
ಕೇಂದ್ರ ಲೋಕ ಸೇವಾ ಆಯೋಗವು 2020ರ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಇಂದು ಪ್ರಕಟ ಮಾಡಿದ್ದು, ಕರ್ನಾಟಕದ 18 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಇಂದು ಸಂಜೆ ಯುಪಿಎಸ್ಸಿ 2020ರ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶುಭಮ್ ಕುಮಾರ್ ಅವರು ಪ್ರಥಮ ರ್ಯಾಂಕ್ ಅನ್ನು ಪಡೆದಿದ್ದಾರೆ. ಜಾಗ್ರತಿ ಅವಸ್ತಿ ಮತ್ತು ಅಂಕಿತಾ ಜೈನ್ ಅವರು ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಯುಪಿಎಸ್ಸಿ ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಈ ಪೈಕಿ 545 ಮಂದಿ ಪುರುಷರು ಹಾಗೂ 216 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಟಾಪ್ 25ರಲ್ಲಿ 13 ಜನ ಪುರುಷರು ಹಾಗೂ 12 ಜನ ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಬಾರಿ 25 ವಿಶೇಷ ಚೇತನ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಈ ಪೈಕಿ ಕರ್ನಾಟಕದ 18 ಮಂದಿ ತೇರ್ಗಡೆಯಾಗಿದ್ದಾರೆ.
ಜನವರಿ 8 ರಿಂದ ಜನವರಿ 17ರವರೆಗೆ ನಡೆದ ಮುಖ್ಯ ಲಿಖಿತ ಪರೀಕ್ಷೆ ಮತ್ತು ಆಗಸ್ಟ್ 2ರಿಂದ ಸೆಪ್ಟೆಂಬರ್ 22ರವರೆಗೆ ನಡೆದ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಲಿಖಿತ ಪರೀಕ್ಷೆಗೆ ಮೊದಲು, ಪ್ರಾಥಮಿಕ ಪರೀಕ್ಷೆ ಅಕ್ಟೋಬರ್ 2020ರಲ್ಲಿ ನಡೆದಿತ್ತು. ಅರ್ಹತೆ ಪಡೆದ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಶಾರ್ಟ್ಲಿಸ್ಟ್ ಮಾಡಲಾಗಿದೆ. ಒಟ್ಟು 2,046 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್ಲಿಸ್ಟ್ ಮಾಡಲಾಗಿತ್ತು.
ರ್ಯಾಂಕ್ ಪಡೆದ ಕರ್ನಾಟಕದ 18 ಅಭ್ಯರ್ಥಿಗಳು:
ಅಕ್ಷಯ್ ಸಿಂಹ ಕೆ.ಜೆ - 77
ನಿಶ್ಚಯರ್ ಪ್ರಸಾದ್ ಎಂ-130
ಸಿರಿವೆನ್ನೆಲ-204
ಅನಿರುದ್ದ್ ಆರ್ ಗಂಗಾವರಂ-252
ಸೂರಜ್ ಡಿ-255
ನೇತ್ರಾ ಮೇಟಿ-326
ಮೇಘಾ ಜೈನ್-354
ಪ್ರಜ್ವಲ್-367
ಸಾಗರ್ ಎ ವಾಡಿ-385
ನಾಗರಗೊಜೆ ಶುಭಂ-453
ಬಿಂದು ಮಣಿ ಆರ್.ಎನ್-468
ಶಕೀರ್ ಅಹ್ಮದ್ ತೊಂಡಿಖಾನ್-583
ಪ್ರಮೋದ್ ಆರಾಧ್ಯ ಎಚ್.ಆರ್-601
ಸೌರಬ್ ಕೆ-725
ವೈಶಾಖ್ ಬಗೀ-744
ಸಂತೋಶ ಎಚ್-751
ಯುಪಿಎಸ್ ಸಿ ಸಿವಿಲ್ ಸರ್ವೀಸ್ 2020: ಫಲಿತಾಂಶ ವೀಕ್ಷಿಸುವುದು ಹೇಗೆ ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "ನಾಗರಿಕ ಸೇವೆ ಮುಖ್ಯ ಪರೀಕ್ಷೆ ಅಂತಿಮ ಫಲಿತಾಂಶ -2020" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಸ್ಕ್ರೀನ್ ಮೇಲೆ ಮೂಡುವುದು
ಸ್ಟೆಪ್ 4: ಅಭ್ಯರ್ಥಿಗಳು ಫಲಿತಾಂಶದ ಲೀಸ್ಟ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬಹುದು.