UPSC Civil Service 2021 Final Result : 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ ಪ್ರಕಟ

ಕೇಂದ್ರ ನಾಗರಿಕ ಸೇವಾ ಆಯೋಗವು 2021ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಇಂದು ಪ್ರಕಟ ಮಾಡಲಾಗಿದೆ. ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯನ್ನು ಆಧರಿಸಿ ಮುಂದಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಶಿಫಾರಸ್ಸು ಕಳುಹಿಸಲಾಗುತ್ತದೆ.

ಯುಪಿಎಸ್ಸಿ ಫಲಿತಾಂಶ ಪ್ರಕಟ..ಹಾಗಾದ್ರೆ ಟಾಪರ್ಸ್ ಯಾರು ?

ಯುಪಿಎಸ್ಸಿ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ 17 ರಂದು ಪ್ರಕಟಿಸಲಾಯಿತು ಮತ್ತು ಅದರಲ್ಲಿ ಉತ್ತೀರ್ಣರಾದವರನ್ನು ಏಪ್ರಿಲ್ 5 ರಿಂದ ಮೇ 26, 2022 ರವರೆಗೆ ಸಂದರ್ಶನ ಸುತ್ತಿಗೆ (ವ್ಯಕ್ತಿತ್ವ ಪರೀಕ್ಷೆ) ಕರೆಯಲಾಯಿತು.

ಒಟ್ಟು 685 ಅಭ್ಯರ್ಥಿಗಳನ್ನು UPSC ನೇಮಕಾತಿಗೆ ಶಿಫಾರಸು ಮಾಡಿದೆ. ಇವರಲ್ಲಿ 244 ಸಾಮಾನ್ಯ, 73 EWS, 203 OBC, 105 SC ಮತ್ತು 60 ST ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ.

ಅಧಿಕೃತ ಸೂಚನೆಯ ಪ್ರಕಾರ, ಶ್ರುತಿ ಶರ್ಮಾ ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಫಲಿತಾಂಶದ ಟಾಪರ್ಸ್ ಪಟ್ಟಿ ಮತ್ತು ಫಲಿತಾಂಶವನ್ನು ವೀಕ್ಷಿಸುವುದು ಹೇಗೆ ಇಲ್ಲಿ ತಿಳಿಯಿರಿ.

UPSC ಸಿವಿಲ್ ಸರ್ವೀಸ್ ಅಂತಿಮ ಫಲಿತಾಂಶ 2021 ಟಾಪರ್‌ಗಳ ಪಟ್ಟಿ :

ಅಧಿಕೃತ ಸೂಚನೆಯ ಪ್ರಕಾರ, ಶ್ರುತಿ ಶರ್ಮಾ ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆ 2021 ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ನಂತರ ಅಂಕಿತಾ ಅಗರ್ವಾಲ್ ಎರಡನೇ ಸ್ಥಾನದಲ್ಲಿ ಮತ್ತು ಗಾಮಿನಿ ಸಿಂಗ್ಲಾ ಮೂರನೇ ಸ್ಥಾನದಲ್ಲಿದ್ದಾರೆ.

ಯುಪಿಎಸ್ಸಿ ಫಲಿತಾಂಶ ಪ್ರಕಟ..ಹಾಗಾದ್ರೆ ಟಾಪರ್ಸ್ ಯಾರು ?

ಯುಪಿಎಸ್ಸಿ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ 2021 ಅನ್ನು ವೀಕ್ಷಿಸುವುದು ಹೇಗೆ ?

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "UPSC ನಾಗರಿಕ ಸೇವೆಗಳ ಫಲಿತಾಂಶ 2021 -ಅಂತಿಮ ಫಲಿತಾಂಶ" ಕ್ಲಿಕ್ ಮಾಡಿ
ಸ್ಟೆಪ್ 3: ಆಯ್ದ ಅಭ್ಯರ್ಥಿಗಳ ವಿವರಗಳೊಂದಿಗೆ PDF ಫೈಲ್ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ
ಸ್ಟೆಪ್ 4: ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಯುಪಿಎಸ್ಸಿ ನಾಗರಿಕ ಸೇವೆಗಳ ಅಂತಿಮ ಫಲಿತಾಂಶ 2021 ಅನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
UPSC released civil services exam 2021 final results and here we are giving toppers list in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+