UPSC CGS Main Exam 2022 Date : ಯುಪಿಎಸ್ಸಿ ಸಿಜಿಎಸ್ ಮುಖ್ಯ ಪರೀಕ್ಷೆಯ ದಿನಾಂಕ ಘೋಷಣೆ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಕಂಬೈನ್ಡ್ ಜಿಯೋಸೈಂಟಿಸ್ಟ್ ಹುದ್ದೆಗಳ ಮುಖ್ಯ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಇದೀಗ ವೇಳಾಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು.

ಯುಪಿಎಸ್ಸಿ ಸಿಜಿಎಸ್ ಮುಖ್ಯ ಪರೀಕ್ಷೆಯ ದಿನಾಂಕ ಪ್ರಕಟ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 192 ಕಂಬೈನ್ಡ್ ಜಿಯೋಸೈಂಟಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅಕ್ಟೋಬರ್ 12,2021ರ ಸಂಜೆ 6 ಗಂಟೆಯೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಪರೀಕ್ಷೆ, ಪ್ರಮುಖ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈಗಾಗಲೇ ಪ್ರಿಲಿಮಿನರಿ ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದೆ. ಇದೀಗ ಮುಖ್ಯ್ ಪರೀಕ್ಷೆಯನ್ನು ಜೂನ್ 25 ಮತ್ತು 26,2022ರಂದು ನಡೆಸುವುದಾಗಿ ಘೋಷಿಸಿದೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದೀಗ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನ ಸುತ್ತಿಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಯುಪಿಎಸ್ಸಿ ಸಂಯೋಜಿತ ಭೂ-ವಿಜ್ಞಾನಿ ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಜಿಯೋಲಜಿಕಲ್ ಸೈನ್ಸ್/ಜಿಯೋಲಜಿ/ಅನ್ವಯಿಕ ಭೂವಿಜ್ಞಾನ ಇತ್ಯಾದಿಗಳಲ್ಲಿ ಸ್ನಾತಕೋತ್ತರ ಪದವಿ ; ಭೌತಶಾಸ್ತ್ರದಲ್ಲಿ ಎಂ.ಎಸ್ಸಿ/ಅಪ್ಲೈಡ್ ಫಿಸಿಕ್ಸ್/ಎಂ.ಎಸ್ಸಿ. (ಜಿಯೋಫಿಸಿಕ್ಸ್) ಇತ್ಯಾದಿ; ರಸಾಯನಶಾಸ್ತ್ರ/ಅಪ್ಲೈಡ್ ಕೆಮಿಸ್ಟ್ರಿ/ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಮತ್ತು ಭೂವಿಜ್ಞಾನ/ಭೂವಿಜ್ಞಾನ/ಸಾಗರ ಭೂವಿಜ್ಞಾನ ಅಥವಾ ಜಲವಿಜ್ಞಾನದಲ್ಲಿ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಯುಪಿಎಸ್‌ಸಿ ಸಂಯೋಜಿತ ಜಿಯೋ-ಸೈಂಟಿಸ್ಟ್ ನೇಮಕಾತಿ 2021 ಮೂಲಕ ಯುಪಿಎಸ್‌ಸಿ ಕಂಬೈನ್ಡ್ ಜಿಯೋ-ಸೈಂಟಿಸ್ಟ್ ಪರೀಕ್ಷೆ 2021ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ವರ್ಷಗಳನ್ನು ಪೂರೈಸಿದವರಾಗಿರಬೇಕು ಮತ್ತು ಜನವರಿ 1,2022ರ ವೇಳೆಗೆ 32 ವರ್ಷಗಳನ್ನು ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಅಧಿಸೂಚನೆಯಲ್ಲಿ ತಿಳಿಸಿರುವಂತೆ 3 ವರ್ಷಗಳು (OBC) ಮತ್ತು 5 ವರ್ಷಗಳು (SC/ST) ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಅಭ್ಯರ್ಥಿಗಳು ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
UPSC released combined geo-scientist main exam 2022 dates. Here is the dates.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+