
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಯುಜಿಸಿಇಟಿ 2021ರ ಅರ್ಜಿ ತಿದ್ದುಪಡಿಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಕೆಇಎ ಅಧಿಕೃತ ವೆಬ್‌ಸೈಟ್ ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಯುಜಿಸಿಇಟಿ 2021 ಅರ್ಜಿಯಲ್ಲಿ ವಿದ್ಯಾರ್ಥಿಗಳು ತಪ್ಪಾಗಿ ನಮೂದಿಸಿರುವ ಮಾಹಿತಿಯನ್ನು ಆಗಸ್ಟ್ 2 ರಿಂದ ಆಗಸ್ಟ್ 5,2021ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಪರೀಕ್ಷಾ ಸ್ಥಳ ಹೊರತುಪಡಿಸಿ, ಉಳಿದಂತೆ ವಿದ್ಯಾರ್ಥಿಗಳು ತಪ್ಪಾಗಿ ನಮೂದಿಸಿರುವ ಮಾಹಿತಿಗಳನ್ನು ಸರಿಪಡಿಸಬಹುದು ಎಂದು ಕೆಇಎ ಹೇಳಿದೆ.
ವಿಶೇಷ ಪ್ರವರ್ಗದಡಿ ದಾಖಲಾತಿಗಳನ್ನು ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಆಗಸ್ಟ್ 3 ರಿಂದ ಆಗಸ್ಟ್ 6,2021ರ ವರೆಗೆ ಕೆಇಎ, ಬೆಂಗಳೂರು ಕಚೇರಿಯಲ್ಲಿ ತಮ್ಮ ವಿಶೇಷ ಪ್ರವರ್ಗದ ಮೂಲಕ ದಾಖಲಾತಿಗಳನ್ನು ಸಲ್ಲಿಸಬಹುದು.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆಗಾಗ್ಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡುತ್ತಿರತಕ್ಕದ್ದು.
For Quick Alerts
For Daily Alerts


Click it and Unblock the Notifications











