Suresh Angadi Biography: ಸುರೇಶ್ ಅಂಗಡಿಯವರ ಬಗ್ಗೆ ನಿಮಗೊಂದಿಷ್ಟು ಮಾಹಿತಿ

ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವಸುರೇಶ್ ಅಂಗಡಿಯವರು ಕೋವಿಡ್ ಸೋಂಕಿಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ

 

ಸುರೇಶ್ ಅಂಗಡಿಯವರ ಹಿನ್ನೆಲೆ:

ಸುರೇಶ್ ಅಂಗಡಿಯವರು 1955 ರಲ್ಲಿ ಶ್ರೀ ಚೆನ್ನಬಸಪ್ಪ ಮತ್ತು ಶ್ರೀಮತಿ ಸೋಮವ್ವ ದಂಪತಿಗಳಿಗೆ ಬೆಳಗಾಂ ನಲ್ಲಿ ಜನಿಸಿದರು. ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದರು. ನಂತರ ಅವರು ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮೊದಲು ಅವರು ತಮ್ಮದೇ ಆದ ಖಾಸಗಿ ವ್ಯವಹಾರವನ್ನು ನಡೆಸುತ್ತಿದ್ದರು. ಅಂಗಡಿ ಪ್ರತಿಷ್ಠಾನದ ಮೂಲಕ ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಪತ್ನಿ ಮಂಗಳಾ, ಪುತ್ರಿಯಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ

ಸುರೇಶ್ ಅಂಗಡಿಯವರ ರಾಜಕೀಯ ಬದುಕು:

2019 - 2019 ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾಂ ನಿಂದ ಸ್ಪರ್ಧಿಸಿ ಜಯಗಳಿಸಿದರು.

2019 - ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ರೈಲ್ವೆ ಸಚಿವಾಲಕ್ಕೆ ಸೇರಿಸಲಾಯಿತು. 2014 - 16 ನೇ ಲೋಕಸಭೆಗೆ (3 ನೇ ಅವಧಿ) ಮರು ಆಯ್ಕೆಯಾದರು.

 

2014 - ಅವರು ಹೌಸ್ ಕಮಿಟಿಗೆ 12 ಜೂನ್ 2014 ರಿಂದ 19 ಜುಲೈ 2016ರ ವರೆಗೆ ಸದ್ಯಸರಾಗಿದ್ದರು. ಸೆಪ್ಟೆಂಬರ್ 2014ರಲ್ಲಿ ಅರ್ಜಿಗಳ ಸಮಿತಿ ಸದಸ್ಯ, ರಕ್ಷಣಾ ಸದಸ್ಯರ ಸ್ಥಾಯಿ ಸಮಿತಿ, ಸಮಾಲೋಚನಾ ಸಮಿತಿ, ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ದಲ್ಲಿ ಸದಸ್ಯರಾಗಿದ್ದರು.

2009 - ಮಾನವ ಸ್ಥಾಯಿ ಸಮಿತಿ ಸಂಪನ್ಮೂಲ ಅಭಿವೃದ್ಧಿ ಯಲದಲಿ 31 ಆಗಸ್ಟ್ 2009 ರಿಂದ ಮೇ 2014ರ ವರೆಗೆ ಸದಸ್ಯರಾದರು. ಪಿಂಚಣಿ ವೇತನ ಮತ್ತು ಸಂಸತ್ತಿನ ಸದಸ್ಯರ ಭತ್ಯೆಗಳ ಜಂಟಿ ಸಮಿತಿ ಮತ್ತು ಕೇಂದ್ರ ನೇರ ತೆರಿಗೆಗಳ ಸಲಹಾ ಸಮಿತಿಗಳಿಗೆ 23 ಸೆಪ್ಟೆಂಬರ್ 2009 ರಿಂದ - ಮೇ 2014ರ ವರೆಗೆ ಸದಸ್ಯರಾದರು.

2016 - ಜುಲೈ 19, 2016 ರಂದು ಸದನ ಸಮಿತಿಯ ಅಧ್ಯಕ್ಷರಾದರು.

2009 - ಅದೇ ಕ್ಷೇತ್ರದಿಂದ 15 ನೇ ಲೋಕಸಭೆಗೆ ಮರು ಆಯ್ಕೆಯಾದರು.

2004 - ಸುರೇಶ್ ಅಂಗಡಿ ಬೆಳಗಾಂನಿಂದ 14 ನೇ ಲೋಕಸಭೆಗೆ ಆಯ್ಕೆಯಾದರು.

2004 - ಆಹಾರ, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯ ಸದಸ್ಯರಾದರು.

2004 - ಸಲಹಾ ಸಮಿತಿ, ಹಣಕಾಸು ಸಚಿವಾಲಯದ ಸದಸ್ಯರಾದರು.

2001 - ಬೆಳಗಾವಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದರು.

2000 - ಬೆಳಗಾಂ ಜಿಲ್ಲೆಯ ಛೇಂಬರ್ ಆಫ್ ಕಾಮರ್ಸ್ ನಲ್ಲಿ ಕಾರ್ಯನಿರ್ವಾಹಕ ಸದಸ್ಯರಾದರು.

1996 - ಬೆಳಗಾಂ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದರು.

For Quick Alerts
ALLOW NOTIFICATIONS  
For Daily Alerts

English summary
union minister suresh angadi passes away due to covid 19. here we are giving information about his biography and political life.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X