ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಶಿಕ್ಷಣದ ಬಗ್ಗೆ ಸಂಭಾವ್ಯ ಪ್ರಣಾಳಿಕೆ(ಭಾಗ 3)ಯನ್ನು ಬಿಡುಗಡೆ ಮಾಡಿದ್ದಾರೆ.
ಶಿಕ್ಷಣದ ಬಗ್ಗೆ ವಿಶಿಷ್ಟ ಯೋಜನೆಗಳನ್ನು ರೂಪಿಸಿರುವ ಸೂಪರ್ ಸ್ಟಾರ್ ಪ್ರಣಾಳಿಕೆ ಓದಿ ಅಭಿಪ್ರಾಯ ಹಾಗೂ ಸಲಹೆ ಹಂಚಿಕೊಳ್ಳುವಂತೆ ಟ್ವೀಟ್ ಮಾಡಿದ್ದಾರೆ.
ಉಪ್ಪಿ ಸೂಪರ್ ಶಿಕ್ಷಣ
ಮನೆಯೇ ಮೊದಲ ಪಾಠ ಶಾಲೆ ಅನ್ನುವ ಉಪೇಂದ್ರ ಶಿಕ್ಷಣದ ಬಗ್ಗೆ ವಿಶೇಷವಾಗಿ ಆಲೋಚಿಸಿದ್ದಾರೆ.
ಸೂಪರ್ ಶಿಕ್ಷಣ 1
ಸರ್ಕಾರಿ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಗುಣಮಟ್ಟ ಏರಿಸುವುದು
ಓದುವುದು, ಬರೆಯುವುದು ಇರುವುದಿಲ್ಲ.
ಒಂದು ಮತ್ತು ಎರಡನೇ ತರಗತಿ ಶಾಲಾ ಮಕ್ಕಳಿಗೆ ಓದುವುದು, ಬರೆಯುವುದು ಇರುವುದಿಲ್ಲ. ಆಟಕ್ಕೆ ಒತ್ತು ನೀಡಲಾಗುವುದು.
ಪುಸ್ತಕದ ಜತೆಗೆ ಟ್ಯಾಬ್ಲೆಟ್
ಮೂರನೇ ತರಗತಿಯಿಂದ ಪುಸ್ತಕದ ಜತೆಗೆ ಟ್ಯಾಬ್ಲೆಟ್. ಸಾಮಾನ್ಯಜ್ಞಾನ, ವಿಜ್ಞಾನ, ಗಣಿತ ಕಲಿಕೆ ಹಾಗೂ ಸ್ಮಾರ್ಟ್ ಕ್ಲಾಸ್‌ಗೆ ಸಹಕಾರಿ.
ಆನ್‌ಲೈನ್ ಕಲಿಕೆ
ಮನೆಯಲ್ಲಿಯೇ ಕಲಿಕೆ, ಮನೆಯಿಂದಲೇ ಆನ್‌ಲೈನ್ ಕಲಿಕೆಗೆ ಅವಕಾಶ.
ವೃತ್ತಿಪರ ಕೋರ್ಸ್
10ನೇ ತರಗತಿ ಬಳಿಕ ಒಂದು ಅಥವಾ ಎರಡು ವರ್ಷ ವೃತ್ತಿಪರ ಕೋರ್ಸ್
ಮೆರಿಟ್ ಆಧಾರದಲ್ಲಿ ಉಚಿತ ಶಿಕ್ಷಣ
ಮೆರಿಟ್ ಆಧಾರದಲ್ಲಿ ಶೇ.10-15ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ.
ಕನ್ನಡದಲ್ಲಿ ವೃತ್ತಿಪರ ಕೋರ್ಸ್
ಕನ್ನಡದಲ್ಲಿಯೇ ವೃತ್ತಿಪರ ಕೋರ್ಸ್‌ಗಳಿಗೆ ಅವಕಾಶ.


Click it and Unblock the Notifications











