ಕೇಂದ್ರ ಲೋಕಾ ಸೇವಾ ಆಯೋಗವು ಇದೀಗ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಪರೀಕ್ಷೆ (II) ರ ಪ್ರವೇಶ ಪತ್ರ ರಿಲೀಸ್ ಮಾಡಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯುಪಿಎಸ್ ಸಿ ಸಿಡಿಎಸ್ (II) ಪರೀಕ್ಷೆ ಪ್ರವೇಶ ಪತ್ರ ಇದೀಗ ರಿಲೀಸ್ ಆಗಿದ್ದು, ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕ ನವಂಬರ್ 18, 2018.

ಯುಪಿಎಸ್ ಸಿ ಸಿಡಿಎಸ್ (II) ಪರೀಕ್ಷೆಯು ನವಂಬರ್ 11, 2018 ಭಾನುವಾರದಂದು ನಡೆಯಲಿದೆ. ಇಂಡಿಯನ್ ನೇವಲ್ ಅಕಾಡೆಮಿ, ಇಂಡಿಯನ್ ಮಿಲಿಟರಿ ಅಕಾಡೆಮಿ, ಏರ್ ಫೋರ್ಸ್ ಅಕಾಡೆಮಿ ಮತ್ತು ಆಫೀಸರ್ ಟ್ರೈನಿಂಗ್ ಅಕಾಡೆಮಿಗೆ ಅಭ್ಯರ್ಥಿಗಳನ್ನ ನೇಮಕ ಮಾಡಲು ಕೇಂದ್ರ ಲೋಕಾ ಸೇವಾ ಆಯೋಗವು ಈ ಪರೀಕ್ಷೆಯನ್ನ ಆಯೋಜಿಸುತ್ತಿದೆ.
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:
- ಸ್ಟೆಪ್ 1 : ಕೇಂದ್ರ ಲೋಕಾ ಸೇವಾ ಆಯೋಗ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2 : ಹೋಮ್ ಪೇಜ್ ನಲ್ಲಿ ಇರುವ ಅಡ್ಮಿಟ್ ಕಾರ್ಡ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3 : ಯುಪಿಎಸ್ ಸಿ ಸಿಡಿಎಸ್ (II) ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4 : ಹೊಸ ಪೇಜ್ ತೆರೆದುಕೊಳ್ಳುತ್ತದೆ
- ಸ್ಟೆಪ್ 5 : ರಿಜಿಸ್ಟ್ರೇಶನ್ ಐಡಿ ಹಾಗೂ ರೋಲ್ ನಂಬರ್ ಎಂದು ಎರಡು ಆಯ್ಕೆ ನಿಮ್ಮ ಮುಂದೆ ಮೂಡುತ್ತದೆ
- ಸ್ಟೆಪ್ 6 : ಯಾವುದಾದ್ರೂ ಒಂದು ಆಯ್ಕೆ ಸೆಲೆಕ್ಟ್ ಮಾಡಿ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ
- ಸ್ಟೆಪ್ 7 : ಅಡ್ಮಿಟ್ ಕಾರ್ಡ್ ಮೂಡಲಿದ್ದು, ಅದನ್ನ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
For Daily Alerts
English summary
The Union Public Service Commission has released the Combined Defence Services examination 2018 admit card. The candidates can visit the official website and download the admit card. The Last date to download the admit card is November 18, 2018.
Story first published: Saturday, October 27, 2018, 12:37 [IST]


Click it and Unblock the Notifications











