Reopening Of Schools In India: ಈ ರಾಜ್ಯಗಳಲ್ಲಿ ಅಕ್ಟೋಬರ್ 15ರ ನಂತರ ಶಾಲಾ ಕಾಲೇಜುಗಳು ಆರಂಭ

ಅ.15 ರಿಂದ ಯಾವೆಲ್ಲಾ ರಾಜ್ಯಗಳಲ್ಲಿ ಶಾಲೆ ಆರಂಭವಾಗುತ್ತೆ ಗೊತ್ತಾ !..

ಅಕ್ಟೋಬರ್ 1 ರಿಂದ ಅನ್‌ಲಾಕ್ 5.0 ಜಾರಿಯಾಗಿದ್ದು, ಅಕ್ಟೋಬರ್ 15 ರಿಂದ ಶಾಲೆ ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ಕೇಂದ್ರ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಯಾವೆಲ್ಲಾ ರಾಜ್ಯಗಳು ಅಕ್ಟೋಬರ್ 15 ರಿಂದ ಶಾಲೆ ಆರಂಭಿಸಲು ಮುಂದಾಗಿವೆ ಎಂದು ತಿಳಿಯಬೇಕಾ ಇಲ್ಲಿದೆ ಮಾಹಿತಿ.

ಪಂಜಾಬ್:

ಪಂಜಾಬ್:

ಅಕ್ಟೋಬರ್ 15ರಿಂದ ಶಾಲೆಗಳನ್ನು ಆರಂಭ ಮಾಡಲು ಪಂಜಾಬ್ ಸರ್ಕಾರ ಮತ್ತೆ ಹೊಸ ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಅದರ ಅನ್ವಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ನಡೆಯಲಿದ್ದು, ಒಂದು ತರಗತಿಯಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಎಂದು ಸೂಚಿಸಿದೆ.

ಉತ್ತರಪ್ರದೇಶ:

ಉತ್ತರಪ್ರದೇಶ:

ಅಕ್ಟೋಬರ್ 19,2020 ರಿಂದ 9 ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸುವುದಾಗಿ ಉತ್ತರಪ್ರದೇಶ ಸರ್ಕಾರ ಅ.10ರಂದು ಘೋಷಿಸಿತ್ತು.

ಚತ್ತೀಸ್ ಗಡ್:

ಚತ್ತೀಸ್ ಗಡ್:

ರಾಜ್ಯ ಸರ್ಕಾರ ಶಾಲೆ ಮತ್ತು ಕಾಲೇಜುಗಳನ್ನು ಸದ್ಯಕ್ಕೆ ಆರಂಭಿಸದಿರಲು ತೀರ್ಮಾನಿದೆ. ದೀಪಾವಳಿ ನಂತರ ಶಾಲಾ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ.

ಮೇಘಾಲಯ:

ಮೇಘಾಲಯ:

ಶಾಲಾ ಪುನರಾರಂಭದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪೋಷಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಮೇಘಾಲಯ ಸರ್ಕಾರ ಮನವಿ ಮಾಡಿಕೊಂಡಿದೆ. 6, 7 ಮತ್ತು 8ನೇ ತರಗತಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ಲಾಹ್ ಮೆನ್ ರಿಂಬೈ ತಿಳಿಸಿದ್ದಾರೆ.

ಗುಜರಾತ್:

ಗುಜರಾತ್:

ಶಾಲಾ, ಕಾಲೇಜು ಆರಂಭಿಸದಿರಲು ತೀರ್ಮಾನಿಸಿವೆ. ದೀಪಾವಳಿ ನಂತರ ಶಾಲಾ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ.

ಆಂಧ್ರಪ್ರದೇಶ:

ಆಂಧ್ರಪ್ರದೇಶ:

ನವೆಂಬರ್ 2,2020ರ ಮುಂಚಿತವಾಗಿ ಶಾಲೆ ಮತ್ತು ಕಾಲೇಜುಗಳನ್ನು ಆರಂಭ ಮಾಡದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ.

ಪಶ್ಚಿಮಬಂಗಾಳ:

ಪಶ್ಚಿಮಬಂಗಾಳ:

ಶಾಲೆ ಮತ್ತು ಕಾಲೇಜು ಅರಂಭದ ಬಗ್ಗೆ ನವೆಂಬರ್ ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ:

ಮಹಾರಾಷ್ಟ್ರ:

ಶಾಲಾ, ಕಾಲೇಜು ಆರಂಭಿಸದಿರಲು ತೀರ್ಮಾನಿಸಿವೆ. ದೀಪಾವಳಿ ನಂತರ ಶಾಲಾ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ.

ಹರ್ಯಾಣ ಮತ್ತು ಮೇಘಾಲಯ ಶಾಲೆ ಆರಂಭದ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ದಿಲ್ಲಿ, ಕರ್ನಾಟಕ ಮತ್ತು ಚತ್ತೀಸ್ ಗಢ್ ರಾಜ್ಯಗಳು ಶಾಲೆ ಆರಂಭಿಸದಿರಲು ನಿರ್ಧರಿಸಿವೆ.

More News  

For Quick Alerts
ALLOW NOTIFICATIONS  
For Daily Alerts

English summary
Unlock 5.0 In these states schools and colleges will reopen after October 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+