ಭಾರತಾದ್ಯಂತ ಒಟ್ಟು 75 ನೂತನ ವೈದ್ಯಕೀಯ ಕಾಲೇಜು ತೆರೆಯಲು ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 75 ನೂತನ ಮೆಡಿಕಲ್ ಕಾಲೇಜುಗಳನ್ನು ತೆರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
2021-22ರ ವೇಳೆಗೆ ದೇಶದಲ್ಲಿ 75 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ 24, 375 ಕೋಟಿ ರೂಪಾಯಿ ವ್ಯಯಿಸಲಿದೆ ಮತ್ತು ಸುಮಾರು 15,700ಕ್ಕೂ ಅಧಿಕ ಮೆಡಿಕಲ್ ಸೀಟುಗಳು ದೊರೆಯುತ್ತದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅತೀ ದೊಡ್ಡ ಸಕರಾತ್ಮಕ ನಿರ್ಣಯ ಇದಾಗಿದೆ ಎಂದು ಜಾವಡೇಕರ್ ಹೇಳಿದರು.
75 new #MedicalColleges to be set up with expenditure of Rs 24,375 crore@HRDMinistry @airnewsalerts @DDNewsHindi pic.twitter.com/cBiejvoZNf
— Prakash Javadekar (@PrakashJavdekar) August 28, 2019
ಇದರಿಂದ ನಮಗೆ ಹೆಚ್ಚುವರಿ ವೈದ್ಯರು ಸಿಗಲಿದ್ದಾರೆ. ಇದರಿಂದ ಕನಿಷ್ಠ ಮಟ್ಟದ ಆರೋಗ್ಯ ಸೇವೆ ಇರುವಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.