡಿಸೆಂಬರ್ 6,2020ರ ಸಂಜೆ 5 ಗಂಟೆಯೊಳಗೆ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಿರುತ್ತದೆ.
ಚಾಯ್ಸ್ 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿಸಿದ ನಂತರ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ದೃಢೀಕರಿಸಿದ ದಾಖಲಾತಿಗಳೊಂದಿಗೆ ಕಾಲೇಜಿನಲ್ಲಿ ಡಿಸೆಂಬರ್ 7,2020ರ ಸಂಜೆ 4 ಗಂಟೆಯೊಳಗೆ ಪ್ರವೇಶ ಪಡೆಯಬೇಕಿರುತ್ತದೆ.
ಯುಜಿಸಿಇಟಿ 2020 ಸೀಟ್ ಹಂಚಿಕೆ ಫಲಿತಾಂಶ ವೀಕ್ಷಿಸುವುದು ಹೇಗೆ? :
ಸ್ಟೆಪ್ 1: ಅಭ್ಯರ್ಥಿಗಳು http://kea-ug.centralindia.cloudapp.azure.com/result-eng-2020-r1-pd/main/results.php ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ ನಿಮ್ಮ ಸಿಇಟಿ ಸಂಖ್ಯೆ ನೀಡಿ ಸಬ್ಮಿಟ್ ಮಾಡಿ
ಸ್ಟೆಪ್ 3: ಫಲಿತಾಂಶವು ಸ್ಕ್ರೀನ್ ಮೇಲೆ ಲಭ್ಯವಾಗುದು ಅದನ್ನು ಸೇವ್ ಮಾಡಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.